ಸಾಧನೆಗೆ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ

ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಅವರನ್ನು ಸನ್ಮಾನಿಸಲಾಯಿತು. ರವಿ ಹಿರೇಮಠ, ಎಸ್.ಎಸ್.ಕಾಂಬಳೆ, ಎಂ.ಸಿ.ಬಿರಾದಾರ, ಎಸ್.ಎಸ್.ಶಿವನಾಯಕರ ಇತರರಿದ್ದರು.
ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಅವರನ್ನು ಸನ್ಮಾನಿಸಲಾಯಿತು. ರವಿ ಹಿರೇಮಠ, ಎಸ್.ಎಸ್.ಕಾಂಬಳೆ, ಎಂ.ಸಿ.ಬಿರಾದಾರ, ಎಸ್.ಎಸ್.ಶಿವನಾಯಕರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಮೂಲಕ ಶಿಕ್ಷಕರು ತಮ್ಮ ವ್ಯಕ್ತಿತ್ವ ವಿಕಸನಗೊಳಿಸುವ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಸ್ಥಾಪಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ತರಬೇತಿ ಪಡೆದ ಶಿಕ್ಷಕರು ಶಾಲೆಗಳಲ್ಲಿ ಘಟಕ ನಡೆಸಿ ಅವುಗಳನ್ನು ಸಕ್ರಿಯವಾಗಿರಿಸಬೇಕು. ತಾಲೂಕಿನಲ್ಲಿ ಪ್ರತಿ ವರ್ಷ 50-60 ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ರವಿ ಹಿರೇಮಠ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಕಾಂಬಳೆ, ಎಂ.ಸಿ.ಬಿರಾದಾರ, ಬಿಆರ್‌ಪಿ ಎಸ್.ಎಸ್.ಶಿವನಾಯಕರ, ಬಿ.ಡಿ.ಪಾಟೀಲ, ಪುಷ್ಪಾ ಶಿಂತ್ರಿ, ಸಿಆರ್‌ಪಿ ಮಾಲತೇಶ ಜಕಲಿ, ರವಿ ತುರುಮರಿ, ಎಸ್.ಎಸ್.ಪಾಟೀಲ, ಐಇಆರ್‌ಟಿ ರಮೇಶ ಇಂಗಳಗಿ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಮಹಾಂತೇಶ ಮರಗೋಡ, ಬಸವರಾಜ ಚನ್ನಣ್ಣವರ,ಎಸ್.ಬಿ.ಹಿಡಕಲ್ಲ, ಅಶ್ವಿನಿ ಬಿರಾದಾರ, ದಾಕ್ಷಾಯಿಣಿ ಕಬ್ಬೂರು, ಚನ್ನಗೌಡ ಪಾಟೀಲ, ಶ್ರೀಶೈಲ ಹಿರೇಮಠ ಇತರರಿದ್ದರು. ಅಜ್ಜಪ್ಪ ಅಂಗಡಿ ನಿರೂಪಿಸಿದರು. ಪ್ರಕಾಶ ಪೂಜಾರ ಸ್ವಾಗತಿಸಿದರು. ಸಿದ್ದನಗೌಡ ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net