ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆಗಳು ಆರಂಭಗೊಂಡವು. ಮೂರು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಉಗನಿಯ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಮೂರ್ತಿ ನೇತೃತ್ವದ 10 ಅರ್ಚಕರ ತಂಡ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಆದಿಶಕ್ತಿ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಬಳಿಕ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ದೇಗುಲವನ್ನು ವಿದ್ಯುತ್ ದೀಪಗಳು ಹಾಗೂ ಹಸಿರು ತೋರಣದಿಂದ ಸಿಂಗರಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಈ ವೇಳೆ ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನೇಗೌಡ, ಉಪಾಧ್ಯಕ್ಷ ಬಸವಣ್ಣ, ಕಾರ್ಯದರ್ಶಿ ಕೋಟೆ ನಂಜುಂಡ, ಉಪ ಕಾರ್ಯದರ್ಶಿ ಕಾಂತು, ಖಜಾಂಚಿ ನಾಗೇಂದ್ರಚಾರ್, ಜಂಟಿ ಖಜಾಂಚಿ ಸುಂದರಪ್ಪ, ಸದಸ್ಯರಾದ ಸಂತೋಷ ಕುಸಪ್ಪ, ಜಯಣ್ಣ, ಪ್ರಕಾಶ್, ಕೋಟೆ ಶಾಂತು, ರಾಚಪ್ಪ, ಪಾಪಯ್ಯ ದೆಹಲಿ ಏರ್‌ಟೆಲ್ ಸಂಸ್ಥೆ ಉಪಾಧ್ಯಕ್ಷೆ ಸಪ್ನಸುಕುಮಾರ್, ಗ್ರಾಪಂ ಆಧ್ಯಕ್ಷ ಎಂ.ಮಲ್ಲೇಶ್, ತಾಪಂ ಮಾಜಿ ಅಧ್ಯಕ್ಷ ಪುಟ್ಟರಾಜು, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ದತ್ತೇಶ್‌ಕುಮಾರ್, ಕಾಂಗ್ರೆಸ್ ಮುಖಂಡ ತೆಳ್ಳನೂರು ಪ್ರದೀಪ್, ನಿವೃತ್ತ ಎಸ್‌ಐ ಶಿವರಾಜ್, ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಾದೇಗೌಡ, ನಿವೃತ್ತ ಡಿಎಚ್‌ಒ ಡಾ.ಸಿದ್ದೇಗೌಡ ಇತರರು ಇದ್ದರು.