ಉತ್ತಮ ಪರಿಸರದಿಂದ ಆರೋಗ್ಯ ವೃದ್ಧಿ

ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಪಿ.ಚನ್ನೇಗೌಡ, ವಿಶುಕುಮಾರ್, ಕೃಷ್ಣ, ಸೌಮ್ಯಾ, ಶೋಭಾ, ಅನಸೂಯಾ ಇತರರಿದ್ದರು.
ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಪಿ.ಚನ್ನೇಗೌಡ, ವಿಶುಕುಮಾರ್, ಕೃಷ್ಣ, ಸೌಮ್ಯಾ, ಶೋಭಾ, ಅನಸೂಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
  • ಬಿಸಿ ಟ್ರಸ್ಟ್‌ನ ಬೆಟ್ಟದಪುರ ಯೋಜನಾ ಕಚೇರಿಯ ಕೃಷಿ ಅಧಿಕಾರಿ ವಿನಾಯಕ್
ಬೆಟ್ಟದಪುರ: ಆರೋಗ್ಯಕರ ಜೀವನ ನಡೆಸಲು ಉತ್ತಮ ಪರಿಸರ ನಿರ್ಮಾಣ ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಬೆಟ್ಟದಪುರ ಯೋಜನಾ ಕಚೇರಿಯ ಕೃಷಿ ಅಧಿಕಾರಿ ವಿನಾಯಕ್ ತಿಳಿಸಿದರು.
ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷಣೆ ಕುರಿತು ಜಾಗೃತರಾದರೆ ಮುಂದಿನ ದಿನಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಬಹುದು. ಈ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮ ಅವರ ಮಾರ್ಗದರ್ಶನದಲ್ಲಿ ಶಾಲಾ- ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡು ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಶಾಲೆ ಮುಖ್ಯಶಿಕ್ಷಕ ಬಿ.ಪಿ.ಚನ್ನೇಗೌಡ ಮಾತನಾಡಿ, ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ ನಿರಂತರವಾಗಿ ನಡೆದಾಗ ಮಾತ್ರ ನಮ್ಮ ಸುತ್ತಮುತ್ತ ಉತ್ತಮ ವಾತಾವರಣ ನಿರ್ಮಿಸಬಹುದು. ಇದರಿಂದ ನಮಗೆ ಉಸಿರಾಡಲು ಶುದ್ಧ ಗಾಳಿ ಸಿಗುವುದಲ್ಲದೆ ಕಾಯಿಲೆಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಇದೇ ವೇಳೆ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ಶಿಕ್ಷಕರಾದ ವಿಶುಕುಮಾರ್, ಕೃಷ್ಣ, ಕೋಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಅಧಿಕಾರಿ ಸೌಮ್ಯಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭಾ, ಒಕ್ಕೂಟದ ಅಧ್ಯಕ್ಷೆ ಅನಸೂಯಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಾಲತಿ ಪಂಡಿತಾರಾಧ್ಯ, ಸೇವಾ ಪ್ರತಿನಿಧಿ ಜ್ಯೋತಿ, ಮುಖಂಡರಾದ ಮಹೇಶ್, ಕುಮಾರ್, ಮಂಜುಳಾ, ರಮ್ಯಾ ಸತೀಶ್‌ಆರಾಧ್ಯ, ಅತಿಥಿ ಶಿಕ್ಷಕರಾದ ಆಶಾ, ಕವನಾ, ರಕ್ಷಿತ್, ಬಸವರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net