ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು

ಶಿಂದಿಕುರಬೇಟ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕರನ್ನು ಸನ್ಮಾನಿಸಲಾಯಿತು. ಮಹಾಂತೇಶ ಬೆಳಗಲಿ, ಪಿ.ಎಚ್​.ಗೋಸಬಾಳ, ಮಹಾಂತೇಶ್ವರಿ ಹಿರೇಮಠ ಇತರರಿದ್ದರು.
ಶಿಂದಿಕುರಬೇಟ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕರನ್ನು ಸನ್ಮಾನಿಸಲಾಯಿತು. ಮಹಾಂತೇಶ ಬೆಳಗಲಿ, ಪಿ.ಎಚ್​.ಗೋಸಬಾಳ, ಮಹಾಂತೇಶ್ವರಿ ಹಿರೇಮಠ ಇತರರಿದ್ದರು.
Published on
ಗೋಕಾಕ: ಪಾಲಕರು ಮಕ್ಕಳಲ್ಲಿ ಶಿಣದ ಜತೆಗೆ ಸಂಸ್ಕಾರವನ್ನೂ ಬೆಳೆಸಬೇಕು ಎಂದು ಶಿಕ ಮಹಾಂತೇಶ ಬೆಳಗಲಿ ಹೇಳಿದರು.
ತಾಲೂಕಿನ ಶಿಂದಿಕುರಬೇಟ ಗ್ರಾಮದ ಡಾ.ಬಿ.ಆರ್​.ಅಂಬೇಡ್ಕರ್​ ಸಮತಾ ಶಿಣ ಸಮಿತಿ ಮಾಧ್ಯಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಎಂದೂ ಮರೆಯಲಾಗದು. ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಣ ಅಗತ್ಯ ಎಂದರು. ಮುಖ್ಯಶಿಕ್ಷಕ ಪಿ.ಎಚ್​.ಗೋಸಬಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೆ.ವಿ.ಕಡ್ಡಿ, ಎಸ್​.ಎನ್​.ವಡರಟ್ಟಿ, ಆರ್​.ಬಿ.ಕರೆಪ್ಪಗೋಳ, ಕೃಷ್ಣ ತಡವಳೆ ಇತರರಿದ್ದರು. ಮಹಾಂತೇಶ್ವರಿ ಹಿರೇಮಠ ಪ್ರಾರ್ಥಿಸಿದರು. ಜ್ಯೋತಿ ನೀಲಗಾರ ಸ್ವಾಗತಿಸಿದರು. ಪ್ರಿಯಾ ಕಬಾಡಗಿ ಮತ್ತು ಶೋಭಾ ಕೊತ್ತಲ ನಿರೂಪಿಸಿದರು. ಆರತಿ ಹೊಸಪೇಟೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net