ಬಂಗಾರಪೇಟೆ:ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳೆದಿರುವ ಬೃಹತ್ ಮರಗಳನ್ನು, ಕಟ್ಟಡಗಳಿಗೆ ಹಾನಿ ಉಂಟಾಗುತ್ತಿದೆ ಎಂಬ ನೆಪ ಹೇಳಿ ಎಪಿಎಂಸಿ ವಾರುಕಟ್ಟೆ ಕಾರ್ಯದರ್ಶಿ ಶ್ರೀನಿವಾಸ್ ಅವರು ಕಟಾವು ವಾಡಿ ಸಾಗಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. apmc
ಎಪಿಎಂಸಿ ವಾರುಟ್ಟೆ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾಗಿದ್ದು, ಇಲ್ಲಿನ ಪ್ರತಿಯೊಂದು ಕಾರ್ಯವೈಖರಿಗೂ ಸಂಬಂಧಿಸಿದ ಇಲಾಖಾಧಿಕಾರಿಗಳ ಅನುಮತಿ ಪಡೆಯಬೇಕು. ಸಾರ್ವಜನಿಕರಿಗೆ ಅಡ್ಡಿ ಉಂಟಾಗುವ ಮತ್ತು ಉಪಯೋಗಕ್ಕೆ ಬಾರದ ಮರಗಳನ್ನು ಕಡಿಯಲು ಇಚ್ಚಿಸಿದಲ್ಲಿ ಕಾನೂನು ಬದ್ಧವಾಗಿ ಅರಣ್ಯ ಇಲಾಖೆ ಅನುಮತಿ ಪಡೆದು, ಮರಗಳನ್ನು ತೆರವುಗೊಳಿಸಬೇಕು. ಆದರೆ ಕಾರ್ಯದರ್ಶಿ ಶ್ರೀನಿವಾಸ್ ಕಾನೂನು ಪಾಲನೆ ವಾಡದೆ ಅಕ್ರಮವಾಗಿ ಮರಗಳನ್ನು ಕಟಾವು ವಾಡಿಸುತ್ತಿರುವುದು ಹಲವು ಅನುವಾನಗಳಿಗೆ ಎಡೆಮಾಡಿದೆ.
ಕಾನೂನು ಕ್ರಮ ಜರುಗಿಸದೆ ಅಕ್ರಮವಾಗಿ ಕಡಿದ ಕೋಲಾರ ಮತ್ತು ಎಪಿಎಂಸಿ ಪ್ರಾಂಗಣ ಮುಖ್ಯರಸ್ತೆ ಅಕ್ಕ-ಪಕ್ಕದ ಬೃಹತ್ ಗಾತ್ರದ ಮರಗಳ ತುಂಡುಗಳನ್ನು ಟ್ರ್ಯಾಕ್ಟರ್‌ಗೆ ತುಂಬಿಸಿ ಪ್ರಾಂಗಣದಿಂದ ಹೊರಗಡೆಗೆ ಸಾಗಿಸಲಾಗಿದೆ. ಪ್ರಾಂಗಣದ ಪ್ರಾರಂಭದಲ್ಲಿ ಚೆಕ್‌ಪೋಸ್ಟ್ ಇದ್ದರೂ ಪರಿಶೀಲಿಸದೆ ಹೊರಗಡೆ ಸಾಗಿಸಿದ್ದು, ಅಧಿಕಾರಿಗಳು ಕಾನೂನು ಉಲ್ಲಂನೆ ವಾಡಿರುವುದು ಪ್ರತ್ಯಕ್ಷವಾಗಿ ಕಂಡುಬಂದಿದೆ.
ಹಲವಾರು ವರ್ಷಗಳಿಂದ ಪ್ರಾಂಗಣದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಭಾರಿ ಮೌಲ್ಯದ ಮರಗಳ ಕಟಾವಿಗೆ ಅನುಮತಿ ನೀಡಿದ್ಯಾರು? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆಮಾಡಿವೆ. ಅಕ್ರಮವಾಗಿ ಮರಗಳ ಕಟಾವ್ ವಾಡಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕಟ್ಟಡಗಳಿಗೆ ಹಾನಿಯುಂಟು ಮಾಡುವ ಮರದ ಕೊಂಬೆಗಳನ್ನು ಕಡೆಯಲು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಬೇಕಿಲ್ಲ. ನಮ್ಮ ಇಲಾಖೆಯ ಸರ್ಕ್ಯೂಲರ್‌ನಂತೆ ಮರಗಳ ಕಟಾವ್ ಬಗ್ಗೆ ಕ್ರಮ ತೆಗೆದುಕೊಂಡಿದ್ದೇನೆ. ಬುಡ ಸಮೇತ ಮರಗಳನ್ನು ತೆಗೆಯಲು ವಾತ್ರ ಅರಣ್ಯ ಇಲಾಖೆ ಅನುಮತಿ ಬೇಕು.