ನೈಜ ಮತದಾರರನ್ನು ಗುರುತಿಸಿ

ಲೋಕಾಪುರ ಲೋಕೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮುಧೋಳ ಗ್ರಾಮೀಣ ಮಂಡಳದ ಎಸ್‌ಐಆರ್ ಅಭಿಯಾನ ಮಹಾಶಕ್ತಿ ಕೇಂದ್ರದ ಸಂಘಟನಾತ್ಮ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು. ಲೋಕಣ್ಣ ಕತ್ತಿ, ಸಂಗನಗೌಡ ಕಾತರಕಿ, ನಾಗಪ್ಪ ಅಂಬಿ, ವಿ.ಎಂ. ತೆಗ್ಗಿ, ಎಂ.ಎಂ. ವಿರಕ್ತಮಠ ಇತರರಿದ್ದರು.
ಲೋಕಾಪುರ ಲೋಕೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮುಧೋಳ ಗ್ರಾಮೀಣ ಮಂಡಳದ ಎಸ್‌ಐಆರ್ ಅಭಿಯಾನ ಮಹಾಶಕ್ತಿ ಕೇಂದ್ರದ ಸಂಘಟನಾತ್ಮ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು. ಲೋಕಣ್ಣ ಕತ್ತಿ, ಸಂಗನಗೌಡ ಕಾತರಕಿ, ನಾಗಪ್ಪ ಅಂಬಿ, ವಿ.ಎಂ. ತೆಗ್ಗಿ, ಎಂ.ಎಂ. ವಿರಕ್ತಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಕಾರಜೋಳ ಹೇಳಿಕೆ
  • ಎಸ್‌ಐಆರ್ ಅಭಿಯಾನದಲ್ಲಿ ಪಾಲ್ಗೊಳ್ಳಿ
ಲೋಕಾಪುರ: ಬಿಎಲ್‌ಎಗಳು ತಮ್ಮ ತಮ್ಮ ಬೂತ್‌ಗಳಲ್ಲಿ ನಿಜವಾದ ಮತದಾರರನ್ನು ಗುರುತಿಸಿ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಕಾರ್ಯಮಾಡಬೇಕು. ವಿಶೇಷ ಮತದಾರರ ಪರಿಷ್ಕರಣೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಭಾರತೀಯ ಜನತಾ ಪಾರ್ಟಿ ಮುಧೋಳ ಗ್ರಾಮೀಣ ಮಂಡಳದ ಲೋಕಾಪುರ ಪಟ್ಟಣ ಪಂಚಾಯತಿ ಹಾಗೂ ಹೆಬ್ಬಾಳ ಜಿಲ್ಲಾ ಪಂಚಾಯತಿ ಮಹಾಶಕ್ತಿ ಕೆಂದ್ರಗಳ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನ ಬಿ.ಎಲ್.ಎಗಳ ಮಹಾಶಕ್ತಿ ಕೇಂದ್ರದ ಸಂಘಟನಾತ್ಮ ಸಭೆಯಲ್ಲಿ ಮಾತನಾಡಿದರು.
ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗಿನ ಮತದಾರರು, ಮೃತಪಟ್ಟ ಮತದಾರರು, ಎರಡು ಕಡೆ ಇರುವ ಮತದಾರರನ್ನು ತೆಗೆದು ಹಾಕಲು ಹಾಗೂ ನೈಜ ಮತದಾರರನ್ನು ಗುರುತಿಸುವ ಕಾರ್ಯ ಅನುಕೂಲವಾಗುತ್ತದೆ ಎಂದರು.
ಮತದಾನದ ಪಟ್ಟಿಯಲ್ಲಿ ಯಾರ ಹೆಸರು ಇರವುದಿಲ್ಲವೋ ಅಂತಹವರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ಇನ್ನುಳಿದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ವತಃ ಸಿಎಂ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ. ಎಲ್ಲರೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದರು.
ಚುನಾವಣೆ ಮುಂಚೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ನೀಡುತ್ತೇವೆ ಎಂದು ಹೇಳಿ, ಈಗ ಗ್ಯಾರಂಟಿ ಯೋಜನೆಗಳನ್ನು ಏಕೆ ಪರಿಷ್ಕರಣೆ ಮಾಡುತ್ತಿರುವಿರಿ? ಕಾಂಗ್ರೆಸ್ ಪಕ್ಷದವರು ಜನರಿಗೆ ಅನ್ಯಾಯ ಮತ್ತು ಮೋಸ ಮಾಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಪಕ್ಷ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪ್ರಕೋಷ್ಟ ಸಂಯೋಜಕ ಹಾಗೂ ಮುಧೋಳ ಮತಕ್ಷೇತ್ರದ ಎಸ್‌ಐಆರ್ ಪ್ರಭಾರಿ ವೆಂಕಟೇಶ ರಂಗಣ್ಣವರ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ಎಸ್‌ಐಆರ್ ಮತಪಟ್ಟಿ ಶುದ್ಧಿಕರಣ ಮಾಡುವ ಅತ್ಯಂತ ಪ್ರಮುಖ ಪ್ರಕ್ರಿಯಾಗಿದೆ.
ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬುವ ಹಾಗೂ ಸಂವಿಧಾನ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ತರ ಅಭಿಯಾನವಾಗಿದೆ. ಪ್ರಜಾಪ್ರಭುತ್ವಕ್ಕೆ ಮತದಾರರ ಪಟ್ಟಿಯೆ ಆಧಾರಸ್ತಂಭವಾಗಿರುತ್ತದೆ ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ಮುಖಂಡರಾದ ನಾಗಪ್ಪ ಅಂಬಿ, ಬಸವರಾಜ ಮಳಲಿ, ಲೋಕಣ್ಣ ಕತ್ತಿ ಮಾತನಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ವಿವೇಕ ಕಕರಡ್ಡಿ, ಬಿಜೆಪಿ ಮುಖಂಡರಾದ ಶ್ರೀಶೈಲ ಚಿನ್ನನ್ನವರ, ನಾರಾಯಣ (ರಾಜು) ಯಡಹಳ್ಳಿ, ಆರ್.ಟಿ. ಪಾಟೀಲ, ವೈ.ಜಿ. ದಾಸರಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವನಜಾಕ್ಷಿ ಮಂಟೂರ, ಸುಶೀಲಾ ರಂಗನಾಥ, ಲೋಕಣ್ಣ ಕತ್ತಿ, ಎಂ.ಎಂ. ವಿರಕ್ತಮಠ, ವಿ.ಎಂ. ತೆಗ್ಗಿ, ಶಿವಪ್ಪ ಚೌಧರಿ, ಮಾರುತಿ ರಂಗಣ್ಣವರ, ಡಾ. ಶಿವಾನಂದ ಹುದ್ದಾರ, ಯಮನಪ್ಪ ಹೊರಟ್ಟಿ, ವಿರೇಶ ಪಂಚಕಟ್ಟಿಮಠ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಮಾರುತಿ ಕರೆಣ್ಣವರ, ದ್ಯಾವಪ್ಪ ನಾಯಕ ಇತರರಿದ್ದರು.
"

ನನ್ನ 20 ವರ್ಷದ ಅವಧಿಯಲ್ಲಿ ಮುಧೋಳ ಮತಕ್ಷೇತ್ರವು ಅಭಿವೃದ್ಧಿಗೆ ಹೆಸರು ವಾಸಿಯಾಗಿತ್ತು. ಈಗಿನ ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತು, ಊರಿಗೊಂದು ಬಾರ್ ಮತ್ತು ಕ್ಲಬ್‌ಗಳನ್ನು ತೆರೆಯುತ್ತಾ ಮನೆಮುರಿಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕ್ಷೇತ್ರದ ಯುವಕರನ್ನು ದುಶ್ಚಟ್ಟಕ್ಕೆ ದಾಸರಾಗುತ್ತಿದ್ದಾರೆ. ಅವರ ಬಾಳನ್ನು ಹಾಳುಮಾಡುತ್ತಿದ್ದಾರೆ. ಸರಕಾರಿ ಕಚೇರಿಗೆ ಮೀಸಲಿಟ್ಟ ಭೂಮಿಯನ್ನು ತಮ್ಮ ಕಾರ್ಯಕರ್ತರಿಗೆ ನೀಡುತ್ತಿದ್ದಾರೆ. ಸಾರ್ವಜನಿಕರು ಇಂತಹ ಕೆಲಸಗಳಿಗೆ ಆಸ್ಪದ ನೀಡಬಾರದು, ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕರ ಜೊತೆಗೂಡಿ ಬಿಜೆಪಿ ಕಾರ್ಯಕರ್ತರು, ಮುಖಂಡರು ನಿರಂತರ ಹೋರಾಟ ಮಾಡಬೇಕು. ಗೋವಿಂದ ಕಾರಜೋಳ, ಸಂಸದ, ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net