

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ರಾಜ್ಯ ಸರ್ಕಾರಮಾಡಿರುವ ಪರಿಶಿಷ್ಟ ಜಾತಿಗಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ,ಭೋವಿ,ಕೊರಮ,ಕೊರಚ ಮತ್ತುಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆಅನ್ಯಾಯವಾಗಿದೆ ಎಂದು ಆರೋಪಿಸಿರುವಸಮುದಾಯಗಳು ಇದನ್ನು ಮರು ಪರೀಶಿಲಿಸಲುಒತ್ತಾಯ ಮಾಡಿವೆ.
ನಗರದಗಾಂಧಿಭವನದಲ್ಲಿ ಭೋವಿ ಗುರುಪೀಠದಶ್ರೀ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ಮತ್ತು ಬಂಜಾರ ಸಮುದಾಯದಶ್ರೀ ಸರ್ಧಾರ್ ಸೇವಾಲಾಲ್ ಸ್ವಾಮೀಜಿನೇತೃತ್ವದಲ್ಲಿ ಕರ್ನಾಟಕ ಮೀಸಲಾತಿಸಂರಕ್ಷಣಾ ಒಕ್ಕೂಟದ ಬಂಜಾರ,ಭೋವಿ,ಕೊರಚ,ಕೊರಮ ಮತ್ತುಸೂಕ್ಷ್ಮ ಸಮುದಾಯಗಳ ಮುಖಂಡರ ಸಭೆನಡೆಯಿತು.
ನ್ಯಾ.ನಾಗಮೋಹನ್ದಾಸ್ ಆಯೋಗದ ವರದಿ ಪ್ರಕಾರಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿಅತೀ ಹಿಂದುಳಿದಿರುವ ಪ್ರವರ್ಗಸಿ ಗುಂಪಿಗೆ ಶೇಕಡಾ 5ಕ್ಕೂಹೆಚ್ಚು ಮೀಸಲಾತಿಯನ್ನು ಹಂಚಿಕೆಮಾಡಬೇಕು. ಆದರೆಅತಿ ಹಿಂದುಳಿದಿರುವ 64ಜಾತಿಗಳನ್ನುಒಳಗೊಂಡ ಈ ಗುಂಪನ್ನು ಮೊದಲನೇಗುಂಪು ಎಂದು ನಮೂದಿಸಿಬೇಕು.ಆದರೆ ಇಲ್ಲಿತೀರ ತಳಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು,ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ,ಮತ್ತು ಸಚಿವಸಂಪುಟದ ಸದಸ್ಯರನ್ನು ಭೇಟಿ ಮಾಡಿಮನವರಿಕೆ ಮಾಡಿಕೊಡಲಾಗುವುದು.ನಮ್ಮ ಬೇಡಿಕೆಗಳನ್ನುಸರ್ಕಾರ ಈಡೇರಿಸದಿದ್ದಲ್ಲಿಹೋರಾಟ ರೂಪಿಸುವುದು ಹಾಗೂನ್ಯಾಯಾಲಯದಲ್ಲಿ ಪ್ರಕರಣದಾಖಲಿಸಿಸಲಾಗುವುದು ಎಂದು ಸಮಿತಿಎಚ್ಚರಿಕೆ ಕೊಟ್ಟಿದೆ.
ಸಭೆಯಲ್ಲಿಮಾಜಿ ಶಾಸಕರಾದ ಭೀಮನಾಯಕ,ತಾಂಡ ಅಭಿವೃದ್ಧಿನಿಗಮದ ಅಧ್ಯಕ್ಷ ಜಯದೇವ ನಾಯ್ಕ,ಭೋವಿ ಅಭಿವೃದ್ಧಿನಿಗಮದ ಮಾಜಿ ಅಧ್ಯಕ್ಷ ರವಿಕುಮಾರ್,ಕರ್ನಾಟಕ ಮೀಸಲಾತಿಸಂರಕ್ಷಣಾ ಒಕ್ಕೂಟದ ಕಾರ್ಯಾಧ್ಯಕ್ಷರಾಘವೇಂದ್ರ ನಾಯ್ಕ,ಕೊರಚ ಮಹಾಸಭಾಅಧ್ಯಕ್ಷ ಆದರ್ಶ ಯಲ್ಲಪ್ಪ ಮತ್ತಿತರರುಭಾಗವಹಿಸಿದ್ದರು.