ಮಹಿಳೆಯರಿಗೆ ಶಕ್ತಿ ತುಂಬಿದ ಭಾರತ ಸಂವಿಧಾನ

ಬಾಳ್ಳುಪೇಟೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಬಿ.ಆರ್.ಗುರುದೇವ್ ಇತರರಿದ್ದರು.
ಬಾಳ್ಳುಪೇಟೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಬಿ.ಆರ್.ಗುರುದೇವ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಶ್ರೇಯಸ್ ಪಟೇಲ್
  • ಬಾಳ್ಳುಪೇಟೆ
ಸಕಲೇಶಪುರ: ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿತ ಭಾರತದ ಸಂವಿಧಾನವೂ ಒಂದು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ತಾಲೂಕಿನ ಬಾಳ್ಳುಪೇಟೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯಿಂದ ಗುರುವಾರ ಆಯೋಜಿದ್ದ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರ್ಬಲರು, ಅಬಲರು, ಮಹಿಳೆಯರಿಗೆ ಸಂವಿಧಾನದಲ್ಲಿ ಸಮಾನತೆ ನೀಡಿದ್ದಲ್ಲದೆ ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂವಿಧಾನದಲ್ಲಿ ಸಾಕಷ್ಟು ಅಂಶಗಳನ್ನು ಸೇರಿಸ ಲಾಗಿದೆ. ಆ ಮೂಲಕ ಬಡವರ ಹಾಗೂ ದುರ್ಬಲರ ಪರವಾಗಿ ಅಂಬೇಡ್ಕರ್ ಮನ ಮಿಡಿಯುತ್ತಿತ್ತು ಎಂಬುದಕ್ಕೆ ಅವರ ಬರೆದ ಸಂವಿಧಾನವೇ ಸಾಕ್ಷಿ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಂವಿಧಾನದ ಮೂಲಕ ಕಟ್ಟಕಡೆಯ ಪ್ರಜೆಗೂ ಸಮಾನತೆ ನೀಡಿದ ಮಹಾನೀಯ ಡಾ. ಬಿ.ಆರ್.ಅಂಬೇಡ್ಕರ್. ಮುಂದುವರಿದ ಹಲವು ದೇಶಗಳಲ್ಲಿ ಇಂದಿಗೂ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿದೆ. ಆದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಮಹಿಳೆಯರಿಗೆ ಎಲ್ಲ ರಂಗಗಳಲ್ಲೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಇದರಿಂದಾಗಿ ಮಹಿಳೆಯರು ಎಲ್ಲ ರಂಗಗಳಲ್ಲೂ ಪುರುಷರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಇದಲ್ಲದೆ ಆರ್ಥಿಕವಾಗಿ ಹಿಂದುಳಿದ ಜನರೂ ಸಹ ಸಂವಿಧಾನ ಹಕ್ಕುಗಳನ್ನು ಪಡೆಯುವ ಮೂಲಕ ಸಮಾಜದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಇಂತಹ ಹಲವು ವಿಶಿಷ್ಟ ಅಂಶಗಳು ಸಂವಿಧಾನದಲ್ಲಿ ಸೇರಿರುವುದರಿಂದಲೇ ಪ್ರಪಂಚದಲ್ಲಿ ನಮ್ಮ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದೆನಿಸಿಕೊಂಡಿದೆ ಎಂದರು.
ಅಕ್ಕ ಐಎಎಸ್ ಅಕಾಡೆಮಿಯ ಡಾ.ಶಿವಕುಮಾರ್ ಮಾತನಾಡಿ, ಮಹಾತ್ಮರ ಜಯಂತಿಯನ್ನು ಕೇವಲ ಆಚರಣೆಯಿಂದ ಅನುಕರಣೆಯಾಗುವುದಿಲ್ಲ. ಬದಲಾಗಿ ಮಹನೀಯರ ಆದರ್ಶ ಹಾಗೂ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿಗಳಿಗೆ ಅರ್ಥ ಬರಲಿದೆ. ಮಕ್ಕಳಿಗೆ ಓದುವಂತಹ ವಾತಾವರಣವನ್ನು ಸೃಷ್ಟಿಸುವ ಹೊಣೆ ಪಾಲಕರ ಮೇಲಿದೆ. ಒಂದು ಗ್ರಾಮದಲ್ಲಿ ಎಷ್ಟು ಸಾಧಕರಿದ್ದಾರೆ ಎಂಬುದರ ಮೇಲೆ ಆ ಊರಿನ ಗೌರವ ಹೆಚ್ಚಲಿದೆ. ಯುವ ಜನಾಂಗ ಓದಿಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಬಿ.ಆರ್ ಗುರುದೇವ್, ಅಂಬೇಡ್ಕರ್ ಪ್ರಶಸ್ತಿ ಪುರಷ್ಕೃತ ಹೆತ್ತೂರು ಅಣ್ಣಯ್ಯ, ಮುಖಂಡರಾದ ಲಕ್ಷ್ಮಣ್ ಕೀರ್ತಿ, ಹೋರಾಟಗಾರ ಬಾಳ್ಳುಗೂಪಾಲ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net