ಅಕ್ರಮ ಕಲ್ಲು ಗಣಿಗಾರಿಕೆ ಕಬ್ಬಿನ ಬೆಳೆಗೆ ಕುತ್ತು

ಮುಸ್ತರಿವಾಡಿ ಶಿವಾರದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು.
ಮುಸ್ತರಿವಾಡಿ ಶಿವಾರದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ರೈತನ ದೂರು
  • ಕ್ರಮಕ್ಕೆ ಮನವಿ
ಚಿಟಗುಪ್ಪ: ತಾಲೂಕಿನ ಮುಸ್ತರಿವಾಡಿ ಹಾಗೂ ಉಡಬಾಳ ಗ್ರಾಮದ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು, ಇದರಿಂದ ಕಬ್ಬಿನ ಬೆಳೆ ಹಾನಿಯಾಗುತ್ತಿದೆ ಎಂದು ಗ್ರಾಮದ ರೈತ ಗಿರಿಧರರಡ್ಡಿ ಬಿ.ಜಕ್ಕಾರಡ್ಡಿ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ, ತಹಸೀಲ್ದಾರ್​ ಹಾಗೂ ಮೈನ್ಸ್​ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಹೊರ ರಾಜ್ಯದ ಕೆಲ ವ್ಯಕ್ತಿಗಳು ಯಾವುದೇ ಕಾನೂನುಬದ್ಧ ಪರವಾನಗಿ ಅಥವಾ ಅನುಮತಿ ಪಡೆಯದೆ ತಮ್ಮ ಹೊಲದ ಪಕ್ಕದಲ್ಲೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಕಲ್ಲು ಸ್ಫೋಟಿಸುವುದು ಹಾಗೂ ಭಾರೀ ಯಂತ್ರೋಪಕರಣಗಳನ್ನು ಬಳಸುವುದರಿಂದ ಧೂಳು, ಕಂಪನ ಮತ್ತು ಇತರ ಪರಿಣಾಮಗಳು ಉಂಟಾಗಿ ಹೊಲದಲ್ಲಿರುವ ಕಬ್ಬಿನ ಬೆಳೆ ಹಾನಿಗೊಳಗಾಗಿ ಕೃಷಿ ಉತ್ಪಾದನೆ ಕುಂಠಿತವಾಗಿದ್ದು, ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ ಎಂದು ದೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಂಡು ತಕ್ಷಣ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net