ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಲಬುರಗಿ ಜಿಲ್ಲಾದ್ಯಾಂತ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಯಲ್ಲಿ ಬಡ ಜನರು ಹಳ್ಳಿಗಳಿಂದ ಚಿಕಿತ್ಸೆಗೆ ಆಗಮಿಸಿದರೆ ಬಹುತೇಕ ಆಸ್ಪತ್ರೆಯಲ್ಲಿ ವೈದ್ಯರೆ ಇರುವುದಿಲ್ಲಾ ವೈದ್ಯರು ಇದ್ದರೆ ಅಗತ್ಯ ಔಷದಿ ಇರುವುದಿಲ್ಲಾ, ತುರ್ತು ಚಿಕಿತ್ಸೆಗೆ ಬೇಕಾಗುವ ಔಷದಿಗಳು ಕೂಡ ಇರುವುದಿಲ್ಲಾ ಇದರಿಂದ ಅನೇಕ ಬಡ ಜನರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಪರಿಣಾಮ ಮೃತಪಟ್ಟ ಘಟನೆಗಳಿವೆ. ಗ್ಯಾರಂಟಿ ಯೊಜನೆಗೆ ಹಣ ಸಂಗ್ರಹಿಸಲು ಸರ್ಕಾರ ಎಷ್ಟು ಆದ್ಯತೆ ನೀಡುತ್ತಿದ್ದೇಯೋ ಅದರ ಜೊತೆಗೆ ಬಡ ಜನರು ಬದುಕಬೇಕಾದರೆ ಅವರಿಗೆ ಆರೋಗ್ಯವು ಮುಖ್ಯ ಚಿಕಿತ್ಸೆಯೂ ಮುಖ್ಯ ಆದಕಾರಣ ಸರ್ಕಾರ ಗ್ಯಾರಂಟಿ ಯೋಜನೆಗಿಂತ ಮೊದಲ ಆದ್ಯತ್ಯೆ ಆರೋಗ್ಯ ಕ್ಷೇತ್ರಕ್ಕೆ ನೀಡಿ ಪ್ರತಿ ಆಸ್ಪತ್ರೆಯಲ್ಲಿ 24*7 ವೈದ್ಯರು ಕಾರ್ಯನಿರ್ವಹಿಸಬೇಕು ಹಾಗೂ ಎಲ್ಲಾ ರೀತಿಯ ಔಷದಿಗಳು ಪೂರೈಸಬೇಕು ಜನ ಬದುಕಿದರೆ ಮಾತ್ರಾ ಗ್ಯಾರಂಟಿ ಯೋಜನೆಯ ಲಾಭ ಪಡೆಯಬಹುದು ಆದಕಾರಣ ಆರೊಗ್ಯ ಇಲಾಖೆಗೆ ಹೆಚ್ಚಿನ ಆದ್ಯಂತೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.