ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶ

ಸಿಂದಗಿ ನಗರದಲ್ಲಿನ ಸೊಂಪೂರ ರಸ್ತೆಯಲ್ಲಿ ಅಕ್ರಮ ಅಕ್ಕಿ ಸಂಗ್ರಹಿಸಿದ್ದ ಟಾಟಾ ಏಸ್ ವಾಹನ ಮತ್ತು ಅಕ್ಕಿಯನ್ನು ವಶಕ್ಕೆ ಪಡೆಯಲಾಯಿತು. ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ, ಪೊಲೀಸ್ ಸಿಬ್ಬಂದಿ ಪ್ರಭುಗೌಡ ಸಾರವಾಡ ಇದ್ದರು.
ಸಿಂದಗಿ ನಗರದಲ್ಲಿನ ಸೊಂಪೂರ ರಸ್ತೆಯಲ್ಲಿ ಅಕ್ರಮ ಅಕ್ಕಿ ಸಂಗ್ರಹಿಸಿದ್ದ ಟಾಟಾ ಏಸ್ ವಾಹನ ಮತ್ತು ಅಕ್ಕಿಯನ್ನು ವಶಕ್ಕೆ ಪಡೆಯಲಾಯಿತು. ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ, ಪೊಲೀಸ್ ಸಿಬ್ಬಂದಿ ಪ್ರಭುಗೌಡ ಸಾರವಾಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖಚಿತ ಮಾಹಿತಿ ಮೇರೆಗೆ ದಾಳಿ
  • ಲಕ್ಷಾಂತರ ಮೌಲ್ಯದ ದಾಸ್ತಾನು ವಶ
ವಿಜಯಪುರ: ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಹಂಚಿಕೆಯಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆದ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, 8,64,757 ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಂತೇಶ ಹನಮಪ್ಪ ಬಾಲಕನವರ ಹಾಗೂ ಕೊಪ್ಪಳದ ಹನುಮೇಶ ದೊಡ್ಡಬಸಪ್ಪ ಗೋನಾಳ ಬಂಧಿತ ಆರೋಪಿಗಳು. ಹಿಟ್ಟಿನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮೂಲಕ ಅಕ್ಕಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಘಟನೆ ವಿವರ: ಏ.25ರಂದು ಸಾಯಂಕಾಲ 4.45ರ ಸುಮಾರಿಗೆ ಹಿಟ್ಟಿನಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯಲ್ಲಿ ಅಕ್ಕಿ ತುಂಬಿದ್ದ ಲಾರಿ ನಿಂತಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವೇಳೆ 32850 ಕೆಜಿ ಅಕ್ಕಿ ತುಂಬಿದ 678 ಚೀಲಗಳು ಸಿಕ್ಕಿದ್ದು, ಅದರ ಮೌಲ್ಯ 7,64,757 ರೂ. ಎಂದು ಅಂದಾಜಿಸಲಾಗಿದೆ. ಟಾಟಾ ಕಂಪನಿಯ ಲಾರಿ ವಶಕ್ಕೆ ಪಡೆಯಲಾಗಿದ್ದು, ಅಕ್ಕಿಯನ್ನು ಗೋದಾಮಿನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಏ.25 ರಂದೇ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಎಎಸ್‌ಐ ಆರ್.ಎನ್. ಪರಗುಳಿ, ಸಿಬ್ಬಂದಿ ಬಸವರಾಜ ಅಂಬಿಗೇರ ಪಾಲ್ಗೊಂಡಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯ ಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"

ಸಿಂದಗಿ ತಹಸೀಲ್ದಾರ್ ನೇತೃತ್ವ ದಾಳಿ

ಸಿಂದಗಿ: ನಗರದ ಸೊಂಪೂರ ರಸ್ತೆಯಲ್ಲಿನ ನ್ಯಾಯಬೆಲೆ ಅಂಗಡಿ ಬಳಿ ಕಾಳಸಂತೆಗೆ ಸಂಗ್ರಹಿಸಲಾಗುತ್ತಿದ್ದ 12.80 ಕ್ವಿಂಟಾಲ್ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಹಾಗೂ ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ, ಟಾಟಾ ಏಸ್‌ನಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ 1.80ಲಕ್ಷ ಅಂದಾಜು ಮೌಲ್ಯದ ವಾಹನ ಹಾಗೂ 30,323 ರೂ. ಮೌಲ್ಯದ 50 ಕೆ.ಜಿ ತೂಕದ 26 ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ವಾಹನ ಬಳಿ ಅಧಿಕಾರಿಗಳು ತೆರಳುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ. ಆಹಾರ ನಿರೀಕ್ಷಕಿ ನೀಡಿದ ದೂರಿನನ್ವಯ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net