

ಬೆಂಗಳೂರು: ಮಳೆ ಅಭಾವದಿಂದ ಈಗಾಗಲೇ ಬರ ಎದುರಿಸುತ್ತಿರುವ ಕರುನಾಡಿಗೆ ಕಹಿ ಸುದ್ದಿ ಹೊರಬಿದ್ದಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ರಾಜ್ಯಾದ್ಯಂತ ಇನ್ನಷ್ಟು ಮಳೆ ಕೊರತೆ ಉಂಟಾಗಲಿದೆ. ವಾಡಿಕೆಗಿಂತ ತಾಪಮಾನವೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದುಬಂದಿದೆ.
ಮುಂದಿನ 2 ತಿಂಗಳು ರಾಜ್ಯದಲ್ಲಿ ಮಳೆ ಕೊರತೆ ಸಂಭವನೀಯತೆ ಶೇ.50 ಇದೆ. ಆಗಸ್ಟ್ನಲ್ಲಿ ಮಾತ್ರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆ ಬೀಳಬಹುದು. ಜತೆಗೆ, ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಲಿದೆ. ಹವಾಮಾನ ಅಸಮತೋಲನಕ್ಕೆ ‘ಎಲ್ ನಿನೋ ಕಾರಣ.