ಏ.27ರಿಂದ ಮೇ 10ರವರೆಗೂ ಭರಣಿ ಮಳೆ ಕಾಲಾವಧಿ ಇದ್ದು, ಈ ಸಮಯದಲ್ಲಿ ಉತ್ತಮ ಮಳೆ ಆಗಮನಕ್ಕೆ ಜನರು ಕಾಯುತ್ತಿದ್ದಾರೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ, ಪಕ್ಷಿಗಳಿಗೆ, ಜೀವ ಜಂತುಗಳಿಗೆ ಕುಡಿಯುವ ನೀರ ಸಿಗುವುದರ ಜತೆಗೆ ಮೇವು, ಆಹಾರ ಪದಾರ್ಥಗಳು ಪ್ರಕೃತಿ ದತ್ತವಾಗಿ ಸಿಗುವುದರಿಂದ ಸಮೃದ್ಧ ವಾತಾವರಣ ನಿಮಾರ್ಣ ಆಗುತ್ತದೆ.