ಮುನಿರಾಬಾದ್: ಶಹಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅನುಕೂಲಕ್ಕಾಗಿ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಿರ್ಮಿಸಲಾದ ಹೈಟೆಕ್ ಶೌಚಗೃಹವನ್ನು ಗುರುವಾರ ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಉಚಿತ ಸ್ಕೂಲ್ ಬ್ಯಾಗ್ ಹಾಗೂ ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬೆಂಗಳೂರಿನ ‘ಪೀಪಲ್ ಫಾರ್ ಪೀಪಲ್ ಟ್ರಸ್ಟ್’ ಸಂಸ್ಥೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕೊಡುಗೆಯಾಗಿ ನೀಡಿದ ಆಟದ ಸಾಮಗ್ರಿಗಳಿಗೂ ಚಾಲನೆ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಪ್ರಮುಖರಾದ ಹುಲ್ಲೇಶ್ ಕುರಿ, ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಕಿರಣ್, ಉದ್ಧವ್ ಕುಲಕರ್ಣಿ, ಪ್ರಕಾಶ್, ಗ್ರಾಪಂ ಆಡಳಿತಾಧಿಕಾರಿ ಜಗನ್ನಾಥ ಜೋತಗೊಂಡ ಇತರರಿದ್ದರು.