ಈ ವೇಳೆ ವಾಹನಗಳ ಅಗತ್ಯ ದಾಖಲಾತಿಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ ಸೇರಿ ವಿವಿಧ ದಾಖಲೆಗಳು ಹಾಗೂ ಬಸ್ಗಳಲ್ಲಿ ಅಳವಡಿಸಲಾದ ಸುರಕ್ಷಿತಾ ಕ್ರಮಗಳಾದ ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಉಪಕರಣ, ಫಸ್ಟ್ ಏಡ್ ಬಾಕ್ಸ್, ಸಿಸಿಟಿವಿ ಕ್ಯಾಮೆರಾ, ಸ್ಪೀಡ್ ಗವರ್ನರ್ ಸೇರಿ ವಿದ್ಯಾರ್ಥಿಗಳ ಭದ್ರತೆಗೆ ಅಗತ್ಯ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಪರಿಶೀಲಿಸಿದರು.