ನಿವೃತ್ತ ಡೀನ್ ಅಮರನಾಥ ಸೋಲಪುರೆ, ಸೊಲ್ಲಾಪುರದ ವಿಜಯಕುಮಾರ ಹತ್ತೂರೆ, ನಾಂದೇಡದ ಪ್ರೊ.ಶೇಷವರಾವ ಸೇಟೆ, ರೇಣುಕಾ ಹೋಗ್ತಾಪುರೆ, ಕವಿತಾ ರಾಜೋಳೆ ಮಾತನಾಡಿದರು. ಹರಳಯ್ಯ ಸಮಾಜದ ಮುಖಂಡ ಸುಧಾಕರ ಗೋಖಲೆ ಧ್ವಜಾರೋಹಣ ನೆರವೇರಿಸಿದರು. ಗಂಗಾಂಬಿಕಾ ಮಡಿವಾಳ ಸ್ವಾಗತಿಸಿದರು. ಶ್ರೀಶೈಲಾ ವಡ್ಡೆ ನಿರೂಪಣೆ ಮಾಡಿದರು. ಸಂಸತಿ ರಾಜೇಶ್ವರ ಗುರುಪೂಜೆ ನಡೆಸಿಕೊಟ್ಟರು. ಉಷಾ ಶಿವಶಂಕರ ಕನ್ನಾಡೆ ಪ್ರಸಾದ ದಾಸೋಹ ವ್ಯವಸ್ಥೆ ಮಾಡಿದರು. ಮಕ್ಕಳ ವಚನ ಗಾಯನ, ನೃತ್ಯ, ಪಠಣ ನೋಡುಗರ ಗಮನ ಸೆಳೆಯಿತು.