ವಾಸವಿ ಶಾಲೆಯಲ್ಲಿ ನವೀನ ಮಾದರಿ ಪ್ರದರ್ಶನ

ಕೊಳ್ಳೇಗಾಲ ಪಟ್ಟಣದ ಶ್ರೀ ವಾಸವಿ ವಿದ್ಯಾಕೇಂದ್ರದಲ್ಲಿ ಶನಿವಾರ (ಸಿಬಿಎಸ್‌ಇ) ವಿಕಸಿತ ಭಾರತ-2047 ಪರಿಕಲ್ಪನೆಯಡಿ ವಿದ್ಯಾರ್ಥಿಗಳು ಮಾಡಿರುವ ನವೀನ ಮಾದರಿ ಪ್ರದರ್ಶನವನ್ನು ಪಾಲಕರು ವೀಕ್ಷಿಸಿದರು.
ಕೊಳ್ಳೇಗಾಲ ಪಟ್ಟಣದ ಶ್ರೀ ವಾಸವಿ ವಿದ್ಯಾಕೇಂದ್ರದಲ್ಲಿ ಶನಿವಾರ (ಸಿಬಿಎಸ್‌ಇ) ವಿಕಸಿತ ಭಾರತ-2047 ಪರಿಕಲ್ಪನೆಯಡಿ ವಿದ್ಯಾರ್ಥಿಗಳು ಮಾಡಿರುವ ನವೀನ ಮಾದರಿ ಪ್ರದರ್ಶನವನ್ನು ಪಾಲಕರು ವೀಕ್ಷಿಸಿದರು.
Published on
ಕೊಳ್ಳೇಗಾಲ: ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರದಲ್ಲಿ (ಸಿಬಿಎಸ್‌ಇ) ವಿಕಸಿತ ಭಾರತ-2047 ಪರಿಕಲ್ಪನೆಯಡಿ ವಿದ್ಯಾರ್ಥಿಗಳ ನವೀನ ಮಾದರಿ ಪ್ರದರ್ಶನಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಶ್ರೀವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ವಿಭಾಗದ ಜಂಟಿ ಕಾರ್ಯದರ್ಶಿ ಡಾ.ಸಿ.ಪಿ.ಶರತ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂಶೋಧನಾ ಮನೋಭಾವ ಹಾಗೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಬೆಳೆಸುವ ವಿಶೇಷ ಕುರಿತು ವಿಕಸಿತ ಭಾರತ-2047 ಪರಿಕಲ್ಪನೆಯಡಿ ವಿದ್ಯಾರ್ಥಿಗಳಿಂದ ನವೀನ ಮಾದರಿ ಪ್ರದರ್ಶನ ಮಾಡಲಾಗಿದೆ ಎಂದರು.

ವಿಜ್ಞಾನ, ತಂತ್ರಜ್ಞಾನ, ಪರಿಸರ, ಕೃಷಿ, ಆರೋಗ್ಯ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪರಿಹಾರಗಳ ಅನಾವರಣಗೊಂಡಿತು. ಗಣಿತ, ಪರಿಸರ ಅಧ್ಯಯನ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ವಿಷಯಗಳ ಆಕರ್ಷಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿಕಸಿತ ಭಾರತ 2047 ಪರಿಕಲ್ಪನೆಯಡಿ ನವೀನ ಮಾದರಿಗಳನ್ನು ವಿದ್ಯಾರ್ಥಿ ಗಳು ಪ್ರದರ್ಶಿಸಿದರು.

ಈ ವೇಳೆ ಆರ್ಯ ವೈಶ್ಯ ಸಂಘದ ಕಾರ್ಯಾದರ್ಶಿ ಶಶಿಧರ್, ಶ್ರೀ ವಾಸವಿ ವಿದ್ಯಾಕೇಂದ್ರದ ಜಂಟಿ ಕಾರ್ಯದರ್ಶಿ ವೆಂಕಟೇಶ್ ಬಾಬು, ಸಿಬಿಎಸ್‌ಇ ವಿಭಾಗದ ನಿರ್ದೇಶಕ ಡಾ.ಆಶಿಕ್ ವಿ ಓಲೈಟಿ, ಸಂಯೋಜಕಿ ಮಧುರ ರಾಜೇಶ್, ವಾಸವಿ ವಿದ್ಯಾಸಂಸ್ಥೆ ಸಿಬಿಎಸ್‌ಇ ವಿಭಾಗದ ಪ್ರಾಂಶುಪಾಲ ಡಾ.ಎಸ್.ದಯಾಪ್ರಸಾದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net