ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಸಂಗ್ರಹಗೊಳ್ಳುವ ನೀರಿನಮಟ್ಟವೂ ಕ್ಷೀಣಿಸಿರುವುದರಿಂದ ತಾಲೂಕಿನ ವಿಶ್ವೇಶ್ವರಯ್ಯ ತೂರುಗನೂರು ಬ್ರಾಂಚ್, ರಾಮಸ್ವಾಮಿ, ಚಿಕ್ಕದೇವರಾಜ, ರಾಜಪರಮೇಶ್ವರಿ, ಮಾಧವಮನಮಂತ್ರಿ ಹಾಗೂ ಕಬಿನಿ ಬಲದಂಡೆ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಅಲ್ಲದೆ ಕಗ್ಗಲೀಪುರ ಸೇರಿದಂತೆ ಉಕ್ಕಲಗೆರೆ, ಚಾಮನಹಳ್ಳಿ, ಮಲಿಯೂರು, ಬಿ.ಬೆಟ್ಟಹಳ್ಳಿ, ಬೂದಹಳ್ಳಿ, ನಾಗಲಗೆರೆ, ನರಗ್ಯಾತನಹಳ್ಳಿ, ಕೊಳತ್ತೂರು, ಚಿದರವಳ್ಳಿ, ರಾಮೇಗೌಡನಪುರ ಹಾಗೂ ಹಲವು ಗ್ರಾಮಗಳ ನೂರಾರು ಕೆರೆಗಳು ಹನಿ ನೀರು ಇಲ್ಲದೆ ಒಣಗುತ್ತಿವೆ.