ಬಸವಸಾಗರಕ್ಕೆ ಹೆಚ್ಚಿದ ಒಳಹರಿವು

ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರ ನೋಟ.
ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಮೊಗದಲ್ಲಿ ಮಂದಹಾಸ
  • ಕೃಷ್ಣಾ ನದಿ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ
ಹುಣಸಗಿ : ಕೃಷ್ಣಾ ನದಿ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದರಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ.
ಮಳೆ ಕೊರತೆಯಿಂದ ಮುಂಗಾರಿನ ಭತ್ತ, ಕಬ್ಬು, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರು ಸಿಗದೆ ಆತಂಕ ಮನೆ ಮಾಡಿತ್ತು. ಆದರೀಗ ಮೇಲ್ಭಾಗದಿಂದ ನೀರಿನ ಹರಿವು ಹೆಚ್ಚುತ್ತ ಸಾಗಿದೆ. ಬಸವಸಾಗರ ಜಲಾಶಯ ವಿಜಯಪುರ, ಯಾದಗಿರಿ, ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿ¯್ಲÉಗಳ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ಜೀವನಾಡಿಯಾಗಿದ್ದಲ್ಲದೆ ಸಾವಿರಾರು ಗ್ರಾಮಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವೂ ಆಗಿದೆ. ಒಳಹರಿವು ಹೆಚ್ಚಳದಿಂದ ನೀರಿನ ಸಂಗ್ರಹ ಪ್ರಮಾಣವೂ ಏರಿಕೆಯಾಗುತ್ತಿದೆ.
ಹುಣಸಗಿ, ಸುರಪುರ, ಶಹಾಪುರ ಸೇರಿ ಕಮಾಂಡ್ ಪ್ರದೇಶದ ರೈತರು ಜಲಾಶಯ ನೀರಿನ ಮಟ್ಟದ ಮೇಲೆ ಕಣ್ಣಿಟ್ಟಿದ್ದು, ಕೃಷಿ ಚಟುವಟಿಕೆ ವೇಗ ಹಾಗೂ ಬಿತ್ತನೆ ಕಾರ್ಯ ವಿಸ್ತರಿಸಲು ರೈತರು ಸಿದ್ಧತೆ ನಡೆಸುತ್ತಿz್ದÁರೆ. ಕೃಷಿ ತಜ್ಞರ ಪ್ರಕಾರ, ಜಲಾಶಯದಲ್ಲಿ ಸಮರ್ಪಕ ನೀರು ಸಂಗ್ರಹವಿದ್ದರೆ ರೈತರು ನಿರಾಳವಾಗಿ ಬೆಳೆ ಬೆಳೆಯಬಹುದು. ಜತೆಗೆ ಬೇಸಿಗೆ ಅವಽಯಲ್ಲೂ ನೀರಿನ ಅಭಾವ ಉಂಟಾಗುವ ಸಾಧ್ಯತೆ ಕಡಿಮೆ. ಕುಡಿಯುವ ನೀರಿನ ಪೂರೈಕೆಗೂ ಯಾವುದೇ ತೊಂದರೆ ಎದುರಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ ಕುಸಿದಿರುವ ಸುದ್ದಿ ರೈತರಲ್ಲಿ ಆತಂಕ ಮೂಡಿಸಿತ್ತು. ಆದರೀಗ ಒಳಹರಿವು ಹೆಚ್ಚಾಗಿರುವುದು ಹೊಸ ಉತ್ಸಾಹ ತುಂಬಿದೆ. ಸಾಮಾಜಿಕ ಜÁಲತಾಣಗಳಲ್ಲೂ ಬಸವಸಾಗರದ ಒಳಹರಿವಿನ ಮಾಹಿತಿ ವ್ಯಾಪಕ ವೈರಲ್ ಆಗುತ್ತಿದೆ. ಇನ್ನೂ ಕೆಲದಿನ ಕೃಷ್ಣಾ ಮೇಲ್ಭಾಗದಲ್ಲಿ ಉತ್ತಮ ಮಳೆ ಮುಂದುವರಿದರೆ ಬಸವಸಾಗರ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆ ಆಗಲಿದೆ.

ಅಣೆಕಟ್ಟು ಶೇ.೮೨ ಭರ್ತಿ

ಆಲಮಟ್ಟಿಯಿಂದ ಬಸವಸಾಗರಕ್ಕೆ ನಿತ್ಯ ೪೩ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ ಗುರುವಾರ ಬೆಳಗ್ಗಿನವರೆಗೆ ೨೭ ಟಿಎಂಸಿ ನೀರಿದ್ದು, ಶೇ.೮೨ ಜಲಾಶಯ ಭರ್ತಿಯಾಗಿದೆ. ಶುಕ್ರವಾರ ಆಲಮಟ್ಟಿಯಲ್ಲಿ ೧೦೬.೭೬೬ ಟಿಎಂಸಿ ನೀರಿದ್ದರೆ, ೬೭,೫೦೦ ಕ್ಯೂಸೆಕ್ ಒಳಹರಿವಿದೆ. ಈ ಪ್ರಮಾಣ ಹೆಚ್ಚಾದರೆ ಎರಡು ಜಲಾಶಯ ಸೇರಿ ೬೫ ಟಿಎಂಸಿ ನೀರು ಕುಡಿಯಲು ಶೇಖರಿಸಿಟ್ಟು ಉಳಿದದ್ದು ಕೃಷಿ ಚಟುವಟಿಕೆಗಾಗಿ ಕಾಲುವೆಗೆ ಹರಿಸುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net