ಭಾರತೀಯ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠ

ದೇವರಹಿಪ್ಪರಗಿ ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಬನ್ನೆಪ್ಪ ಮುತ್ಯಾ ಹಾಗೂ ಮಲ್ಲಯ್ಯ ಮುತ್ಯಾ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಯಾದಗಿರಿ ಜಿ.ಪಂ. ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಾಡಿಯಾಪುರ ಉದ್ಘಾಟಿಸಿದರು. ಡಾ. ಪ್ರಭುಗೌಡ ಲಿಂಗದಳ್ಳಿ, ಸಿದ್ದಪ್ಪ ನಾಗರಳ್ಳಿ, ಶರಣಗೌಡ ಪಾಟೀಲ ಇತರರಿದ್ದರು.
ದೇವರಹಿಪ್ಪರಗಿ ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಬನ್ನೆಪ್ಪ ಮುತ್ಯಾ ಹಾಗೂ ಮಲ್ಲಯ್ಯ ಮುತ್ಯಾ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಯಾದಗಿರಿ ಜಿ.ಪಂ. ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಾಡಿಯಾಪುರ ಉದ್ಘಾಟಿಸಿದರು. ಡಾ. ಪ್ರಭುಗೌಡ ಲಿಂಗದಳ್ಳಿ, ಸಿದ್ದಪ್ಪ ನಾಗರಳ್ಳಿ, ಶರಣಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಪಂ. ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಾಡಿಯಾಪುರ ಹೇಳಿಕೆ
  • ಮಾಯಮ್ಮದೇವಿ ಹಬ್ಬ ಆಚರಣೆ
ದೇವರಹಿಪ್ಪರಗಿ: ಪಾಶ್ಚಿಮಾತ್ಯ ಸಂಸ್ಕೃತಿ ಸೋಗಿನಿಂದ ನಮ್ಮ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ನೆಲೆಗಟ್ಟನ್ನು ಮರೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸತ್ಸಂಗ ಹಾಗೂ ಸದ್ವಿಚಾರ ಬಿತ್ತುವ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ ಎಂದು ಯಾದಗಿರಿ ಜಿ.ಪಂ. ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಾಡಿಯಾಪುರ ಹೇಳಿದರು.

ಸಮೀಪದ ಮುಳಸಾವಳಗಿ ಗ್ರಾಮದ ಬನ್ನೆಪ್ಪ ಮುತ್ಯಾ ಹಾಗೂ ಮಲ್ಲಯ್ಯ ಮುತ್ಯಾ ಜಾತ್ರಾ ಮಹೋತ್ಸವ ನಿಮಿತ್ತ ಮಾಯಮ್ಮದೇವಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠವಾಗಿದೆ. ಅದನ್ನು ಧಾರ್ಮಿಕ ತಳಹದಿ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅನುಗ್ರಹ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಗ್ರಾಮಸ್ಥರು ಪ್ರತಿಯೊಂದು ಜಾತ್ರೆ, ಉತ್ಸವಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬರುತ್ತಿರುವುದು ಸರ್ವರಿಗೂ ಮಾದರಿಯಾಗಿದೆ. ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರೀತಿ ವಿಶ್ವಾಸ ಕಾಣಬಹುದು ಎಂದು ಹೇಳಿದರು.

ಗ್ರಾ.ಪಂ. ಸದಸ್ಯ ಮಾಜಿ ಸಿದ್ದಪ್ಪ ನಾಗರಳ್ಳಿ, ಶಿಕ್ಷಕ ಶರಣಗೌಡ ಪಾಟೀಲ ಮಾತನಾಡಿದರು.

ಶಾಮರಾಯ ಹುಗ್ಗೇನವರ, ಮಾದೇವಪ್ಪ ಪೂಜಾರಿ, ಬೀರಪ್ಪ ಪೂಜಾರಿ, ನಿಂಗರಾಯ ಮಹಾರಾಜರು, ಸಂಗನಗೌಡ ಬಿರಾದಾರ, ಶಿವಪುತ್ರ ಪೂಜಾರಿ, ಕಲ್ಲಪ್ಪ ಮೂಲಿಮನಿ, ಮಲಕಪ್ಪ ನಾಯ್ಕೋಡಿ, ಮಲಕು ಸುರಗಿಹಳ್ಳಿ, ದಾವಲಸಾಬ ಗಂಗೂರ, ಶಿವಪ್ಪ ನಾಯ್ಕೋಡಿ, ಉಮೇಶ ಮೂಲಿಮನಿ, ಪರಶುರಾಮ ನಾಯ್ಕೋಡಿ, ಚನ್ನು ಹದರಿ, ಸುರೇಶ ಉಕುಮನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net