ಕಾಮಸಮುದ್ರ: ವಿದ್ಯಾರ್ಥಿಗಳು ಕ್ರೀಡೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮೈಗೂಡಿಸಿಕೊಳ್ಳಬೇಕು. ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ ಎಂದು ೇತ್ರ ಶಿಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ಹೋಬಳಿ ಮಟ್ಟದ 14 ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುವ ಮೂಲಕ ಸದೃಢ ಮನಸ್ಸು ಮತ್ತು ಸದೃಢ ದೇಹವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಪಂ ಮಾಜಿ ಅಧ್ಯ ಆದಿನಾರಾಯಣ (ಕುಟ್ಟಿ) ಮಾತನಾಡಿ, ಕ್ರೀಡೆ ಎನ್ನುವುದು ದೇಹಕ್ಕೆ ಅತ್ಯುತ್ತಮ ವ್ಯಾಯಾಮವಾಗಿದ್ದು, ಸೋಲು&ಗೆಲುವು ಜೀವನದ ಸೋಪಾನಗಳಾಗಿವೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದರು.
ಇಸಿಒಗಳಾದ ಸೋಮಶೇಖರ್, ರು, ಉಪ ಪ್ರಾಂಶುಪಾಲೆ ಬಸವರಾಜಮ್ಮ, ನಾಗರಾಜಚಾರಿ, ಸುರೇಶ ಕರಿಭೀಮ್ ನವರ್, ಮಂಜುನಾಥ, ಬಲಿಗರ ಇದ್ದರು.