ಬಿಡದಿಯಲ್ಲಿ ಜಮೀನಿಲ್ಲವೆಂದರೆ ಮುಗೀತು...! ನಿಖಿಲ್ ಕುಮಾರಸ್ವಾಮಿಗೆ ಸಚಿವ ಎಂ.ಬಿ. ಪಾಟೀಲ ಸ್ಪಷ್ಟನೆ

ಸಚಿವ ಎಂ.ಬಿ. ಪಾಟೀಲ
ಸಚಿವ ಎಂ.ಬಿ. ಪಾಟೀಲ
Published on

ಪ್ರಮುಖ ಮುಖ್ಯಾಂಶಗಳು

  • ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರೇ ಹೇಳಿದ್ದರು
  • ಬಿಡದಿಯಲ್ಲಿ ಪತ್ನಿ ಹೆಸರಲ್ಲಿ ಜಮೀನಿದೆ ಎಂದಿದ್ದರು
  • ತಮ್ಮ ಜಮೀನು ಇಲ್ಲವೆಂದರೆ ಅಲ್ಲಿಗೆ ಮುಗೀತು
  • ಅನಿತಾ ಕುಮಾರ ಸ್ವಾಮಿ ಸಹೋದರಿ ಇದ್ದಂತೆ
ವಿಜಯಪುರ: ‘ಬಿಡದಿಯಲ್ಲಿ ನನ್ನ ಪತ್ನಿ ಜಮೀನಿದೆ ಎಂದು ಕುಮಾಸ್ವಾಮಿಯವರೇ ಈ ಹಿಂದೆ ಹೇಳಿದ್ದರು, ಅನಿತಾ ಕುಮಾರಸ್ವಾಮಿ ಅವರ ಜಮೀನು ಇಲ್ಲದಿದ್ದರೆ ಸ್ಪಷ್ಟೀಕರಣ ನೀಡಬೇಕಿತ್ತು, ನನ್ನ ತಾಯಿ ಜಮೀನು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಲಿ, ಬಿಡದಿಯಲ್ಲಿ ಅನಿತಾ ಅವರ ಜಮೀನು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರೆ ಮಗೀತು...!’ ಎಂದು ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
‘ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನು ತೆಗೆದುಕೊಂಡಿದ್ದಾರೆಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ನಮ್ಮ ಭೂಮಿ ಇಲ್ಲ ಎಂದರೆ ಇಲ್ಲಿಗೆ ಮುಗಿಯಿತು, ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ವೈಯುಕ್ತಿಕ ದ್ವೇಷವಿಲ್ಲ, ಅವರು ನಮ್ಮ ಸಹೋದರಿ ಇದ್ದಂತೆ, ಇಷ್ಟಾಗಿಯೂ ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುವೆ’ ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಈ ಹಿಂದೆ 2006 ರಲ್ಲಿ ಕುಮಾರಸ್ವಾಮಿ ಸಿಎಂ ಇದ್ದಾಗ ಬಿಡದಿ ಟೌನ್‌ಶಿಪ್ ಯೋಜನೆ ಆರಂಭಿಸಿದ್ದರು. ಕುಮಾರಸ್ವಾಮಿಯವರೇ ನೋಟಿಫಿಕೇಷನ್ ಮಾಡಿದ್ದರು, ಡಿಎಲ್‌ಎಫ್‌ನವರು ಟೌನ್‌ಶಿಪ್ ಮಾಡೋಕೆ ಬಂದರು, ನಂತರ ಐಟಿ ಡಿಪಾರ್ಟಮೆಂಟ್ ಗೆ ಕೊಡೋ ಮಾತುಗಳು ನಡೆದಿದ್ದವು, ಇದು ಕುಮಾರಸ್ವಾಮಿ ಅವರಿಂದಲೇ ಆರಂಭವಾಗಿದ್ದು, ಆಗಲೇ ಕುಮಾರಸ್ವಾಮಿ ಅವರು ಈ ಯೋಜನೆ ಕೈಬಿಡಬೇಕಿತ್ತು, ನೋಟಿಫಿಕೇಷನ್ ರದ್ದುಗೊಳಿಸಬೇಕಿತ್ತು ಎಂದರಲ್ಲದೇ ಈಗ ಡಿ.ಕೆ. ಶಿವಕುಮಾರ ಸಿಎಂ ಆದ ಬಳಿಕ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರಷ್ಟೇ ಎಂದರು.
ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಆರೋಪಕ್ಕೂ ತಿರುಗೇಟು ನೀಡಿದ ಸಚಿವ ಎಂ.ಬಿ. ಪಾಟೀಲರು, ವಿಜಯೇಂದ್ರ ಅವರ ತಂದೆ ಯಡಿಯೂರಪ್ಪ ಅವರೇ ಸಿಎಂ ಆಗಿದ್ದಾಗ ಡಿ ನೊಟಿಫಿಕೇಷನ್ ಮಾಡಲಿಲ್ಲ, 2006 ರಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಇದ್ದಾಗಲೂ ಯೋಜನೆ ಹಿಂಪಡೆಯಲಿಲ್ಲವೇಕೆ? ಇದೆಲ್ಲಾ ಸಂಪೂರ್ಣವಾದ ರಾಜಕಾರಣವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net