

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಗಂಡನ ಸಮ್ಮತಿಯಿಲ್ಲದೆ ಆತನ ವೀರ್ಯಾಣು ಬಳಸಿ ಐವಿಎಫ್ ಮೂಲಕ ಗರ್ಭಧಾರಣೆ ಮಾಡಲು ಪತ್ನಿಗೆ ಅವಕಾಶವಿಲ್ಲ ಮತ್ತು ಪತಿಯು ಮಕ್ಕಳನ್ನು ಹೊಂದಲು ಅಸಮರ್ಥ ಎಂದು ಸಾಬೀತಾಗದ ಹೊರತು ದಾನಿಗಳ ವೀರ್ಯಾಣುವನ್ನು ಚಿಕಿತ್ಸೆಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ℹ️
ಆ. 20ಕ್ಕೆ ವಿಚಾರಣೆ ಮುಂದೂಡಿಕೆ
ಇನ್ನೂ ಹುಟ್ಟದ ಮಗುವಿನ ಪರವಾಗಿ ಮಹಿಳೆ ಪ್ರಮಾಣಪತ್ರ ನೀಡಲು ಹೇಗೆ ಸಾಧ್ಯ? 22 ವರ್ಷಗಳ ನಂತರ ಆ ಮಗು ಹಕ್ಕು ಕೇಳಿದರೆ ಏನು ಮಾಡುವುದು? ಎಂಬ ಆಲೋಚನೆಯಿಂದಲೇ ಕಾನೂನಿನಲ್ಲಿ ಗಂಡ-ಹೆಂಡತಿ ಇಬ್ಬರ ಸಮ್ಮತಿಯನ್ನೂ ಕಡ್ಡಾಯಗೊಳಿಸಿದೆ. ವಿಚ್ಛೇದಿತೆ ಅಥವಾ ವಿಧವೆಯರಿಗೆ ಮಾತ್ರ ವಿನಾಯಿತಿ ನೀಡಿದೆ ಎಂದು ಸ್ಪಷ್ಟಪಡಿಸಿತು. ಹೆಚ್ಚುವರಿ ವಾದಾಂಶಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿದ್ದು, ಮುಂದಿನ ವಿಚಾರಣೆ ಆ. 20ಕ್ಕೆ ನಿಗದಿಯಾಗಿದೆ.