ಭಾರತೀಯ ಕೃಷಿಕರು ವಿಶ್ವಕ್ಕೆ ಮಾದರಿ Indian farmers

ಭಾರತೀಯ ಕೃಷಿಕರು ವಿಶ್ವಕ್ಕೆ ಮಾದರಿ Indian farmers
ಭಾರತೀಯ ಕೃಷಿಕರು ವಿಶ್ವಕ್ಕೆ ಮಾದರಿ Indian farmers
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆ ಮುಖ್ಯಸ್ಥ ಆಲಂಗೂರು ವೈ.ಸುರೇಂದ್ರಗೌಡ ಹೇಳಿಕೆ
ಮುಳಬಾಗಿಲು: ಭಾರತೀಯ ಕೃಷಿಕರು ಸೃಷ್ಟಿಯೊಂದಿಗೆ ಕೃಷಿ ಮಾಡುತ್ತಾ ಅನ್ನದಾತರಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾದಾಗ ಜನ್ಮತಾಳಿದ ರಾಷ್ಟ್ರೀಯ ಹಿತಚಿಂತನೆಗಳೊಂದಿಗೆ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ದೇಶದ ಅತಿ ದೊಡ್ಡ ರೈತ ಸಂಘಟನೆ ರಚನಾತ್ಮಕ ಕಾರ್ಯಕ್ರಮಗಳು ಅತ್ಯುತ್ತಮವಾಗಿವೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಮುಖ್ಯಸ್ಥ ಆಲಂಗೂರು ವೈ.ಸುರೇಂದ್ರಗೌಡ ತಿಳಿಸಿದರು. Indian farmers
ತಾಲೂಕಿನ ನರಸಿಂಹ ತೀರ್ಥ ಸಮೀಪವಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕಿಸಾನ್​ ಸಂಘದ ತಾಲೂಕು ಸಮಿತಿ ಹಾಗೂ ಗ್ರಾಮ ಸಮಿತಿಗಳ ಪ್ರತಿನಿಧಿಗಳ ಒಂದು ದಿನದ ಪ್ರಶಿಕ್ಷಣ ವರ್ಗ, ಗೋವುಪೂಜೆ, ರಾಶಿ ಪೂಜೆ, ಭಾರತಮಾತೆ ಮತ್ತು ಭಗವಾನ್​ ಬಲರಾಮ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇಪಾಳದ ಪಶುಪತಿನಾಥ ದೇವಾಲಯದಿಂದ ಹಿಡಿದು ತಿರುಪತಿಯ ಶ್ರೀನಿವಾಸ ದೇವಾಲಯದವರೆಗೂ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ತ್ಯದ ನೈವೇದ್ಯಕ್ಕೆ ವಿವಿಧ ತಳಿಗಳ ಭತ್ತ ಬೆಳೆದುಕೊಡುತ್ತಿದ್ದರು. ದೇಶಿಯ ನಾಟಿ ಹಸುವಿನ ಹಾಲು&ಮೊಸರು &ತುಪ್ಪವನ್ನು ನೀಡುತ್ತಿದ್ದ ಭಾರತೀಯ ಕೃಷಿಕರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಬಿಕೆಎಸ್​ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಕೆ.ಎನ್​.ನಾರಾಯಣಸ್ವಾಮಿ ಮಾತನಾಡಿ, ಇದು ರೈತರಿಗಾಗಿ, ರೈತರಿಂದ, ರೈತರ ಮೂಲಕ ನಡೆಯುವ ಸಂಘಟನೆಯಾಗಿದ್ದು, ರೈತ ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ, ಜಿಎಸ್​ಟಿ ರದ್ದು ಮತ್ತು ಕೃಷಿ ಒಳಹರಿವಿನ ಬೆಲೆ ಏರಿಕೆಗೆ ಅನುಗುಣವಾಗಿ ಪಿಎಂ ಕಿಸಾನ್​ ನಿಧಿ ಹೆಚ್ಚಳದಂತಹ ಬೇಡಿಕೆಗಳಿಗಾಗಿ ಹೋರಾಡುತ್ತದೆ ಎಂದರು.
ಕಿಸಾನ್​ ಸಂಘದ ಕಾರ್ಯ ನೀತಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ ಮಾತನಾಡಿ, ಯಾವುದೇ ರಾಜಕೀಯ ಸಂಬಂಧವಿಲ್ಲದೆ, ಕೇವಲ ರೈತರ ಹಿತಕ್ಕಾಗಿ ಕೆಲಸಕ್ಕೆ 1978ರಲ್ಲಿ ದತ್ತೋಪಂತ್​ ಥೇಂಗಡಿ ಸ್ಥಾಪಿಸಿದರು. ಭಾರತದ ರೈತರ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುವ ಒಂದು ರೈತ ಸಂಘಟನೆಯಾಗಿದೆ, ಇದನ್ನು ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ಜಾತ್ಯಾತಿತವಾಗಿ ಪಕ್ಷಾತಿತವಾಗಿ ರೈತರನ್ನು ಸಂಘಟಿಸುವ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು ಮಾದರಿಯಾಗಿದೆ ಎಂದರು.
ಸಾಧಕ ಕೃಷಿಕರಾದ ತೊಂಡಹಳ್ಳಿ ಪ್ರಭಾಕರ್​, ಡಿ.ಕುರುಬರಹಳ್ಳಿ ಪಾಪಮ್ಮ, ಮಿಣಿಜೇನಹಳ್ಳಿ ಪಾಪಮ್ಮ, ಹಾಸನದ ಡಾ.ಯೋಗೇಶ್​, ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಶ್ರೀನಿವಾಸಗೌಡ, ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ, ಮಹಿಳಾ ಪ್ರಮುಖ್​ ಬಿ.ಎಸ್​.ಶಶಿಕಲಾ, ಜಿಲ್ಲಾ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಯುವ ಪ್ರಮುಖ ನಂಗಲಿ ಸತೀಶ್​, ಉಪಾಧ್ಯಕ್ಷ ವೆಂಕಟರಾಮಚಾರಿ, ನಗರ ಘಟಕದ ಅಧ್ಯಕ್ಷ ಧನಂಜಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net