ಇಂದಿರಾ ಕ್ಯಾಂಟೀನ್​ ಸದ್ಬಳಕೆಯಾಗಲಿ

ನಾಗನೂರ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದಿರಾ ಕ್ಯಾಂಟೀನ್​ ಉದ್ಘಾಟಿಸಿದರು. ಮಾಜಿ ಸಚಿವ ಆರ್.​ಎಂ.ಪಾಟೀಲ, ಬಿ.ಆರ್​.ಪಾಟೀಲ, ಕೆ.ಎಸ್​.ಪಾಟೀಲ, ಗಜಾನನ ಯರಗಣವಿ, ಪಿ.ಎಲ್​.ಬಬಲಿ, ಸುಭಾಸ ಕ್ಯಾತೆನ್ನವರ ಇತರರಿದ್ದರು.
ನಾಗನೂರ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದಿರಾ ಕ್ಯಾಂಟೀನ್​ ಉದ್ಘಾಟಿಸಿದರು. ಮಾಜಿ ಸಚಿವ ಆರ್.​ಎಂ.ಪಾಟೀಲ, ಬಿ.ಆರ್​.ಪಾಟೀಲ, ಕೆ.ಎಸ್​.ಪಾಟೀಲ, ಗಜಾನನ ಯರಗಣವಿ, ಪಿ.ಎಲ್​.ಬಬಲಿ, ಸುಭಾಸ ಕ್ಯಾತೆನ್ನವರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡಲಗಿ
ನಾಗನೂರ ಪಟ್ಟಣದ ಅಭಿವದ್ಧಿಗೆ ಸರ್ಕಾರದಿಂದ ಅನುದಾನ ನಿರೀಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ನಾಗನೂರ ಪಟ್ಟಣದ ಬಸ್​ ನಿಲ್ದಾಣದ ಬಳಿ ಶನಿವಾರ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್​ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಅಭಿವದ್ಧಿಗೆ ಸದಾ ಬದ್ಧತೆಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಬಡವರಿಗಾಗಿ ಅತಿ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ ಗುಣಮಟ್ಟದ ಊಟ ಮತ್ತು ಉಪಹಾರ ದೊರೆಯಲಿದೆ. ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ಮಾಜಿ ಸಚಿವ ಆರ್​.ಎಂ.ಪಾಟೀಲ, ಬಿ.ಆರ್​.ಪಾಟೀಲ, ಪ್ರಭಾ ಶುಗರ್ಸ್​ ನಿರ್ದೇಶಕ ಕೆ.ಎಸ್​.ಪಾಟೀಲ, ಗಜಾನನ ಯರಗಣವಿ, ಪಿ.ಎಲ್​.ಬಬಲಿ, ಸುಭಾಸ ಕ್ಯಾತೆನ್ನವರ, ಮುತ್ತೆಪ್ಪ ಮುತ್ತೆನ್ನವರ, ರಮೇಶ ಬೆಳಕೂಡ, ಬಸು ಹಳಿಗೌಡರ, ಶಂಕರ ದಳವಾಯಿ, ಬಸವರಾಜ ಪಾಟೀಲ, ಮಹಾದೇವ ನಾಯಿಕ, ವೈ.ಆರ್​. ಕರಬನ್ನವರ, ಬಸವಂತ ಪಡದಲ್ಲಿ, ಅಜ್ಜಪ್ಪ ಗೋಟೂರ, ಲಗಮಣ್ಣ ಗಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net