ಜಲಾಗ್ರಹ ಸಮಾವೇಶಕ್ಕೆ ಒಗ್ಗಟ್ಟಾಗಿ Convention

ಜಲಾಗ್ರಹ ಸಮಾವೇಶಕ್ಕೆ ಒಗ್ಗಟ್ಟಾಗಿ Convention
ಜಲಾಗ್ರಹ ಸಮಾವೇಶಕ್ಕೆ ಒಗ್ಗಟ್ಟಾಗಿ Convention
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಗಳ ಕರೆ
  • ಶಾಶ್ವತ ನೀರಾವರಿಗಾಗಿ ಹಕ್ಕೋತ್ತಾಯ 17ರಂದು ಹಕ್ಕೋತ್ತಾಯ
ಶ್ರೀನಿವಾಸಪುರ: ಪಟ್ಟಣದಲ್ಲಿ ಪಕ್ಷಾತಿತವಾಗಿ ಎಲ್ಲ ರಾಜಕೀಯ ಪಕ್ಷದ ಮುಖಂಡರು ನೀರಾವರಿ ಹೋರಾಟಗಾರರು ಪ್ರಗತಿಪರ ರೈತರು ಒಂದಾಗಿ ಇದೆ ತಿಂಗಳ 17ರಂದು ಕೋಲಾರದಲ್ಲಿ ಆಯೋಜಿಸಿರುವ ಶಾಶ್ವತ ನೀರಾವರಿ ಜಾರಿಗಾಗಿ "ಜಲಾಗ್ರಹ' ಕಾರ್ಯಕ್ರಮ ಯಶಸ್ವಿಗೆ ತೀಮಾರ್ನಿಸಲಾಯಿತು. Convention
ಪಟ್ಟಣದ ಶ್ರೀ ಲಕ್ಷಿ$್ಮವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ಮುಖಂಡರು ನೀರು ನಮಗೆ ಬಹಳ ಮುಖ್ಯವಾಗಿದ್ದು, ಸರ್ಕಾರ ಗಮನ ಸೆಳೆಯಲು ಪ್ರತಿ ಮನೆಮನೆಗೂ ಒಬ್ಬರಂತೆ ಆಂದೋಲನ ಮೂಲಕ ಹೋರಾಟಕ್ಕೆ ಸಿದ್ಧವಾಗಬೇಕು ಎಂದು ತೀಮಾರ್ನಿಸಿದರು.
ಹೋರಾಟದಲ್ಲಿ. ರಾಜಕೀಯ ಪಕ್ಷ ಬೇಧಗಳು ಬದೆಗೊತ್ತಿ ಎಲ್ಲ ಪಕ್ಷಗಳ ಮುಖಂಡರು, ಪ್ರಗತಿಪರ ರೈತರು, ಕನ್ನಡಪರ ಹೋರಾಟಗಾರರು, ದಲಿತ ಸಂಘಟನೆಗಳು, ರೈತ ಸಂಘ, ಹಸಿರು ಸೇನೆಯೊಂದಿಗೆ ಸಾರ್ವಜನಿಕರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಚರ್ಚಿಸಿದರು.
ಕ್ಷೇತ್ರದ ರಾಜಕಾರಣಿಗಳು ನೀರಾವರಿ ಹೋರಾಟದಲ್ಲಿ ವಿಫಲರಾಗಿದ್ದಾರೆ. ಕೆ.ಸಿ. ವ್ಯಾಲಿ ನೀರು ಕೆರೆಗಳಿಗೆ ತುಂಬಿದ ಸ್ವಲ್ಪ ಪ್ರಮಾಣದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಇದರಿಂದ ಆಗುವ ಆರೋಗ್ಯದ ಮೇಲೆ ಪರಿಣಾಮ ತಪ್ಪಿಸಲು 3ನೇ ಹಂತದ ಶುದ್ಧೀಕರಣ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃಷ್ಣಾನದಿ, ಯರಗೋಳ ಯೋಜನೆ ಮೂಲಕ ನಮಗೆ ನೀರು ಸಿಗಬೇಕು ಎಂಬುದನ್ನು ಅರಿಯಬೇಕು. ಇಲ್ಲವಾದಲ್ಲಿ ಕೋಲಾರ ಜಿಲ್ಲೆ, ಬರಡು ಜಿಲ್ಲೆಯಾಗುತ್ತದೆ. ಮುಂದಿನ ನಮ್ಮ ಪೀಳಿಗೆಗೆ ನೀರಿಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲ ಸಮಸ್ಯೆಗಳನ್ನು ನೀಗಿಸಲು ಜನ ಪ್ರತಿನಿಧಿಗಳಿಗೆ ಬುದ್ದಿ ಬರುವಂತೆ ಸರ್ಕಾರ ಗಮನ ಸೆಳೆಯಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ತೀಮಾರ್ನಿಸಿದರು.
ಕೆಪಿಆರ್​ಎಸ್​ ಉಪಾಧ್ಯಕ್ಷ ಸೂರ್ಯನಾರಾಯಣ, ಜಿಲ್ಲಾ ಉಪಾಧ್ಯಕ್ಷ ಪಾತಕೋಟೆ ನವೀನ್​, ಸೈಯದ್​ ಫಾರೂಕ್​, ರೈತ ಸಂಘದ ಉಪಾಧ್ಯಕ್ಷ ಬೈಚೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲ್​ ರೆಡ್ಡಿ, ಆದಿಜಾಂಬವ ಸಂಘದ ಗೌರವಾಧ್ಯಕ್ಷ ಸಾಧಿಕ್​ ಅಹ್ಮದ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net