ಗ್ರಾಮದ ಟಿ.ಜಿ.ಕಲ್ಯಾಣ ಮಂಟಪದಲ್ಲಿ ಮಾಸ್ತಿ ನಂದನ ಕಲಾನಿಕೇತನದ 2ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ನೃತ್ಯ ವೈಭವ, ಭರತನಾಟ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಕಲೆ, ಸಂಸತಿ, ಪರಂಪರೆಗಳ ನಾಡು. ಭಾರತೀಯ ಸಂಸತೀಯ ಪ್ರತಿಕವಾದ ಭರತನಾಟ್ಯ ಕಲೆಯಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಆಸಕ್ತಿ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ಶಿಕ್ಷಕರು ಇತರ ಚಟುವಟಿಕೆಗಳ ಮೂಲಕ ಮಕ್ಕಳಿಗೆ ತಿಳಿಸಬೇಕು. ಸಂಗೀತ ಹಾಗೂ ನೃತ್ಯ ಕಲೆ, ಸಾಹಿತ್ಯದ ಹೆಬ್ಬಾಗಿಲು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕಲೆ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದ ಕಲಾವಿದರು ವಿದುಷಿ ಆಶಾ ರಾಣಿ ಮತ್ತು ತಂಡದ ಭರತನಾಟ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದರು.