ಗುಬ್ಬಿ ತಾಲೂಕಿನ ಈರಪ್ಪನಹಟ್ಟಿ, ಹೂವಿನಕಟ್ಟೆ, ಮಲಾಮಚಕುಂಟೆ, ಸಣಬನಹಳ್ಳಿಗಳಲ್ಲಿ ಬುಧವಾರ 4 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ವಾತನಾಡಿ, ಕುಣಿಗಲ್ ಉತ್ಸವಕ್ಕೆ ನನ್ನನ್ನು ಆಹ್ವಾನ ವಾಡಿದರು. ನಾನು ಕೂಡ ಹೋಗಿದ್ದೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಅವರು ಹೇವಾವತಿ ವಿಚಾರದ ಬಗ್ಗೆ ವಾತನಾಡಿರುವುದು ನಿಜ. ಆದರೆ ನಾನು ಸಂಪೂರ್ಣ ಬೆಂಬಲ ಕೊಡ್ತೀನಿ ಅಂತ ಎಲ್ಲೂ ಹೇಳಿಲ್ಲ, ಹೇಳುವುದು ಇಲ್ಲ. ಡಿಕೆಶಿ ಅವರು ಈ ವಿಚಾರ ಯಾಕೆ ಹೇಳಿದರು ನನಗಂತೂ ಗೊತ್ತಿಲ್ಲ. ಆದರೆ ನನ್ನ ತಾಲೂಕಿನ ರೈತರ ಹಿತ ಕಾಪಾಡುವ ಉದೇಶದಿಂದ ನಾನೂ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ವಾಡುತ್ತೀನಿ ಎಂದರು.