ಮಮದಾಪುರ: ಗ್ರಾಮದ ಶ್ರೀ ಬೀರಸಿದ್ಧೇಶ್ವರ ದೇವಸ್ಥಾನದಲ್ಲಿ ಮೇ 4ರಿಂದ 5ರವರೆಗೆ ತೊಟ್ಟಿಲೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಮೇ 4ರಂದು ಬೆಳಗ್ಗೆ 6ಗಂಟೆಗೆ ಬೀರಸಿದ್ಧೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಬಳಿಕ ತೊಟ್ಟಿಲು ಕಟ್ಟುವ ಕಾರ್ಯಕ್ರಮ, ಭರಮದೇವರ ಪಲ್ಲಕ್ಕಿ ಬರಮಾಡಿಕೊಳ್ಳುವುದು, ಮಹಿಳೆಯರಿಂದ ಅಂಬಲಿ ಬಿಂದಿಗೆಗಳ ಆಗಮನ, ರಾತ್ರಿ 8ಕ್ಕೆ ಮಹಾಪ್ರಸಾದ, ವಾಲಗ ಹಾಗೂ ಡೊಳ್ಳಿನ ಪದ ಜರುಗಲಿವೆ. ಮೇ 5ರಂದು ಬೆಳಗ್ಗೆ 4ಕ್ಕೆ ಪಲ್ಲಕ್ಕಿ ಉತ್ಸವ, 5ಕ್ಕೆ ತೊಟ್ಟಿಲೋತ್ಸವ ನೆರವೇರಲಿದೆ. 6ಕ್ಕೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಭರಮದೇವರ ಪಲ್ಲಕ್ಕಿ ಬೀಳ್ಕೊಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆ ತಿಳಿಸಿದೆ.