ಆಹಾರ ಪದಾರ್ಥಗಳ ಖರೀದಿದಾಗಿ ನಿಗಮ ಕರೆದಿದ್ದ ಟೆಂಡರ್‌ನಲ್ಲಿ ಅಂದಾಜು 20 ಕಂಪನಿಗಳು ಟೆಂಡರ್‌ನಲ್ಲಿ ಬಿಡ್ ಮಾಡಿದ್ದವು. ಆದರೆ, ತಮಗೆ ಬೇಕಾದ ಕಂಪನಿಗಳಿಗೆ ಟೆಂಡರ್ ನೀಡಲು ಸರ್ಕಾರದ ಮಟ್ಟದಲ್ಲಿ ಹಲವರು ಲಾಬಿ ನಡೆಸಿದ್ದರು. ಇದರಿಂದ ಬೇಸರಗೊಂಡ ಕೆಲವರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದರು. ಇದರಿಂದ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿತು. ಇದೀಗ ಷರತ್ತು ಸಡಿಲಿಸಿ ಮತ್ತೆ ಟೆಂಡರ್ ಕರೆಯಲಾಗುವುದು ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಏಳೆಂಟು ತಿಂಗಳು ಕಳೆದರೂ ಟೆಂಡರ್ ಅಂತಿಮವಾಗಿಲ್ಲ. ಆದ್ದರಿಂದ, ಇಂದಿರಾ ಕಿಟ್ ವಿತರಣೆ ಪ್ರಸ್ತಾವ ಕೈಬಿಟ್ಟು, ಅಕ್ಕಿಯನ್ನೇ ಮುಂದುವರಿಸಲು ಸರ್ಕಾರದ ನಿರ್ಧರಿಸಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಸಚಿವ ಕೆ.ಎಚ್.ಮುನಿಯಪ್ಪ, ಸಹ ಯೋಜನೆ ಜಾರಿಗೆ ಸಂಬಂಧಿಸಿದಂತೆ ಹಲವು ಬಾರಿ ಹೇಳಿಕೆ ನೀಡಿದ್ದರೂ ಇದು ಕಾರ್ಯರೂಪಕ್ಕೆ ಬರಲಿಲ್ಲ.