IVF​​ ಬಗ್ಗೆ ಮಾಹಿತಿ; ಗುಣಶೀಲ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ: ಡಾ.ದೇವಿಕಾ ಗುಣಶೀಲ ಅವರೊಂದಿಗೆ ಸಂವಾದ

ಡಾ. ದೇವಿಕಾ ಗುಣಶೀಲ ಮತ್ತು ಡಾ. ರಾಜಶೇಖರ್ ನಾಯಕ್
ಡಾ. ದೇವಿಕಾ ಗುಣಶೀಲ ಮತ್ತು ಡಾ. ರಾಜಶೇಖರ್ ನಾಯಕ್
Published on
ಬದಲಾದ ಜೀವನ ಶೈಲಿ, ಆಹಾರ ಕ್ರಮ, ವಿವಾಹ ವಿಳಂಬ ಇತ್ಯಾದಿ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಬಂಜೆತನ ಸಮಸ್ಯೆ ಹೆಚ್ಚುತ್ತಿದ್ದು, ಇಂತಹ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಕೃತಕ ಗರ್ಭಧಾರಣ ಚಿಕಿತ್ಸೆ (ಇನ್-ವಿಟ್ರೊ ಫರ್ಟಿಲಿಟಿ -IVF​​) ವರದಾನವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಬಂಜೆತನಕ್ಕೆ ಕಾರಣ, ಐವಿಎಫ್ ಚಿಕಿತ್ಸೆ, ಹೊಸ ಆವಿಷ್ಕಾರ, ಅದರ ಸಾಧಕ-ಬಾಧಕಗಳ ಕುರಿತು ಗುಣಶೀಲ ಫರ್ಟಿಲಿಟಿ ಸೆಂಟರ್‌ನ ಡಾ. ದೇವಿಕಾ ಗುಣಶೀಲ ಮತ್ತು ಡಾ. ರಾಜಶೇಖರ್ ನಾಯಕ್ ಅವರೊಂದಿಗೆ 'ವಿಜಯವಾಣಿ' ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾನಾ ಕಾರಣಗಳಿಂದ ಯುವ ದಂಪತಿಗಳಲ್ಲಿ ಬಂಜೆತನ ಸಮಸ್ಯೆ ಹೆಚ್ಚುತ್ತಿದೆ. ಇದರ ಹೊರತಾಗಿ ಹೆಚ್ಚು ಓದಬೇಕು. ಉದ್ಯೋಗ ಹೊಂದಬೇಕು, ಬಳಿಕ ಹೆಚ್ಚು ಹಣ ಸಂಪಾದಿಸಬೇಕು, ಆರ್ಥಿಕವಾಗಿ ಸ್ವತಂತ್ರರಾಗಬೇಕು. ಹೀಗೆ ಹಲವು ಕಾರಣಗಳಿಂದಾಗಿ ಇಂದಿನ ದಂಪತಿಗಳು ಮಕ್ಕಳನ್ನು ಮಾಡಿಕೊಳ್ಳುವುದರ ಬಗ್ಗೆ ಗಮನಹರಿಸುತ್ತಿಲ್ಲ. ಆ ಬಗ್ಗೆ ಯೋಚನೆ ಮಾಡುವ ಹೊತ್ತಿಗೆ ಅವರು ಮಕ್ಕಳನ್ನು ಹೊಂದುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ. ಅದರಲ್ಲೂ, ಕಳೆದ 8-10 ವರ್ಷಗಳಿಂದೀಚೆಗೆ 30ನೇ ವಯಸ್ಸಿಗೇ ಮಹಿಳೆಯರ ಅಂಡಾಶಯಗಳಲ್ಲಿ ಅಂಡಾಣು ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಆಧುನಿಕ ಜೀವನ ಶೈಲಿ, ಆಹಾರ ಬೆಳೆಯುವ ಹಾಗೂ ತಯಾರಿಕಾ ಕ್ರಮಗಳಲ್ಲಿ ರಾಸಾಯನಿಕ ಬಳಕೆ, ನೀರಿನ ಬಾಟೆಲ್ ಸೇರಿ ಪ್ಲಾಸ್ಟಿಕ್‌ಗಳ ಬಳಕೆ ಹೀಗೆ ಹಲವು ಕಾರಣಗಳಿಂದ ಯುವ ದಂಪತಿಗಳು ಫಲವತ್ತತೆಯ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಇದರ ಕಾರಣ ತಿಳಿಯುವುದು ವೈದ್ಯರಿಗೆ ಸವಾಲಾಗಿದ್ದರೆ, ದಂಪತಿಗಳಿಗೆ ಆಘಾತ ಉಂಟು ಮಾಡುತ್ತಿದೆ.
ಸಂಸ್ಕರಣೆಗೆ ಬೇಡಿಕೆ: ಇತ್ತೀಚಿನ ವರ್ಷಗಳಲ್ಲಿ ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ವಿವಾಹವನ್ನು ಮುಂದೂಡುತ್ತಿದ್ದಾರೆ. ಹೀಗಾಗಿ ವಿದೇಶಿ ಕಂಪನಿಗಳು ಸೇರಿ ವಿವಿಧೆಡೆ ಕೆಲಸ ನಿರ್ವಹಿಸುವ ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಅಂಡಾಣುವನ್ನು ಸಂಸ್ಕರಣೆ (ಫ್ರೀಸಿಂಗ್) ಮಾಡುವತ್ತ ಒಲವು ತೋರುತ್ತಿದ್ದಾರೆ. ಇದು ಗಂಡು ಮಕ್ಕಳಲ್ಲೂ ಸಾಮಾನ್ಯವಾಗುತ್ತಿದ್ದು, ಅವರೂ ಸಹ ತಮ್ಮ ವೀರ್ಯಾಣುವನ್ನು ಸಂಗ್ರಹಿಸಿಡುವತ್ತ ಆಸಕ್ತರಾಗುತ್ತಿದ್ದಾರೆ. ಸಿಂಗಲ್ ಪೇರೆಂಟಿಗ್ ಮನಸ್ಥಿತಿ ಹೆಚ್ಚುತ್ತಿರುವುದು ಸಹ ಈ ರೀತಿಯ ಬೆಳವಣಿಗೆಗೆ ಕಾರಣವಾಗುತ್ತಿದೆ.
ಐವಿಎಫ್ ಎಂದರೇನು?: ಇನ್-ವಿಟ್ರೊ ಫರ್ಟಿಲಿಟಿ (ಐವಿಎಫ್) ಕೃತಕ ಗರ್ಭಧಾರಣೆಯನ್ನು ಒಳಗೊಂಡಿರುವ ಒಂದು ವಿಧಾನ. ವೈದ್ಯರು ದಂಪತಿಯಿಂದ ಅಂಡಾಣು ಮತ್ತು ವೀರ್ಯ ಸಂಗ್ರಹಿಸಿ, ಅದನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿ ಆರೋಗ್ಯಕರ ಭ್ರೂಣವನ್ನು ತಯಾರಿಸಿ ಅದನ್ನು ಗರ್ಭಕೋಶದಲ್ಲಿ ಅಳವಡಿಸಿದಾಗ ಗರ್ಭಧಾರಣೆ ಆಗುತ್ತದೆ.

ಹೊಸ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟ ಪರೀಕ್ಷೆ

ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಆವಿಷ್ಕಾರಗಳು ಆಗುತ್ತಿದ್ದು, ಇದು ಐವಿಎಫ್‌ನಲ್ಲೂ ಹೊಸ ಪ್ರಯೋಗಕ್ಕೆ ಅವಕಾಶ ಮಾಡಿಕೊಟ್ಟಿದೆ. ಹೊಸ ತಂತ್ರಜ್ಞಾನದ ನೆರವಿನಿಂದ ಪ್ರಸ್ತುತ ಭ್ರೂಣವನ್ನು ಸಿದ್ಧಪಡಿಸು ವುದರ ಜತೆಗೆ ಬುದ್ದಿಮಾಂದ್ಯತೆ ಸೇರಿ ಅನುವಂಶಿಕವಾಗಿ ಬರುವ ಆರೋಗ್ಯ ಸಮಸ್ಯೆ ತಡೆಯುವುದಕ್ಕೂ ಸಾಧ್ಯವಿದೆ. ಇದಕ್ಕಾಗಿ ಭ್ರೂಣದ ಗುಣಮಟ್ಟ ತಿಳಿಯಲು ಜೆನೆಟಿಕ್ ಸ್ಟೀನಿಂಗ್ ಮಾಡಲಾಗುತ್ತದೆ. ಈ ವಿಧಾನದಲ್ಲಿ ವೀರ್ಯಾಣುವನ್ನು ಅಂಡಾಣುವಿನಲ್ಲಿ ಇನ್ವೆಕ್ಟ್ ಮಾಡಿದ ನಂತರ ಅದು ಸಂಪೂರ್ಣ ಭ್ರೂಣವಾಗಿ ಮಾರ್ಪಡುವ ಕ್ಷಣ ಕ್ಷಣದ ಮಾಹಿತಿಯನ್ನು ವಿಡಿಯೋ ಸಹಿತ ಪಡೆಯಬಹುದಾಗಿದೆ. ಭ್ರೂಣ ರೂಪುಗೊಂಡ ನಂತರ ಅದರಲ್ಲಿನ 5-10 ಅಂಶಗಳನ್ನು ತೆಗೆದು ಜೆನೆಟಿಕ್ ಪರೀಕ್ಷೆಗೆ ಒಳಪಡಿಸುವ ಮೂಲಕ ಅದರ ಗುಣಮಟ್ಟ ಪರೀಕ್ಷೆ ಮಾಡಬಹುದಾಗಿದೆ. ಅದು ಯಾವ ರೀತಿಯ ಆಕಾರ ತಾಳಬೇಕು ಎಂಬುದನ್ನು ಪರೀಕ್ಷಿಸಿ ಆರೋಗ್ಯಕರ ಭ್ರೂಣವನ್ನು ಆಯ್ಕೆ ಮಾಡಿ ಗರ್ಭದಲ್ಲಿ ಅಳವಡಿಸಲಾಗುವುದು. ಇದರಿಂದ ಅನುವಂಶಿಕವಾಗಿ ಬರುವ ಕಾಯಿಲೆಗಳನ್ನು ಮುಂದಿನ ಪೀಳಿಗೆಗೆ ತಡೆಗಟ್ಟಬಹುದಾಗಿದೆ.

ಆರೋಗ್ಯವಂತ ಸಮಾಜ ನಿರ್ಮಾಣ ಗುರಿ

ಐದು ದಶಕಗಳನ್ನು ಪೂರೈಸಿರುವ ಗುಣಶೀಲ ಐವಿಎಫ್ ಕೇಂದ್ರವು ಬಸವನಗುಡಿ, ಕೋರಮಂಗಲ ಹಾಗೂ ಬಳ್ಳಾರಿ ಸೇರಿ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದೆ. ಇದುವರೆಗೂ ನಗರದ ಜನರಿಗೆ ಸೇವೆ ನೀಡುತ್ತಿದ್ದ ಗುಣಶೀಲ ಇದೀಗ ಗ್ರಾಮೀಣ ಭಾಗದಲ್ಲಿ ಬಂಜೆತನ ಸಮಸ್ಯೆ ಹೊಂದಿರುವ ದಂಪತಿಗಳಿಗೂ ಈ ಅತ್ಯಾಧುನಿಕ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಂಜೆತನ ನಿವಾರಣಾ ಕೇಂದ್ರ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಕೇವಲ ಬಂಜೆತನ ನಿವಾರಣೆ ಮಾತ್ರವಲ್ಲದೆ, ಮುಖ್ಯವಾಗಿ ಮಗುವಿನ ಜನನಕ್ಕೆ ನೆರವಾಗುವ ರೀತಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡು ಸಂತಾನಫಲ ಚಿಕಿತ್ಸೆಯ ಮೂಲಕ ಆರೋಗ್ಯವಂತ ಶಿಶುಗಳ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಗುರಿ ಹೊಂದಿದೆ. ಇದಕ್ಕಾಗಿ ಜನಿಸಿದ ದಿನದಿಂದ 5 ವರ್ಷದವರೆಗಿನ ಮಕ್ಕಳ ಆರೈಕೆ ಸೇವೆ ಆರಂಭಿಸುತ್ತಿದೆ. ಇದರ ಮೂಲಕ ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಕೆಲ ಸಮಸ್ಯೆಗಳನ್ನು ಎಳೆಯ ವಯಸ್ಸಿನಲ್ಲಿಯೇ ಪರಿಹರಿಸುವ ವಿಧಾನ ಇದಾಗಿದೆ.

ಗುಣಶೀಲ ಚಾರಿಟಿ

ಗುಣಶೀಲ ಫರ್ಟಿಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸ‌ರ್ ರೋಗಿಗಳಿಗೆ ಅವರು ಚಿಕಿತ್ಸೆಗೆ ಒಳಗಾಗುವ ಮುಂಚಿತವಾಗಿ ಅವರ ವೀರ್ಯಾಣು ಸಂಗ್ರಹಿಸಿ ಉಚಿತವಾಗಿ ಸಂರಕ್ಷಿಸಲಾಗುತ್ತದೆ. ಈ ರೀತಿ 700ಕ್ಕೂ ಹೆಚ್ಚು ಮಂದಿಯ ವೀರ್ಯಾಣುವನ್ನು ಉಚಿತವಾಗಿ 10 ವರ್ಷ ಸಂಗ್ರಹಿಸಿ ಇಡಲಾಗಿತ್ತು. ಕೋವಿಡ್ ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾಮಾನ್ಯ ದರ ನಿಗದಿಪಡಿಸಲಾಗಿದೆ. ಇದಲ್ಲದೆ ತಾಯಿ ಭಾಗ್ಯ ಯೋಜನೆಯಡಿ ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಿದ್ದೂ ಉಂಟು.

ಐವಿಎಫ್ ಚಿಕಿತ್ಸೆಗೆ ಲೈಫ್ ಸ್ಟೈಲ್ ಹೇಗಿರಬೇಕು?

ಬೊಜ್ಜು ನಿವಾರಿಸಿಕೊಳ್ಳಬೇಕು, ತೂಕ ಇಳಿಸಿಕೊಳ್ಳಬೇಕು, ಹೊರಗಿನ ಅಹಾರ ಸಂಪೂರ್ಣ ತ್ಯಜಿಸಬೇಕು, ಕರಿದ ಪದಾರ್ಥಗಳ ಸೇವನೆ ಮಾಡುವಂತಿಲ್ಲ, ಹಣ್ಣು ಮತ್ತು ತರಕಾರಿಯಲ್ಲಿ ರಾಸಾಯನಿಕ ಅಂಶಗಳು ಹೆಚ್ಚಿರುವುದರಿಂದ ಅವುಗಳನ್ನು ಚೆನ್ನಾಗಿ ತೊಳೆದು ಬಳಸಬೇಕು. ಹಸಿರು ತರಕಾರಿ, ಮೊಳಕೆ ಕಾಳುಗಳ ಬಳಕೆ ಉತ್ತಮ, ಮೊಬೈಲ್ ಬಳಕೆ ಮಾಡಬಾರದು, ನಿದ್ರೆಗೆಡಬಾರದು ಇತ್ಯಾದಿ.

ಐವಿಎಫ್ ಚಿಕಿತ್ಸೆ ಯಾರಿಗೆ ಅಗತ್ಯ?

ಬಂಜೆತನ ಸಮಸ್ಯೆ ಹೊಂದಿರುವ ದಂಪತಿಗಳಿಗೆ ಐವಿಎಫ್ ವರದಾನವಾಗಿದೆ.
ವಯಸ್ಸಿನ ಕಾರಣದಿಂದಾಗಿ ಕಡಿಮೆ ಫಲವತ್ತತೆ, ಗರ್ಭಾಶಯದಲ್ಲಿನ ತೊಡಕು, ಹಾನಿಗೊಳಗಾದ ಫಾಲೋಪಿಯನ್ ಟ್ಯೂಬ್‌ಗಳು, ಎಂಡೋಮೆಟ್ರಿಯೋಸಿಸ್, ಪಾಲಿಸಿಸ್ಟಿಕ್ ಓವೇರಿಯನ್ ಸಿಂಡೋಮ್ (ಪಿಸಿಓಎಸ್), ಅನುವಂಶಿಕ ಅಸ್ವಸ್ಥತೆಗಳು ಕಡಿಮೆ ವೀರ್ಯ ಸೇರಿ ವಿವಿಧ ಸಮಸ್ಯೆಗಳಿಂದಾಗಿ ಸಹಜವಾಗಿ ಗರ್ಭಧಾರಣೆ ಸಾಧ್ಯವಾಗದ ದಂಪತಿ ಐವಿಎಫ್ ಚಿಕಿತ್ಸೆಗೆ ಅರ್ಹರು.

ಬಾಡಿಗೆ ತಾಯಿಗೆ

ಪ್ರಸ್ತುತ ಬಾಡಿಗೆ ತಾಯಂದಿರ ಕೊರತೆ ಹೆಚ್ಚಾಗಿದೆ. ಈ ಪ್ರಕ್ರಿಯೆಗೆ ಕಾನೂನು ಕಠಿಣ ಆಗಿರುವುದರಿಂದ ಬಹಳ ಕಷ್ಟವಿದೆ. ಸರ್ಕಾರದ ಅನುಮತಿ ಬೇಕು. ಈ ವಿಧಾನದಲ್ಲಿ ಸ್ವಲ್ಪ ತೊಡಕಾದರೂ ಚಿಕಿತ್ಸೆ ನೀಡಿದ ವೈದ್ಯರು ಕೊರತೆ ಜೈಲು ಸೇರಬೇಕಾಗುತ್ತದೆ. ಕಾನೂನು ಸಡಿಲವಾದರೆ ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚು. ಆದರೆ, ಅಂಡಾಣು ಸಮಸ್ಯೆ ಇರುವವರು ಸೋದರ ಸಂಬಂಧಿಯಿಂದ ಮೊಟ್ಟೆಯನ್ನು ದಾನವಾಗಿ ಪಡೆಯಬಹುದಾಗಿದೆ. ಆದರೆ ಅದಕ್ಕೂ ಕೆಲವು ನಿಯಮಗಳ ಪಾಲನೆ ಮಾಡಬೇಕಾಗುತ್ತದೆ.

ಗರ್ಭಪಾತ ಸಹಜ

ಸಾಮಾನ್ಯವಾಗಿ ದೇಹದಲ್ಲಿನ ಕೆಲವು ಸಮಸ್ಯೆಗಳಿಂದ ಸಹಜ ಗರ್ಭಧಾರಣೆ ಸಾಧ್ಯವಾಗದವರು ಐವಿಎಫ್ ಚಿಕಿತ್ಸೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಲ್ಲಿ ರಕ್ತದೊತ್ತಡ, ಮಧುಮೇಹ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳು ಇರುತ್ತವೆ. ಆದರೆ, ಈ ಚಿಕಿತ್ಸೆ ವಿಧಾನ ಸುಲಭವಲ್ಲ. ಭ್ರೂಣ ಸಿದ್ಧಪಡಿಸುವುದು ವೈದ್ಯರ ನಿಯಂತ್ರಣದಲ್ಲಿರುತ್ತದೆ. ಅದನ್ನು ಗರ್ಭದಲ್ಲಿ ಅಳವಡಿಸಿದ ನಂತರ ಆಗುವ ಪ್ರಕ್ರಿಯೆ ಯಾರ ಕೈಯಲ್ಲೂ ಇರುವುದಿಲ್ಲ. ಹಾಗಾಗಿ ಭ್ರೂಣ ಅಳವಡಿಸಿದ ನಂತರದಿಂದ 24 ವಾರಗಳವರೆಗೆ ಗರ್ಭಪಾತ ಆಗುವ ಸಂಭವ ಇರುತ್ತದೆ. ಇನ್ನೂ ಕೆಲ ಸಂದರ್ಭಗಳಲ್ಲಿ ಅವಧಿಪೂರ್ವ ಮಗುವಿನ ಜನನ ಸೇರಿ ಹಲವು ಸಮಸ್ಯೆಗಳು ಉಂಟಾಗಬಹುದು.

ಬಳ್ಳಾರಿ ಶಾಖೆಯಲ್ಲಿ ಉತ್ತಮ ಆರೈಕೆ...

ಗುಣಶೀಲ ಆಸ್ಪತ್ರೆಯು ಕಳೆದ ಎರಡು ವರ್ಷಗಳಿಂದ ಬಳ್ಳಾರಿಯಲ್ಲೂ ಸೇವೆ ಆರಂಭಿಸಿದ್ದು, ಕೊಪ್ಪಳ, ಹೊಸಪೇಟೆ, ಗಂಗಾವತಿ, ರಾಯಚೂರು, ಸಂಡೂರು ಸೇರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಮಕ್ಕಳಿಲ್ಲದ ದಂಪತಿಗಳಿಗೆ ಅತ್ಯಾಧುನಿಕ ಬಂಜೆತನ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಿದೆ. ನೂರಾರು ದಂಪತಿಗಳು ಮಕ್ಕಳನ್ನು ಹೊಂದಲು ನೆರವಾಗಿದ್ದು, ಇದರೊಂದಿಗೆ ಸಂಸ್ಥೆಯು ಜನರ ವಿಶ್ವಾಸವನ್ನು ಗಳಿಸಿಕೊಂಡಿದೆ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ, ಅನುಭವಿ ತಜ್ಞ ವೈದ್ಯರ ತಂಡ ಹಾಗೂ ವೈಯಕ್ತಿಕ ಆರೈಕೆಯ ಮೂಲಕ, ಬಳ್ಳಾರಿ ಗುಣಶೀಲ భేటి౯లిటీ సౌంటరో ఐవిఎఫో బికిత్సేయల్లి . 65 ರಿಂದ 70 ಯಶಸ್ಸಿನ ಪ್ರಮಾಣವನ್ನು ದಾಖಲಿಸಿದೆ. ವಿಳಾಸ: ಗುಣಶೀಲ భటి౯ లిటి నేంటరో, ಪಾರ್ವತಿನಗರ, ಬಳ್ಳಾರಿ. ದೂ: 08392469595, : 9663769595.

ಅನುಭವಿಗಳ ಸೇವೆ

ಗುಣಶೀಲ ಐವಿಎಫ್ ಕೇಂದ್ರವು ಅನುಭವಿ ಫಲವತ್ತತೆ ತಜ್ಞರು, ಭ್ರೂಣಶಾಸ್ತ್ರಜ್ಞರು, ಶುಶೂಷಕರು ಮತ್ತು ಸಹಾಯಕ ಸಿಬ್ಬಂದಿಗಳ ತಂಡವನ್ನು ಹೊಂದಿದೆ.
ಆ ಮೂಲಕ ಫಲವತ್ತತೆ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ವ್ಯಕ್ತಿಗತ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸುತ್ತಿದೆ. ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿದ್ದು, ಸುಲೋಚನಾ ಗುಣಶೀಲ ಅವರ ನಂತರದಲ್ಲಿ ಡಾ. ದೇವಿಕಾ ಗುಣಶೀಲ ಮತ್ತು ಡಾ. ರಾಜಶೇಖರ ನಾಯಕ್ ನೇತೃತ್ವದಲ್ಲಿ ಆಸ್ಪತ್ರೆ ಮುನ್ನಡೆಯುತ್ತಿದೆ.
ವಿಳಾಸ: ಗುಣಶೀಲ ಫರ್ಟಿಲಿಟಿ ಸೆಂಟರ್, ಬಸವನಗುಡಿ, ಬೆಂಗಳೂರು.
ದೂರವಾಣಿ 080-46462600
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net