ಕ್ಲೀನ್ ಇದ್ದರೆ ಯಾವ ಇಡಿಗೂ ಹೆದರಬೇಕಿಲ್ಲ

ಮುರುಗೇಶ ನಿರಾಣಿ
ಮುರುಗೇಶ ನಿರಾಣಿ
Published on
ಬಾಗಲಕೋಟೆ: ಕ್ಲೀನ್ ಇದ್ದರೆ ಯಾವ ಇಡಿ ಬಂದರೂ ಹೆದರುವ ಅವಶ್ಯಕತೆ ಇಲ್ಲ. ಕುಂಬಳಕಾಯಿ ಕಳ್ಳ ಎಂದರೆ ನೀವೇ ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಾ? ಹೀಗೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.
ಅಬಕಾರಿ ಅಽಕಾರಿ ಮನೆ ಮೇಲೆ ಇಡಿ ದಾಳಿ ಬಗ್ಗೆ ಇಡಿ ರೇಡ್ ನಮ್ಮ ಮೇಲೂ ಆಗಬಹುದು ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಶುಕ್ರವಾರ ಬಾಗಲಕೋಟೆಯಲ್ಲಿ ಮುರುಗೇಶ ನಿರಾಣಿ ಈ ರೀತಿ ಪ್ರತಿಕ್ರಿಯೆ ನೀಡಿದರು.
ಇಡಿ ಸ್ವತಂತ್ರ ಸಂಸ್ಥೆ ಯಾರ ಕೈಗೊಂಬೆಯೂ ಅಲ್ಲ. ಅಽಕಾರಿ ಮೇಲೆ ದಾಳಿಯಲ್ಲಿ ಸಾಕಷ್ಟು ದಾಖಲೆಗಳು ಸಿಕ್ಕಿವೆ. ಪುರಾವೆ ಇಲ್ಲದೇ ಯಾರ ಮನೆಗೂ ಹೋಗಲ್ಲ ಎಂದರು.
ಪ್ರಿಯಾAಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರಿಗೆ ಉಜ್ವಲ ಭವಿಷ್ಯ ಇದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ, ಕೈಗಾರಿಕೆ, ಕೃಷಿ, ಶಿಕ್ಷಣದ ಕಡೆಗೆ ಗಮನ ಕೊಡಲಿ. ಅವರ ತಂದೆ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಜವಾಬ್ದಾರಿ ಇದೆ. ಸಂಘದ ಬಗ್ಗೆ, ತತ್ವ, ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೇ ಮಾತನಾಡಬಾರದು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ :
ಬಿಜೆಪಿಯಲ್ಲಿ ವಿಶೇಷ ಪ್ರಕರಣ ಹೊರತು ಪಡಿಸಿದರೆ ಪ್ರತಿ ಮೂರು ವರ್ಷಕ್ಕೆ ಪದಾಽಕಾರಿಗಳು ಬದಲಾಗುತ್ತಾರೆ. ಸದ್ಯ ವಿಜಯೇಂದ್ರ ಅವರು ಅಧ್ಯಕ್ಷರಾಗಿ ಎರಡುವರೆ ವರ್ಷ ಆಗಿದೆ. ಇನ್ನೂ ಅವಽ ಇದೆ. ಹೀಗಾಗಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲದಿರುವಾಗ ನಾನು ಆಕಾಂಕ್ಷಿ ಅಂತೂ ಅಲ್ಲ.
ವಿಜಯೇಂದ್ರ ವಯಸ್ಸಿನಲ್ಲಿ ಚಿಕ್ಕವರಾಗಿದ್ದರಿಂದ ಕೆಲವರಿಗೆ ಅಸಮಧಾನ ಇದೆ. ಉಳಿದಿರುವ ಸಮಯದಲ್ಲಿ ಅವರು ಹಿರಿಯರ, ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ಕೊಟ್ಟರೆ ಒಳ್ಳೆಯದು. ಸದ್ಯ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ಆಗಿಲ್ಲ. ಇನ್ನೂ ೨-೩ ತಿಂಗಳು ಇದೆ. ಆ ನಂತರದಲ್ಲಿ ರಾಷ್ಟಿçÃಯ ನಾಯಕರು ರಾಜ್ಯ ಅಧ್ಯಕ್ಷರನ್ನು ಬದಲಾವಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡರೆ, ಆಗ ನನಗೆ ಜವಾಬ್ದಾರಿ ಕೊಟ್ಟರೆ ಹಗಲು ರಾತ್ರಿ ರಾಜ್ಯ ಸುತ್ತಾಡಿ ಕೆಲಸ ಮಾಡಲು ಸಿದ್ಧ. ನಾನು ಜಿಲ್ಲಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ವಲ್ಲಭಭಾಯಿ ಪಟೇಲ್ ನಿಽ ಸಂಗ್ರಹ ಸಮಿತಿ ಸಂಚಾಲಕ, ಸಚಿವರಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ವರಿಷ್ಠರು ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಡ್ಡಮತದಾನ ಕಂಡು ಹಿಡಿಯುವುದು ಕಷ್ಟ :
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿರುವುದು ಸ್ಪಷ್ಟ. ಗೌಪ್ಯ ಮತದಾನ ಆಗಿದ್ದರಿಂದ ಮಾಡಿದ್ದು ಯಾರು ಎಂದು ಗುರುತಿಸುವುದು ಕಷ್ಟ. ನೂರು ಕಳ್ಳರು ತಪ್ಪಿಸಿಕೊಂಡರೂ ಒಬ್ಬ ನಿಷ್ಠಾವಂತನಿಗೆ ಶಿಕ್ಷೆ ಆಗಬಾರದು ಎಂಬುವುದು ನಮ್ಮ ನಿಲುವು.ಮುಂದಿನ ದಿನಗಳಲ್ಲಿ ಈ ರೀತಿ ರಿಪೀಟ್ ಆದರೆ ಪಕ್ಷ ಮತ್ತು ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಲಿದೆ. ಆಣೆ, ಪ್ರಮಾಣ ಮಾಡುವಂತೆ ಅಧ್ಯಕ್ಷರು ಎಮೋಷನಲ್ ಆಗಿ ಹೇಳಿದ್ದಾರೆ. ನಂತರ ಅವರೇ ಬೇಜಾರಾಗಿ ಹೇಳಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ. ಅಡ್ಡ ಮತದಾನ ಬರೀ ನಮ್ಮ ರಾಜ್ಯದಲ್ಲಿ ಮಾತ್ರ ಆಗಿಲ್ಲ. ಈ ಹಿಂದೆ ಬೇರೆ ಬೇರೆ ರಾಜ್ಯಗಳು ಹಾಗೂ ಕೇಂದ್ರದಲ್ಲೂ ಆಗಿರುವ ಇತಿಹಾಸ ಇದೆ ಎಂದರು.
ಜೀವನ, ವ್ಯವಹಾರ ಪಕ್ಷದೊಳಗೆ ಬರಬಾರದು:
ಸಿಎಂ ಡಿಕೆಶಿ ಹಾಗೂ ತಮ್ಮ ಮಧ್ಯ ಯಾವುದೇ ವೈಯಕ್ತಿಕ ವ್ಯವಹಾರಿಕ ಸಂಬAಧ ಇಲ್ಲ ಎಂದು ವಿಜಯೇಂದ್ರ ಅವರು ಸ್ಪಷ್ಟೀಕರಣ ವಿಚಾರವಾಗಿ, ವೈಯಕ್ತಿಕ ವಿಷಯ ಹೊರಗಿರಲಿ. ವೈಯಕ್ತಿಕ ಜೀವನ, ವ್ಯವಹಾರ, ಸಂಬAಧಗಳು ಪಕ್ಷದ ಚೌಕಟ್ಟಿನ ಒಳಗೆ ಬರಬಾರದು. ಅದು ಹೊರಗಡೆ ಇರಬೇಕು. ರಾಜಕಾರಣಕ್ಕೆ ತೊಂದರೆ ಆಗಬಾರದು. ವಿಜಯೇಂದ್ರ ಅವರು ಯಾವುದೇ ವ್ಯವಹಾರಿಕ ಸಂಬAಧ ಇಲ್ಲ ಎಂದು ಧರ್ಮಸ್ಥಳದಲ್ಲಿ ನಿಂತು ಸ್ಪಷ್ಟನೆ ಕೊಟ್ಟಿದ್ದು ಒಳ್ಳೆಯದಾಯಿತು. ಇದರಿಂದ ಕೆಲವರಿಗೆ ಇದ್ದ ಸಂಶಯಗಳಿಗೆ ತೆರೆ ಬಿದ್ದು, ಒಂದು ಸ್ಪಷ್ಟನೆ ಸಿಕ್ಕಂತಾಗಿದೆ ಎಂದು ನಿರಾಣಿ ಹೇಳಿದರು.
ಕಾಯ್ದು ನೋಡಬೇಕು:
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸರ್ಕಾರ ಯಾವ ರೀತಿ ನಡೆಯುತ್ತದೆ ಎಂದು ಕಾಯ್ದು ನೋಡಬೇಕಿದೆ. ಸಂಪುಟ ರಚನೆ ಪೂರ್ಣಗೊಳ್ಳಬೇಕು. ಯಾರು ಸಚಿವರಾಗುತ್ತಾರೆ? ಯಾವ ಇಲಾಖೆ ಕೊಡುತ್ತಾರೆ? ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಆಗಬೇಕು. ಇದೆಲ್ಲ ಆದ ಬಳಿಕ ಒಂದು ತಿಂಗಳು ಕಳೆದಾಗ ಸರ್ಕಾರ ಯಾವ ರೀತಿ ಸಾಗುತ್ತದೆ ಎಂದು ಗೊತ್ತಾಗುತ್ತದೆ. ಜಿಲ್ಲಾ ಉಸ್ತುವಾರಿ ಹಾಗೂ ಜವಾಬ್ದಾರಿ ಕೊಡಲು ಇನ್ನೂ ಸಮಯಾವಕಾಶ ಇದೆ. ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ಮುಖ್ಯಮಂತ್ರಿಗಳ ಪರಮಾಽಕಾರ. ನಮ್ಮ ಸಮಾಜ ಅಂತಲ್ಲ. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಕೊಡಿ. ಬೆಂಗಳೂರಿಗೆ ಹೆಚ್ಚಿನ ಸಚಿವರನ್ನು ಸೀಮಿತಗೊಳಿಸದೇ ಹಿಂದುಳಿದಿರುವ ಉತ್ತರಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net