ವಾಹನಗಳ ವಾಯು ಮಾಲಿನ್ಯ ತಪಾಸಣಾ ಶುಲ್ಕ ಹೆಚ್ಚಳ: ಸಾರಿಗೆ ಇಲಾಖೆ ಆದೇಶ-vehicle air pollution inspection fees hike

ವಾಹನಗಳ ವಾಯು ಮಾಲಿನ್ಯ ತಪಾಸಣಾ (ಪಿಯುಸಿಸಿ) ದರ ಹೆಚ್ಚಳ
ವಾಹನಗಳ ವಾಯು ಮಾಲಿನ್ಯ ತಪಾಸಣಾ (ಪಿಯುಸಿಸಿ) ದರ ಹೆಚ್ಚಳ
Published on

ಬೆಂಗಳೂರು: ರಾಜ್ಯದಲ್ಲಿ ವಾಹನಗಳ ವಾಯು ಮಾಲಿನ್ಯ ತಪಾಸಣಾ (ಪಿಯುಸಿಸಿ) ದರ ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಇಂಧನ, ಬಾಡಿಗೆ, ಇಂಟರ್ನೆಟ್, ಯಂತ್ರೋಪಕರಣಗಳ ನಿರ್ವಹಣೆ, ಸಿಬ್ಬಂದಿ ವೇತನ ಮತ್ತು ನಿರ್ವಹಣಾ ವೆಚ್ಚಗಳು ಅಧಿಕವಾಗಿದ್ದರೂ ದರ ಪರಿಷ್ಕರಣೆ ಆಗಿರಲಿಲ್ಲ. ಹಾಗಾಗಿ ದರ ಹೆಚ್ಚಿಸುವಂತೆ ಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರು ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಪರಿಷ್ಕೃತ ದರ ಹೆಚ್ಚಿಸಿದೆ. 2022ರ ಏಪ್ರಿಲ್‌ನಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು.ದ್ವಿಚಕ್ರ ವಾಹನಕ್ಕೆ 15 ರೂ., ಆಟೋ ರಿಕ್ಷಾ 5 ರೂ., ಪೆಟ್ರೋಲ್, ಸಿಎನ್‌ಜಿ, ಪಿಎನ್‌ಜಿ ಹೊಂದಿರುವ ನಾಲ್ಕು ಚಕ್ರದ ವಾಹನಗಳು 35 ರೂ ಮತ್ತು ಎಲ್ಲ ಮಾದರಿಯ ಡೀಸೆಲ್ ವಾಹನಗಳಿಗೆ 40 ರೂ. ಪಿಯುಸಿಸಿ ಶುಲ್ಕ ಏರಿಕೆ ಮಾಡಲಾಗಿದೆ.

ಪ್ರಮಾಣಪತ್ರಗಳ ದುರ್ಬಳಕೆ ತಡೆಗೆ ಮತ್ತು ಅವುಗಳ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಪತ್ರದಲ್ಲಿ ಹೊಲೊಗ್ರಾಮ್ ಇರುವುದು ಕಡ್ಡಾಯಗೊಳಿಸಲಾಗಿದೆ ಎಂದು ಆದೇಶದಲ್ಲಿ ಇಲಾಖೆ ಉಲ್ಲೇಖಿಸಿದೆ.

ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 115ರ ಪ್ರಕಾರ ನಿಗದಿತ ಮಾಲಿನ್ಯ ಮಿತಿಯೊಳಗಿರುವ ವಾಹನಗಳಿಗೆ ಮಾತ್ರ ಪ್ರಮಾಣಪತ್ರ ನೀಡಬೇಕು. ಭಾರತ್ ಸ್ಟೇಜ್-ಐವಿ ಮತ್ತು ಭಾರತ್ ಸ್ಟೇಜ್-ವಿಐ ವಾಹನಗಳಿಗೆ ನೀಡಲಾಗುವ ಪ್ರಮಾಣಪತ್ರವು 12 ತಿಂಗಳ ಕಾಲ ಸಿಂಧುತ್ವ ಹೊಂದಿರುತ್ತದೆ. ತಪಾಸಣಾ ಕೇಂದ್ರಗಳ ಪರವಾನಗಿಯನ್ನು ಸಾರ್ವಜನಿಕರಿಗೆ ಕಾಣಿಸುವ ಸ್ಥಳದಲ್ಲಿ ಪ್ರದರ್ಶಿಸಬೇಕು ಹಾಗೂ ವಾಹನಗಳ ತಪಾಸಣೆಗೆ ಸೂಕ್ತ ಸ್ಥಳಾವಕಾಶ ಹೊಂದಿರಬೇಕು ಎಂದು ಇಲಾಖೆ ಹೇಳಿದೆ.

ದರ ವಿವರಗಳು:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net