

ಪ್ರಮುಖ ಮುಖ್ಯಾಂಶಗಳು
ಮಹಿಳೆಯರಿಗೆ ‘ಶಕ್ತಿ’ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಿಂಕ್ ಕಾರ್ಡ್ ವಿತರಿಸುವುದಾಗಿ ಘೋಷಣೆ ಮಾಡಿತ್ತು. ಮೂರು ವರ್ಷ ಕಳೆದರೂ ಇನ್ನೂ ಆಧಾರ್ ಕಾರ್ಡ್ ತೋರಿಸಿಯೇ ಓಡಾಡುತ್ತಿದ್ದಾರೆ. ಇದನ್ನೇ ಬಳಸಿಕೊಂಡು ಬೇಕಾಬಿಟ್ಟಿ ಟಿಕೆಟ್ ಹರಿದು ಆದಾಯ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಶಕ್ತಿ ಯೋಜನೆಯ ಪಾರದರ್ಶಕತೆಗಾಗಿ ಶೀಘ್ರವೇ ಮಹಿಳಾ ಪ್ರಯಾಣಿಕರಿಗೆ ಪಿಂಕ್ ಕಾರ್ಡ್ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.