ರಸ್ತೆ ದುರಸ್ತಿ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿಯಲ್ಲಿ ಶುಕ್ರವಾರ ಮಿಂಚಿನ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಂಚಾರಿ ಡಿಎಸ್​ಪಿ ಸುಧಾ ಆದಿ, ಸಿಪಿಐ ಶಕೀಲ್​ ಅಂಗಡಿ ಇತರರಿದ್ದರು.
ಕಲಬುರಗಿಯಲ್ಲಿ ಶುಕ್ರವಾರ ಮಿಂಚಿನ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಂಚಾರಿ ಡಿಎಸ್​ಪಿ ಸುಧಾ ಆದಿ, ಸಿಪಿಐ ಶಕೀಲ್​ ಅಂಗಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುಣಮಟ್ಟ ಕಾಯ್ದುಕೊಳ್ಳಿ ಶ್ರೀ ಪೂರ್ಣಗೊಳಿಸಿ
  • ಕಲಬುರಗಿ ಜಿಲ್ಲಾಧಿಕಾರಿಗಳಿಂದ ನಗರ ಪ್ರದಕ್ಷಿಣೆ
ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಶುಕ್ರವಾರ ಕಲಬುರಗಿ ನಗರದಲ್ಲಿ ಮಿಂಚಿನ ಸಂಚಾರ ನಡೆಸಿ, ಮಹಾನಗರ ಪಾಲಿಕೆಯಿಂದ ನಡೆಯುತ್ತಿರುವ ರಸ್ತೆ ಸುಧಾರಣೆ, ದುರಸ್ತಿ, ಒಳಚರಂಡಿ ನಿರ್ಮಾಣ, ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದರು.
ಹಳೇ ಜೇವರ್ಗಿ ರಸ್ತೆಯ ಮೋಹನ ಲಾಡ್ಜ್​ನಿಂದ ರಾಮ ಮಂದಿರ ಸರ್ಕಲ್​ವರೆಗೆ ಎನ್​.ಸಿ.ಎ.ಪಿ ಯೋಜನೆಯಡಿ ಸುಮಾರು 1.20 ಕೋಟಿ ರೂ.ವೆಚ್ಚದೊಂದಿಗೆ ಮೂರು ವರ್ಷಗಳ ನಿರ್ವಹಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಸುಮಾರು 87 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ಮಶೀನ್​ಗಳಿಂದ ನಡೆಯುತ್ತಿರುವ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿವೀಸಿದರು.
ನ್ಯಾಷನಲ್​ ಗ್ರೀನ್​ ಟ್ರಿಬ್ಯೂನಲ್​ ಯೋಜನೆಯಡಿ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ರ್ಖಗೆ ಪೆಟ್ರೋಲ್​ ಪಂಪ್​ನಿಂದ ಅನ್ನ ಪೂರ್ಣ ಕ್ರಾಸ್​ ರಸ್ತೆಯ ಸ್ವದೇಶಿ ಭವನವರೆಗೆ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪಾಲಿಕೆ ಆಯುಕ್ತ ಅವಿನಾಶ ಶಿಂಧೆಯವರೊಂದಿಗೆ ಪರಿಶೀಲಿಸಿದರು. ರ್ಖಗೆ ಪೆಟ್ರೋಲ್​ ಪಂಪ್​ ಮತ್ತು ರಾಮ ಮಂದಿರ ಸರ್ಕಲ್​ನಲ್ಲಿನ ಸಂಚಾರಿ ಸಿಗ್ನಲ್​ಗಳನ್ನು ಒಂದು ವಾರದೊಳಗೆ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಾಲ್ಕು ಸರ್ಕಲ್​ ಸೌಂದಯೀರ್ಕರಣ

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಗರದ ರಾಮ ಮಂದಿರ ಸರ್ಕಲ್​, ಅಫಜಲಪೂರ ಸರ್ಕಲ್​, ಆಳಂದ ರಸ್ತೆ, ಹುಮನಾಬಾದ ರಸ್ತೆ ಸರ್ಕಲ್​ಗಳನ್ನು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸೌಂದಯೀರ್ಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿ.ಫೌಜಿಯಾ ತರನ್ನುಮ್​ ಅವರು ಶುಕ್ರವಾರ ರಾಮಮಂದಿರ ಸರ್ಕಲ್​ ಸ್ಥಳವನ್ನು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಪ್ರಾಧಿಕಾರದ ಪ್ರಭಾರಿ ಆಯುಕ್ತ ಶಿವಕುಮಾರ ಪಾಟೀಲ, ಎಇಇ ಸುಭಾಷ ನಾಯಕ್​ ಸ್ಥಳದಲ್ಲಿದ್ದು, ಯೋಜನೆ ಕುರಿತು ಡಿಸಿಗೆ ಮಾಹಿತಿ ನೀಡಿದರು. ಪಾಲಿಕೆಯಿಂದ ರ್ಖಗೆ ಪೆಟ್ರೋಲ್​ ಪಂಪ್​ ಸರ್ಕಲ್​ ಅಭಿವೃದ್ದಿಪಡಿಸುತ್ತಿರುವುದರಿಂದ ಸ್ಥಳ ಪರಿಶೀಲಿಸಲಾಯಿತು.
ಮಹಾನಗರ ಪಾಲಿಕೆಯ ಅಧೀಕ ಅಭಿಯಂತ ದತ್ತಾತ್ರೇಯ, ಕಾರ್ಯನಿರ್ವಾಹಕ ಅಭಿಯಂತ ಪುರುಷೋತ್ತಮ, ಕಲಬುರಗಿ ನಗರ ಸಂಚಾರ ವಿಭಾಗದ ಡಿಎಸ್​ಪಿ ಸುಧಾ ಆದಿ, ಸಿಪಿಐ ಶಕೀಲ್​ ಅಂಗಡಿ ಇತರರಿದ್ದರು.
"

ನಗರದ ಕೇಂದ್ರ ಬಸ್​ನಿಲ್ದಾಣ ಮುಂಭಾಗದಲ್ಲಿ ಕೆಕೆಆರ್​ಡಿಬಿ 2 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಕಲ್ವರ್ಟ್​ ಕಾಮಗಾರಿ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ನಡೆಯುತ್ತಿದೆ. ಹೀಗಾಗಿ ಶ್ರೀ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು.

ಬಿ.ಫೌಜಿಯಾ ತರನ್ನುಮ್​,

ಜಿಲ್ಲಾಧಿಕಾರಿ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net