ನಾನು ನಿನ್ನಂತಲ್ಲ ನೀನು ನನ್ನಂತಲ್ಲ ಮನುಷ್ಯ ಕುಲಂ ತಾನೊಂದೆ ವಲಂ
Photo
Published on:
Copied
Follow Us
ಕಲಬುರಗಿ: ಕಲಬುರಗಿ ನಾಟಕೋತ್ಸವ - 26 ರ ಅಂಗವಾಗಿ ಭಾನುವಾರ ನಗರದ ಎಸ್ ಎಮ್ ಪಂಡಿತ್ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಅರಣ್ಯ ಥಿಯೇಟರ್, ಮುಂಬೈ ಅವರ ಜೋ ಡೂಬಾ ಸೋ ಪಾರ್ ಸಂಗೀತ ನಾಟಕ ವಿಶೇಷವಾಗಿತ್ತು.
ನಾಟಕದ ರಚನೆ ಅಜಿತೇಶ್ ಗುಪ್ತಾ,
ಸಂಗೀತ ಮೋಹಿತ್ ಅಗರ್ವಾಲ್ ಹಾಗೂ ನಿರ್ದೇಶನ ಅಜಿತೇಶ್ ಗುಪ್ತಾ ಮತ್ತು ಮೋಹಿತ್ ಅಗರ್ವಾಲ್ ಅವರದ್ದಾಗಿದ್ದು
ಹಿಂದಿ, ಉರ್ದು ಭಾಷೆಯ ನಡುವೆ ಸೂಫಿ ಶೈಲಿಯ ಹಾಡುಗಳಿಗೆ ಪ್ರೇಕ್ಷಕರು ಮನಸೋತರು ಎಂದರೆ ಅತಿಶಯೋಕ್ತಿಯಾಗಲಾರದು.
'ಜೋ ಡೂಬಾ ಸೋ ಪಾರ್' ಎನ್ನುವ ಈ ಸಂಗೀತಾತ್ಮಕ 'ದಾಸ್ತಾನ್-ಗೋಯಿ' (ಕಥಾ ಪ್ರದರ್ಶನ ಕಲೆ), 14ನೇ ಶತಮಾನದ ಸೂಫಿ ಸಂತ ಹಾಗೂ ಕವಿ ಅಮೀರ್ ಖುಸ್ರೋ ಅವರ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ.
ಇದು ಅವರ ಮತ್ತು ಅವರ ಗುರುಗಳಾದ ನಿಜಾಮುದ್ದೀನ್ ಔಲಿಯಾ ನಡುವಿನ ಗಾಢ ಸಂಬಂಧ ಹಾಗೂ ಅವರಿಂದ ಕವ್ವಾಲಿ ಪ್ರಕಾರವು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ಚಿತ್ರಿಸುತ್ತದೆ. ನೇರ ಕವ್ವಾಲಿ ಗಾಯನದೊಂದಿಗೆ ಹೆಣೆಯಲಾದ ಈ ‘ದಾಸ್ತಾನ್’ನಲ್ಲಿರುವ ಕುತೂಹಲಕಾರಿ ಸಂಗತಿಗಳು ಮತ್ತು ಕಥೆಗಳು ಸೂಫಿ ತತ್ವದ ಸಾರವನ್ನು ಹಾಗೂ ಮಾನವಕುಲಕ್ಕೆ ಎಂದಿಗೂ ಪ್ರಸ್ತುತವಾಗಿರುವ ಪ್ರೀತಿಯ ಶಾಶ್ವತ ಸಂದೇಶದ ಮಹತ್ವವನ್ನು ಸಾರುತ್ತವೆ.
ನಾಳೆ ಫೆಬ್ರವರಿ 23 ರ ಸೋಮವಾರದಂದು ಸಂಜೆ 7:00 ಎಸ್ ಎಮ್ ಪಂಡಿತ್ ರಂಗಮಂದಿರದಲ್ಲಿ ಕಲಾಗಂಗೋತ್ರಿ, ಬೆಂಗಳೂರು ಪ್ರಸ್ತುತ ಪಡಿಸುವ ನಾಟಕ
"ಮುಖ್ಯಮಂತ್ರಿ", ರಚನೆ ಟಿ. ಎಸ್. ಲೋಹಿತಾಶ್ವ, ನಿರ್ದೇಶನ: ಬಿ. ವಿ. ರಾಜಾರಾಂ ಅವರದ್ದಾಗಿರುತ್ತದೆ. ಇದರಲ್ಲಿ ಚಲನಚಿತ್ರ ಖ್ಯಾತನಟ ಮುಖ್ಯಮಂತ್ರಿಚಂದ್ರು ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗಾಗಿ ಬೆಳಿಗ್ಗೆ 11 ಗಂಟೆಗೆ ರಂಗ ಶಂಕರದ 'ಅಹಾ!', ಬೆಂಗಳೂರು ತಂಡದ
ಸರ್ಕಲ್ ಆಫ್ ಲೈಫ್ ಪೊಪೆಟ್ ನಾಟಕ ಪ್ರದರ್ಶನವಾಗಲಿದ್ದು,
ಪರಿಕಲ್ಪನೆ ಟೀಮ್ CoL ಹಾಗೂ
ನಿರ್ದೇಶನ ಸುರೇಂದ್ರನಾಥ್ ಎಸ್ ಅವರದ್ದಾಗಿದೆ.
ರಂಗಭೂಮಿಯ ಸಂವಾದವನ್ನು ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು ರಂಗಾಭಿನಯದ ಸೂಕ್ಷ್ಮತೆಗಳು ವಿಷಯದ ಕುರಿತು ಹಿರಿಯ ರಂಗಕರ್ಮಿ
ಎಚ್. ಕೆ. ಶ್ವೇತಾರಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಶ್ವೇತಾರಾಣಿ ಅವರು ರಂಗ ನಿರ್ದೇಶಕಿ, ನಟಿ ಮತ್ತು ಶಿಕ್ಷಕಿಯಾಗಿದ್ದು, ಇವರ ಕಾಯಕವು ಕಲಾತ್ಮಕ ನಾವೀನ್ಯತೆಯೊಂದಿಗೆ ಪ್ರಬಲ ಸ್ತ್ರೀವಾದಿ ಮತ್ತು ಜಾತಿ-ವಿರೋಧಿ ದೃಷ್ಟಿಕೋನಗಳನ್ನು ಒಳಗೊಂಡಿದೆ.