ಹದಗೆಟ್ಟಿರುವ ರಸ್ತೆ ಸುಧಾರಣೆ ಮಾಡಿ

ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಸೇಡಂನಲ್ಲಿ ಕರವೇ ಪದಾಧಿಕಾರಿಗಳು ಲೋಕೋಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ಮನವಿ ಸಲ್ಲಿಸಿದರು. ರಾಮಚಂದ್ರ ಗುತ್ತೇದಾರ್​, ಶ್ರೀನಿವಾಸರೆಡ್ಡಿ ಮದನಾ, ಪ್ರವಿಣಕುಮಾರ ಇದ್ದರು.
ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಸೇಡಂನಲ್ಲಿ ಕರವೇ ಪದಾಧಿಕಾರಿಗಳು ಲೋಕೋಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ಮನವಿ ಸಲ್ಲಿಸಿದರು. ರಾಮಚಂದ್ರ ಗುತ್ತೇದಾರ್​, ಶ್ರೀನಿವಾಸರೆಡ್ಡಿ ಮದನಾ, ಪ್ರವಿಣಕುಮಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೇಡಂನಲ್ಲಿ ಕರವೇಯಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಮನವಿ
ಸೇಡಂ: ತಾಲೂಕಿನ ಬಹುತೇಕ ರಸ್ತೆಗಳು ತಗ್ಗು&ಗುಂಡಿಗಳಿಂದ ತುಂಬಿದ್ದು, ಮಳೆಗಾಲ ಇರುವುದರಿಂದ ನೀರಿನಿಂದ ತುಂಬಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್​ ಒತ್ತಾಯಿಸಿದರು.
ಈ ಕುರಿತು ಲೋಕೋಪಯೋಗಿ ಇಲಾಖೆ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಕಾರ್ಯನಿರ್ವಾಹಕ ಅಭಿಯಂತರಗೆ ಮನವಿಪತ್ರ ಸಲ್ಲಿಸಿದ ಅವರು, ಕೊಡ್ಲಾ&ಯಾದಗಿರಿ, ಮದನಾ&ಗುರುಮಠಕಲ್​, ಬೀರನಹಳ್ಳಿ& ಅರೆಬೋಮ್ನಳ್ಳಿ, ಬಿಬ್ಬಳಿ ಕ್ರಾಸ್​& ಕಾಚೂರ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನಿತ್ಯವೂ ಯಾರಾದರೊಬ್ಬರೂ ವಾಹನಗಳಿಂದ ಕೆಳಗೆ ಬಿದ್ದು ಗಾಯಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸುಮಾರು ವರ್ಷಗಳಿಂದ ಸುಧಾರಣೆ ಕಾರ್ಯ ನನೆಗುದಿಗೆ ಬಿದ್ದಿರುವ ಕೊಡ್ಲಾ&ಯಾದಗಿರಿ ರಸ್ತೆಯಲ್ಲಿ ಮೊಳಕಾಲ ಉದ್ದದ ಗುಂಡಿಗಳು ಬಿದ್ದಿವೆ. ಇತ್ತೀಚೆಗೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದು, ಕುಟುಂಬ ಬೀದಿಗೆ ಬಂದಿದೆ. ಹದಗೆಟ್ಟ ರಸ್ತೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ವಾರದೊಳಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಚಂದ್ರಶೇಖರ ಪೂಜಾರಿ, ಶ್ರೀನಿವಾಸರೆಡ್ಡಿ ಮದನಾ, ಭೀಮಯ್ಯ ಗುತ್ತೇದಾರ್​, ಗುಂಡಪ್ಪ ಪೂಜಾರಿ, ಪ್ರವಿಣಕುಮಾರ ಕೊಡ್ಲಾ, ಬಸವರಾಜ ಹೊಸಮನಿ, ಚಂದ್ರಶೇಖರ ಮಡಿವಾಳ, ಮಹೇಶರೆಡ್ಡಿ ಜಾಕನಪಲ್ಲಿ, ಮುಕುಂದ ಬೊಂದೆಂಪಲ್ಲಿ, ರಾಜು ಗುತ್ತೇದಾರ್​, ಸತೀಶ, ಸೋಮನಾಥರೆಡ್ಡಿ, ಶಿವಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net