

ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 19 ವರ್ಷಗಳ ಅನುಭವ ಹೊಂದಿರುವ ಬೆಂಗಳೂರು ಮೂಲದ ‘ಕೆಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ., ನಾಯಂಡಹಳ್ಳಿಯ ಎಂ.ಆರ್. ಕನ್ವೆನ್ಶನ್ ಹಾಲ್‌ನಲ್ಲಿ ಆಯೋಜಿಸಿರುವ 2 ದಿನಗಳ ‘ದಿ ಗ್ರೇಟ್ ಪ್ಲಾಟ್ ಫೆಸ್ಟ್’ಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಮೊದಲ ದಿನ ನೂರಾರು ಜನರು, ಕುಟುಂಬದ ಸದಸ್ಯರೊಂದಿಗೆ ಮೇಳಕ್ಕೆ ಭೇಟಿ ಕೊಟ್ಟು ನಿವೇಶನ ಖರೀದಿಸಿ ಖುಷಿಪಟ್ಟರು. ಭಾನುವಾರ ಮೇಳಕ್ಕೆ ತೆರೆಬೀಳಲಿದೆ.