ಗುರುವಿನ ಅನುಗ್ರಹವಾದರೆ ಜೀವನದಲ್ಲಿ ಜಯ / TYAMAGONDLU

ತ್ಯಾಮಗೊಂಡ್ಲುವಿನಲ್ಲಿ ಆಯೋಜಿಸಿದ್ದ ಬ್ರಹ್ಮ ಚೈತನ್ಯ ಸದ್ಗುರು ಶ್ರೀಶೇಷಾವಧೂತರ 133ನೇ  ಆರಾಧನಾ ಮಹೋತ್ಸವದಲ್ಲಿ ಹೊಸದುರ್ಗದ ಕುಂಚಗಿರಿ ಮಹಾಸಂಸ್ಥಾನ ಮಠ ಹಾಗೂ ಶೇಷಾವಧೂತರ ಆಶ್ರಮ ಟ್ರಸ್ಟ್​ನ ಪೀಠಾಧ್ಯಕ್ಷ ಡಾ.ಶ್ರೀಶಾಂತವೀರ ಸ್ವಾಮೀಜಿ,  ತಾಲೂಕು ಬಿಜೆಪಿ ಉಪಾಧ್ಯಕ್ಷ ಟಿ.ಎನ್​.ಹನುಮಂತರಾಜು, ತ್ಯಾಮಗೊಂಡ್ಲು ಮಂಡಲ ಅಧ್ಯಕ್ಷ ಅರುಣ್​ ಗೌಡ ಇತರರಿದ್ದರು.
ತ್ಯಾಮಗೊಂಡ್ಲುವಿನಲ್ಲಿ ಆಯೋಜಿಸಿದ್ದ ಬ್ರಹ್ಮ ಚೈತನ್ಯ ಸದ್ಗುರು ಶ್ರೀಶೇಷಾವಧೂತರ 133ನೇ ಆರಾಧನಾ ಮಹೋತ್ಸವದಲ್ಲಿ ಹೊಸದುರ್ಗದ ಕುಂಚಗಿರಿ ಮಹಾಸಂಸ್ಥಾನ ಮಠ ಹಾಗೂ ಶೇಷಾವಧೂತರ ಆಶ್ರಮ ಟ್ರಸ್ಟ್​ನ ಪೀಠಾಧ್ಯಕ್ಷ ಡಾ.ಶ್ರೀಶಾಂತವೀರ ಸ್ವಾಮೀಜಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ಟಿ.ಎನ್​.ಹನುಮಂತರಾಜು, ತ್ಯಾಮಗೊಂಡ್ಲು ಮಂಡಲ ಅಧ್ಯಕ್ಷ ಅರುಣ್​ ಗೌಡ ಇತರರಿದ್ದರು.
Published on
ತ್ಯಾಮಗೊಂಡ್ಲು : ಹರನ ಅನುಗ್ರಹವಾಗದಿದ್ದರೂ ಗುರುವಿನ ಅನುಗ್ರಹವಾದರೆ ಜೀವನದಲ್ಲಿ ಜಯಿಸಬಹುದು, ಗುರುವಿನ ಕೃಪಾಕಟಾಕ್ಷವೊಂದಿದ್ದರೆ ಎಲ್ಲವನ್ನೂ ಪಡೆದುಕೊಳ್ಳಬಹುದು ಎಂದು ಹೊಸದುರ್ಗದ ಶ್ರೀ ೇತ್ರ ಕುಂಚಗಿರಿ ಮಹಾಸಂಸ್ಥಾನಮಠ, ಶೇಷಾವಧೂತರ ಆಶ್ರಮ ಟ್ರಸ್ಟ್​ ಪೀಠಾಧ್ಯಕ್ಷ ಡಾ.ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ದೊಡ್ಡಬೆಲೆ ರಸ್ತೆಯಲ್ಲಿರುವ ಕೆರೆಕೋಡಿ ಬಳಿ ಬ್ರಹ್ಮ ಚೈತನ್ಯ ಸದ್ಗುರು ಶ್ರೀ ಶೇಷಾವಧೂತರ 133ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಪಾದಪೂಜೆ ಸ್ವೀಕರಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಮಾಜದ ಸ್ವಾಸ್ಥ$್ಯ ಕಾಪಾಡುವಲ್ಲಿ ಮತ್ತು ಊರಿನ ಸಂಸತಿ ಹೆಚ್ಚಿಸುವಲ್ಲಿ ಮಠ ಮಾನ್ಯಗಳ ಪಾತ್ರ ದೊಡ್ಡದಿದೆ. ಇಲ್ಲಿ ನಡೆಯುವ ಭಜನೆ, ಧ್ಯಾನದಿಂದ ಮನುಷ್ಯರಿಗೆ ನೆಮ್ಮದಿ ಉಲ್ಲಾಸ ದೊರಕಿ ಉತ್ತಮ ಸಂಸ್ಕಾರ ಸಿಗಲು ಸಹಕಾರ ಸಿಗುತ್ತದೆ. ಯಾವುದೇ ಗುರುಗಳಿಂದ ಜೀವನದಲ್ಲಿ ಮುನ್ನಡೆಯಲು ಸೂಕ್ತ ಮಾರ್ಗದರ್ಶನ ದೊರಕುತ್ತದೆ. ತಾತಪ್ಪನವರ ಗದ್ದುಗೆ ಬಹಳ ಪುರಾತನವಾಗಿದ್ದು, ಸಿದ್ಧ ಸ್ಥಳವಾಗಿ ರೂಪುಗೊಂಡಿದೆ, ಹೆಚ್ಚಿನ ಭಕ್ತರಿಗೆ, ತಾತಪ್ಪನವರನ್ನು ಕೋರಿಕೊಂಡ ಕೆಲಸ ಅತಿ ಶ್ರೀವಾಗಿ ನೆರವೇರುತ್ತಿದೆ ಎಂದು ಹೇಳಿದರು.
ನೆಲಮಂಗಲ ತಾಲೂಕಿನಲ್ಲಿ ಉತ್ತಮ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ, ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಶ್ರದ್ಧೆಯುಳ್ಳ ಭಕ್ತರು ಸದಾಕಾಲ ಭಗವಂತನ ನಾಮಸ್ಮರಣೆಯಲ್ಲಿ ಇರುತ್ತಾರೆ, ಎಲ್ಲರಿಗೂ ಗುರುಗಳ ಆಶೀರ್ವಾದ ಸಿಗಲಿ ಎಂದು ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್​ ಚೌಧರಿ ಹೇಳಿದರು.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಶ್ರಮದಾನದಲ್ಲಿ ಪಟ್ಟಣದ ಶ್ರೀಸಿದ್ದೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಜೆಪಿ ಮುಖಂಡ ನೀಲಯ್ಯ, ಟ್ರಸ್ಟ್​ ಕಾರ್ಯದರ್ಶಿ ಟಿ.ಎಂ.ಹುಚ್ಚಪ್ಪ, ಖಜಾಂಚಿ ಟಿ.ಎಲ್​.ರಾಜು, ಸಹ ಕಾರ್ಯದರ್ಶಿ ಲ್ಮನಾರಾಯಣ್​, ಟಿ.ಆರ್​. ಶೇಷಕುಮಾರ್​, ಮಹಿಮಣ್ಣ, ಪುಟ್ಟಸ್ವಾಮಿ, ನಾರಾಯಣಸ್ವಾಮಿ, ಪ್ರಕಾಶ್​, ತ್ಯಾಮಗೊಂಡ್ಲು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.
ಮನುಷ್ಯನಷ್ಟು ಸ್ವಾರ್ಥಿ ಮತ್ತೊಬ್ಬರಿಲ್ಲ : ಜನ ಎಷ್ಟು ಬೇಕಾದರೂ ಹಣ ನೀಡಲು ಸಿದ್ಧರಿದ್ದಾರೆ. ಆದರೆ, ಅವರ ಬಳಿ ಭಗವಂತನಿಗೆ ನೀಡಲು ಸಮಯವಿಲ್ಲ, ತಾನೇ ಸೃಷ್ಟಿಸಿದ ಪ್ರಾಣಿಗಳಲ್ಲಿ ಮನುಷ್ಯನಷ್ಟು ಸ್ವಾರ್ಥಿ ಯಾರೂ ಇಲ್ಲ, ನರನಿಂದ ನಾರಾಯಣನಾಗುವ ಶಕ್ತಿ ಮನುಷ್ಯನಿಗಿದ್ದರೂ ಸಾಧನೆ ಮಾಡದೇ ನರನಾಗೇ ಜೀವನ ಮುಗಿಸುತ್ತಿದ್ದಾನೆ, ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಡಿಮೆಯಾಗುತ್ತಿದೆ, ಹನಿಗೂಡಿದರೆ ಹಳ್ಳ ಎಂಬಂತೆ ಭಕ್ತರು ನೀಡುವ ಸಣ್ಣ ಕಾಣಿಕೆಯು ಕೂಡ ಮುಂದೆ ದೊಡ್ಡ ಮೊತ್ತವಾಗುತ್ತದೆ. ಆದ್ದರಿಂದ ಎಲ್ಲರೂ ಈ ಉತ್ತಮ ಕಾರ್ಯದಲ್ಲಿ ನೆರವಾಗಿ ಈ ಟ್ರಸ್ಟ್​ನಿಂದ ನಡೆಯುವ ಕಾರ್ಯಕ್ರಮಗಳಿಗೆ ಎಲರೂ ಸಹಕರಿಸಬೇಕು ಎಂದು ಟ್ರಸ್ಟ್​ ಅಧ್ಯಕ್ಷ ಕೆ.ಆರ್​.ಗುರುಪ್ರಕಾಶ್​ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net