ಪ್ರತಿ ಎಕರೆಗೆ ರೈತರು ಮುಸುಕಿನ ಜೋಳ (ಮಳೆಯಾಶ್ರಿತ) ಬೆಳೆಗೆ 546 ರೂ., ಮುಸುಕಿನ ಜೋಳ (ನೀರಾವರಿ) ಬೆಳೆಗೆ 617ರೂ. ಪಾವತಿಸುವ ಮೂಲಕ ಜು.31ರೊಳಗೆ ನೋಂದಾಯಿಸತಕ್ಕದ್ದು. ಮಳೆಯಾಶ್ರಿತ ರಾಗಿ ಬೆಳೆಗೆ 404 ರೂ., ಭತ್ತ (ನೀರಾವರಿ) ಬೆಳೆಗೆ 879 ರೂ. ಪಾವತಿಸುವ ಮೂಲಕ ಆ.14ರೊಳಗಾಗಿ ನೋಂದಾಯಿಸತಕ್ಕದ್ದು. ಅಂತೆಯೇ ಭತ್ತ (ಮಳೆಯಾಶ್ರಿತ) ಬೆಳೆಗೆ 612 ರೂ. ಪಾವತಿಸಿ ಜು.31ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ಬೆಳೆ ವಿಮಾ ಸಂಸ್ಥೆ, ಕೃಷಿ ಇಲಾಖೆ/ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಬೆಳೆ ಸಾಲ ನೀಡುವ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.