ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಕಳೆದ 3 ವರ್ಷಗಳಲ್ಲಿ 79,125 ವಿವಿಧ ಆಹಾರ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ 700 ಮಾದರಿಗಳು ಅಸುರಕ್ಷಿತ, 686 ಮಾದರಿಗಳು ಕಳಪೆ ಎಂಬುದು ತಿಳಿದು ಬಂದಿದೆ. ಅಸುರಕ್ಷಿತ ಕೇಸ್ ಕಂಡುಬಂದ ಹಿನ್ನೆಲೆ 411 ಕೇಸ್ ದಾಖಲಿಸಿ 50 ಪ್ರಕರಣಗಳಲ್ಲಿ 10.55 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಇನ್ನು ಕಳಪೆ ಆಹಾರ ಎಂದು ವರದಿಯಾದ ಕೇಸ್‌ಗಳಲ್ಲಿ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹೂಡಿಕೆಯಾದ 526 ಮೊಕದ್ದಮೆಗಳಲ್ಲಿ 400 ಕೇಸ್‌ಗಳು ಇತ್ಯರ್ಥಗೊಂಡು, 74.99 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. 72369 ಆಹಾರ ಉದ್ದಿಮೆದಾರರಿಗೆ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯ ಕುರಿತು ತರಬೇತಿ ನೀಡಲಾಗಿದೆ. ಬೆಂಗಳೂರು ನಗರ, ಬೆಳಗಾವಿ, ಬೀದರ್, ಕೊಪ್ಪಳ, ವಿಜಯಪುರ, ಗದಗ, ಮೈಸೂರು, ಮಂಡ್ಯದಲ್ಲಿ ಅಧಿಕವಾಗಿ ಅಸುರಕ್ಷಿತ, ಕಳಪೆ ಆಹಾರ ಪತ್ತೆ ಕೇಸ್ ದಾಖಲಾಗಿವೆ.