ರಕ್ತದೊತ್ತಡದಿಂದ ಕಾಯಿಲೆಗಳ ಹೆಚ್ಚಳ

ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗ ಈಚೆಗೆ ಏರ್ಪಡಿಸಿದ್ದ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಸಮಾರಂಭದಲ್ಲಿ ಡಾ.ಎಂ.ದಯಾನಂದ ಮಾತನಾಡಿದರು. ಡಾ.ಸಂಜಯ ಪೋರವಾಲ, ಡಾ.ಸುರೇಶ ಪಟ್ಟೆದ, ಡಾ.ಸಮೀರ ಅಂಬರ, ಡಾ.ವಿಜಯಾನಂದ ಮೆಟಗುಡ್ಡಮಠ, ಡಾ.ಸುಹಾಸಿನಿ ಅಗರ್ಥಾ, ಡಾ.ವಿಶ್ವನಾಥ ಹೆಸರೂರ ಇತರರಿದ್ದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗ ಈಚೆಗೆ ಏರ್ಪಡಿಸಿದ್ದ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಸಮಾರಂಭದಲ್ಲಿ ಡಾ.ಎಂ.ದಯಾನಂದ ಮಾತನಾಡಿದರು. ಡಾ.ಸಂಜಯ ಪೋರವಾಲ, ಡಾ.ಸುರೇಶ ಪಟ್ಟೆದ, ಡಾ.ಸಮೀರ ಅಂಬರ, ಡಾ.ವಿಜಯಾನಂದ ಮೆಟಗುಡ್ಡಮಠ, ಡಾ.ಸುಹಾಸಿನಿ ಅಗರ್ಥಾ, ಡಾ.ವಿಶ್ವನಾಥ ಹೆಸರೂರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಅಧಿಕ ರಕ್ತದೊತ್ತಡ ಆರೋಗ್ಯಕ್ಕೆ ಗಂಭೀರ ತೊಂದರೆಯನ್ನುಂಟು ಮಾಡುವ ಕಾಯಿಲೆಯಾಗಿದ್ದು, ಇದು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿನ ಜನರು ಹೆಚ್ಚಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಅಭಿಪ್ರಾಯಪಟ್ಟರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗ ಈಚೆಗೆ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕಡಿಮೆ ಮತ್ತು ಮಧ್ಯಮ-ಆದಾಯದವರು ತಮಗೆ ರಕ್ತದೊತ್ತಡ ಇದೆ ಎಂಬುದನ್ನೇ ಅರಿತಿಲ್ಲ. ಯುವಕರಲ್ಲಿ ರಕ್ತದೊತ್ತಡ ಕಂಡುಬರುತ್ತಿರುವದು ಅತ್ಯಂತ ಅಪಾಯಕಾರಿ. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಕೆಲಸದೊತ್ತಡದಿಂದ ರಕ್ತದೊತ್ತಡ ಕಂಡು ಬರುತ್ತಿದೆ. ಆದ್ದರಿಂದ ಸರಿಯಾದ ಸಮಯಕ್ಕೆ ತಪಾಸಣೆಗೆ ಒಳಡದಿದ್ದರೆ, ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದರು.
ವಿಭಾಗ ಮುಖ್ಯಸ್ಥ ಡಾ.ಸಂಜಯ ಪೋರವಾಲ ಮಾತನಾಡಿ, ಅಧಿಕ ರಕ್ತದೊತ್ತಡ ಯಾವುದೇ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ, ಇದು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ಕಾಯಿಲೆ ಹಾಗೂ ಅಕಾಲಿಕ ಮರಣದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಶೀಘ್ರದಲ್ಲಿ ಅದನ್ನು ಪತ್ತೆಹಚ್ಚಿ ನಿಯಮಿತ ಚಿಕಿತ್ಸೆ ಹಾಗೂ ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂದರು.
ಹಿರಿಯ ಹೃದ್ರೋಗ ತಜ್ಞ ವೈದ್ಯ ಡಾ.ಸುರೇಶ ಪಟ್ಟೆದ, ಡಾ.ಸಮೀರ ಅಂಬರ, ಡಾ.ವಿಜಯಾನಂದ ಮೆಟಗುಡ್ಡಮಠ, ಡಾ.ಸುಹಾಸಿನಿ ಅಗರ್ಥಾ, ಡಾ.ವಿಶ್ವನಾಥ ಹೆಸರೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net