ತಂತ್ರಜ್ಞಾನ ಬಳಕೆಯಲ್ಲಿ ಆದಾಯ ತೆರಿಗೆ ಇಲಾಖೆ ಮುಂಚೂಣಿ; ನಂದನ್ ನಿಲೇಕಣಿ ಮೆಚ್ಚುಗೆ

167ನೇ ಆದಾಯ ತೆರಿಗೆ ದಿನಾಚರಣೆಯಲ್ಲಿ ಇನ್ಫೋಸಿಸಿ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಇಲಾಖೆ ಪ್ರಧಾನ ಮುಖ್ಯ ಆಯುಕ್ತೆ ವಿದಿಶಾ ಕಲ್ರಾ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
167ನೇ ಆದಾಯ ತೆರಿಗೆ ದಿನಾಚರಣೆಯಲ್ಲಿ ಇನ್ಫೋಸಿಸಿ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಇಲಾಖೆ ಪ್ರಧಾನ ಮುಖ್ಯ ಆಯುಕ್ತೆ ವಿದಿಶಾ ಕಲ್ರಾ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಂತ್ರಜ್ಞಾನ ಬಳಕೆಯಲ್ಲಿ ಆದಾಯ ತೆರಿಗೆ ಇಲಾಖೆ ಮುಂಚೂಣಿ
  • ಇನ್​ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮೆಚ್ಚುಗೆ
  • 167ನೇ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮ

ಬೆಂಗಳೂರು:ಸಾರ್ವಜನಿಕಸೇವೆ, ಆಡಳಿತವ್ಯವಸ್ಥೆಯಲ್ಲಿ ಆನ್‌ಲೈನ್ ಬಳಕೆಹೆಚ್ಚಾಗಿದ್ದು,ತಂತ್ರಜ್ಞಾನಆಧಾರಿತ ಉತ್ತಮ ಸೇವೆಯನ್ನುನೀಡುವಲ್ಲಿ ಆದಾಯ ತೆರಿಗೆ ಇಲಾಖೆಮುಂಚೂಣಿಯಲ್ಲಿದೆ ಎಂದು ಇನ್ಫೋಸಿಸ್ಸಹ ಸಂಸ್ಥಾಪಕ ಹಾಗೂ ಯುಐಡಿಎಐಸಂಸ್ಥಾಪಕ ಅಧ್ಯಕ್ಷ ನಂದನ್ನಿಲೇಕಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ವೀನ್ಸ್ರಸ್ತೆಯಲ್ಲಿರುವ ಸೆಂಟ್ರಲ್ರೆವಿನ್ಯೂ ಭವನದ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಮತ್ತು ಗೋವಾ ವಲಯದಪ್ರಧಾನ ಮುಖ್ಯ ಆದಾಯ ತೆರಿಗೆಆಯುಕ್ತರ ಕಚೇರಿ ಹಮ್ಮಿಕೊಂಡಿದ್ದ167ನೇಆದಾಯ ತೆರಿಗೆ ದಿನಾಚರಣೆಯನ್ನುಉದ್ಘಾಟಿಸಿ ಮಾತನಾಡಿದರು.

ಪ್ಯಾನ್,ಕೇಂದ್ರೀಕೃತಪ್ರಕ್ರಿಯಾ ಕೇಂದ್ರ (ಸಿಪಿಸಿ),ಆನ್‌ಲೈನ್ ಆದಾಯತೆರಿಗೆ ರಿಟರ್ನ್ ಸಲ್ಲಿಕೆ,ಫೇಸ್‌ಲೆಸ್ಮೌಲ್ಯಮಾಪನ ಹಾಗೂ ವಾರ್ಷಿಕ ಮಾಹಿತಿವಿವರ (ಎಐಎಸ್)ಸೇರಿದಂತೆ ಹಲವುಡಿಜಿಟಲ್ ಸೇವೆಗಳ ಮೂಲಕ ಆದಾಯತೆರಿಗೆ ಇಲಾಖೆ ತಂತ್ರಜ್ಞಾನಆಧಾರಿತ ಆಡಳಿತದಲ್ಲಿ ಮುಂಚೂಣಿಯಲ್ಲಿದೆ.ಪ್ಯಾನ್ ಕಾರ್ಡ್ಮತ್ತು ಆಧಾರ್ ಲಿಂಕ್ ಆಗಿರುವುದರಿಂದಬಹುತೇಕ ಡೂಪ್ಲಿಕೇಶನ್ ಮತ್ತುಹಣಕಾಸಿನ ವಂಚನೆ ಪ್ರಕರಣಗಳುತಗ್ಗಿವೆ. ಇನ್ನೂಮುಂದುವರೆದು ಕೃತಕ ಬುದ್ಧಿಮತ್ತೆ(ಎಐ)ಹಾಗೂ ಡಿಜಿಟಲ್ಸಾರ್ವಜನಿಕ ಮೂಲಸೌಕರ್ಯಗಳಬಳಕೆಯಿಂದ ತೆರಿಗೆ ವ್ಯವಸ್ಥೆಇನ್ನಷ್ಟು ಪಾರದರ್ಶಕ,ಪರಿಣಾಮಕಾರಿಹಾಗೂ ಜನಸ್ನೇಹಿಯಾಗುವ ನಿರೀಕ್ಷೆಇದೆ. ಈಗಾಗಲೇಡಿಜಿಟಲ್ ಸೇವೆಯಿಂದಾಗಿ ತೆರಿಗೆಕಟ್ಟುವವರ ಹಾಗೂ ಆದಾಯ ತೆರಿಕೆರಿಟರ್ನ್ ೈಲ್ ಮಾಡುವವ ಸಂಖ್ಯೆಕೂಡಾ ಗಣನೀಯವಾಗಿ ಹೆಚ್ಚಾಗಿದೆಎಂದು ನಿಲೇಕಣಿ ಅಭಿಪ್ರಾಯಿಸಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಕರ್ನಾಟಕಮತ್ತು ಗೋವಾ ವಲಯದ ಪ್ರಧಾನ ಮುಖ್ಯಆದಾಯ ತೆರಿಗೆ ಆಯುಕ್ತೆ ವಿದಿಶಾಕಲ್ರಾ ವಹಿಸಿದ್ದರು.ಹಿರಿಯ ಅಧಿಕಾರಿಗಳುಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿಇಲಾಖೆಯ ಕ್ರೀಡಾಪಟುಗಳನ್ನು ಅವರಸಾಧನೆಗಾಗಿ ಸನ್ಮಾನಿಸಲಾಯಿತು.ಹಾಗೂ ಇಲಾಖೆಗೆಅತ್ಯುತ್ತಮ ಸೇವೆ ಸಲ್ಲಿಸಿದಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆಶ್ರೇಷ್ಠತಾ ಪ್ರಮಾಣಪತ್ರಗಳನ್ನುನೀಡಿ ಗೌರವಿಸಲಾಯಿತು.

ಫೇಸ್‌ಲೆಸ್ ಮೌಲ್ಯಮಾಪನ, 2025ರ ಆದಾಯ ತೆರಿಗೆ ಕಾಯ್ದೆಯನ್ವಯ ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಮೂಲಕ ಇಲಾಖೆ ಪಾರದರ್ಶಕ ಆಡಳಿತವನ್ನು ರೂಪಿಸಿದೆ. ಸ್ವಯಂಪ್ರೇರಿತ ತೆರಿಗೆ ಪಾವತಿ, ಪರಸ್ಪರ ವಿಶ್ವಾಸ ಮತ್ತು ಸಹಭಾಗಿತ್ವದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದ್ದು, ಸಮಯಕ್ಕೆ ಸರಿಯಾಗಿ ತೆರಿಗೆ ಸಂಗ್ರಹಿಸಿ ದೇಶದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ಜವಾಬ್ದಾರಿ ಇಲಾಖೆಯ ಮೇಲಿದೆ.

— ವಿದಿಶಾ ಕಲ್ರಾ, ಆದಾಯ ತೆರಿಗೆ ಪ್ರಧಾನ ಆಯುಕ್ತರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net