ಜೂಜಾಡಲು ಪತ್ನಿ ಹಣ ನೀಡಲಿಲ್ಲವೆಂದು ಪತಿ ಆತ್ಮಹತ್ಯೆ

Husband commits suicide after wife refuses to give him money to gamble
Husband commits suicide after wife refuses to give him money to gamble
Published on
ಚಿಕ್ಕಬಳ್ಳಾಪುರ: ಜೂಜಾಡಲು ಪತ್ನಿ ಹಣ ಕೊಡದ ಹಿನ್ನೆಲೆಯಲ್ಲಿ ಬೇಸರಗೊಂಡ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಲ್ಲಿನ ಎಚ್​ಎಸ್​ ಗಾರ್ಡ್​ನ್​ನಲ್ಲಿರುವ ಕಿಶೋರ್​ (38) ಮೃತ. ಜೂಜಾಡಲು ಹಣ ಕೇಳಿದಾಗ ಪತ್ನಿ ನಿರಾಕರಿಸಿದ್ದಾಳೆ. ಈ ವೇಳೆ ಕಿಶೋರ್​ ಹಣ ಕೊಡದಿದ್ದರೆ ಆತ್ಮಹತ್ಯೆ ಶರಣಾಗುವುದಾಗಿ ಬೆದರಿಸಿದ್ದಾನೆ. ಆದರೆ, ಅದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಬೇಸರಗೊಂಡು ವಿಷ ಸೇವಿಸಿದ್ದಾನೆ. ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net