ಶಂಕರರ ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳಿ

ಚಿತ್ತಾಪುರದ ಬ್ರಾಹ್ಮಣ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಡಾ.ಯೋಗೇಶ ಭಟ್​ ಜೋಶಿ, ಹಣಮೇಶ ಆರ್ಚಕ, ಸೂರ್ಯಕಾಂತ ಧನವಾಡಕರ, ಗಿರೀಶ ಜಾನಿಬ್​, ಆನಂದ ಪಟವಾರಿ, ಗೌತಮ ನಾಯಕ ಇತರರಿದ್ದರು.
ಚಿತ್ತಾಪುರದ ಬ್ರಾಹ್ಮಣ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಡಾ.ಯೋಗೇಶ ಭಟ್​ ಜೋಶಿ, ಹಣಮೇಶ ಆರ್ಚಕ, ಸೂರ್ಯಕಾಂತ ಧನವಾಡಕರ, ಗಿರೀಶ ಜಾನಿಬ್​, ಆನಂದ ಪಟವಾರಿ, ಗೌತಮ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಯೋಗೇಶ ಭಟ್​ ಜೋಶಿ ಕರೆ
  • ಚಿತ್ತಾಪುರದಲ್ಲಿ ತತ್ವಜ್ಞಾನಿಗಳ ದಿನಾಚರಣೆ
ಚಿತ್ತಾಪುರ: ಜಗದ್ಗುರು ಶಂಕರಾಚಾರ್ಯರ ಧಾರ್ಮಿಕ ತತ್ವ, ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಆಧ್ಯಾತ್ಮಿಕ ಪ್ರವಚನಕಾರ ಡಾ.ಯೋಗೇಶ ಭಟ್​ ಜೋಶಿ ಹೇಳಿದರು.
ಬ್ರಾಹ್ಮಣ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಶ್ರೀ ಶಂಕರ ಸೇವಾ ಸಮಿತಿ, ಬ್ರಾಹ್ಮಣ ಸಮಾಜ, ಶ್ರೀ ಶಾರದ ಶಂಕರ ಭಜನಾ ಮಂಡಳಿ, ಆದಿಶಂಕರ ಅಷ್ಟೋತ್ತರ ಮಂಡಳಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಹಾಗೂ ತತ್ವಜ್ಞಾನಿಗಳ ದಿನಾಚರಣೆ, ತೊಟ್ಟಿಲೋತ್ಸವದಲ್ಲಿ ಪ್ರವಚನ ನೀಡಿ, ಶಂಕರರ ಸಂದೇಶ ಪ್ರತಿಯೊಬ್ಬರಿಗೂ ತಲುಪಿಸಬೇಕಿದೆ. ಧರ್ಮ ಹಾದಿಯಲ್ಲಿದ್ದರೆ ಜಗತ್ತಿನ ಅಂಧಕಾರಕ್ಕೆ ದಾರಿ ತೋರಿಸುವ ಬೆಳಕಾಗುತ್ತದೆ. ಹಾದಿ ತಪ್ಪಿದರೆ ಬೆಂಕಿಯಾಗುತ್ತದೆ ಎಂದು ಹೇಳಿದರು.
ಬ್ರಾಹ್ಮಣ ಸಮಾಜ ತಾಲೂಕು ಅಧ್ಯಕ್ಷ ಗಿರೀಶ ಜಾನಿಬ್​, ಶ್ರೀ ಶೃಂಗೇರಿ ಶಾರದಾ ಮಠದ ತಾಲೂಕು ಸಂಚಾಲಕ ಆನಂದ ಪಟವಾರಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ಗೌತಮ ನಾಯಕ, ಪ್ರಮುಖರಾದ ಹಣಮೇಶ ಆರ್ಚಕ, ಸೂರ್ಯಕಾಂತ ಧನವಾಡಕರ, ಅರವಿಂದ ಸರಾಫ್​, ಸುರೇಶ ಸರಾಫ್​, ಕಿಶನರಾವ ಕುಲಕರ್ಣಿ, ಧನರಾಜ ದೇಶಪಾಂಡೆ, ಭೀಮರಾವ ಅಫಜಲಪುರಕರ್​, ವಿಶ್ವನಾಥ ಅಫಜಲಪುರಕರ, ಗೋಪಾಲರಾವ ಅಫಜಲಪುರಕರ, ದೇವಿದಾಸ ಕುಲಕರ್ಣಿ, ಸುರೇಶ ಕುಲಕರ್ಣಿ, ಗುಂಡೇರಾವ ಕುಲಕರ್ಣಿ, ಪ್ರಲ್ಹಾದ ಕುಲಕರ್ಣಿ, ಲ್ಮಕಾಂತ ಅಣಿಕೇರಿ ಇತರರಿದ್ದರು.
ಪ್ರದಿಪ ಕುಲಕರ್ಣಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net