ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ

ಸೆ.9ರಂದು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಬೃಹತ್​ ಪ್ರತಿಭಟನೆಯ ಹಿನ್ನಲೆಯಲ್ಲಿ ಶಿಡ್ಲಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಇತ್ತೀಚೆಗೆ ನಿವೃತ್ತಿಯಾದ ಪಿಎಸ್​ಐ ವೇಣುಗೋಪಾಲ್​ ಅವರನ್ನು ಸನ್ಮಾನಿಸಲಾಯಿತು.ರಾಜ್ಯ ಮಡಿವಾಳರ ಸಂದ ಉಪಾಧ್ಯಕ್ಷ ಆರ್​.ವಿ.ರಾಜಣ್ಣ, ಖಜಾಂಚಿ ಆರ್​.ಮಂಜುನಾಥ್​, ಕಾರ್ಯಾಧ್ಯಕ್ಷ ವಿ.ಸೋಮಶೇಖರ್​, ಜಿಲ್ಲಾಧ್ಯಕ್ಷ ಗಿರೀಶ್​, ಗೌರವಾಧ್ಯಕ್ಷ ವೇಣುಗೋಪಾಲ್​ ಇದ್ದರು.

Published on
ಶಿಡ್ಲಟ್ಟ: ರಾಜ್ಯದಲ್ಲಿ 18 ಲಕ್ಷ ಜನಸಂಖ್ಯೆಯಿರುವ ಮಡಿವಾಳ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಎಸ್​ಸಿ ಹೋರಾಟ ಸಮಿತಿ ಅಧ್ಯಕ್ಷ ಎಸ್​.ಸಿದ್ದಲಿಂಗಯ್ಯ ಒತ್ತಾಯಿಸಿದರು.
ಸೆ.9ರಂದು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಬೃಹತ್​ ಪ್ರತಿಭಟನೆಯ ಹಿನ್ನಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಸರ್ಕಾರ ಮಡಿವಾಳ ಸಮಾಜವನ್ನು ಪದೇ ಪದೆ ರ್ನಿಲಸುತ್ತಿದೆ. ದೇಶದ ಸುಮಾರು 17 ರಾಜ್ಯಗಳು ಹಾಗು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆಯಾದರೂ ಕರ್ನಾಟಕದಲ್ಲಿ ಈವರೆಗೂ ಆಗಿಲ್ಲ. ಅನೇಕ ವರ್ಷಗಳಿಂದ ಸಮುದಾಯದಿಂದ ಪ್ರತಿಭಟನೆ, ಹೋರಾಟ ನಡೆಸಿದರು ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹಾಗಾಗಿ ಸೆ.9ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಅಧ್ಯಕ್ಷ ಡಿ.ವಿ.ಕೃಷ್ಣಪ್ಪ, ಉಪಾಧ್ಯಕ್ಷ ಎನ್​.ಹರೀಶ್​, ಪ್ರಧಾನ ಕಾರ್ಯದರ್ಶಿ ಎಚ್​.ಎನ್​.ಮುನಿರಾಜ್​, ವೇಣುಗೋಪಾಲ್​, ಮುಖಂಡರಾದ ಎಚ್​.ವಿ.ಶ್ರೀನಿವಾಸ್​, ದೇವರಾಜ್​, ಎಂ.ರಮೇಶ್​, ದೊಡ್ಡ ವೇಮಣ್ಣ, ಚಂದ್ರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net