ಹುಮನಾಬಾದ್​ ಕಾರ್ಯಸಾಧನೆ ಮಾದರಿ

ಹುಮನಾಬಾದ್​ನಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಸಚಿವ ಬಸವರಾಜ ಪಾಟೀಲ್​ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ರೇಣುಕ ವೀರಗಂಗಾಧರ ಶಿವಾಚಾರ್ಯ, ಮಾಜಿ ಸಚಿವ ರಾಜಶೇಖರ ಪಾಟೀಲ್​, ಎಂಎಲ್​ಸಿಗಳಾದ ಡಾ.ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​ ಇತರರು ಸಮಾಧಿಗೆ ನಮನ ಸಲ್ಲಿಸಿದರು.
ಹುಮನಾಬಾದ್​ನಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಸಚಿವ ಬಸವರಾಜ ಪಾಟೀಲ್​ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ರೇಣುಕ ವೀರಗಂಗಾಧರ ಶಿವಾಚಾರ್ಯ, ಮಾಜಿ ಸಚಿವ ರಾಜಶೇಖರ ಪಾಟೀಲ್​, ಎಂಎಲ್​ಸಿಗಳಾದ ಡಾ.ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​ ಇತರರು ಸಮಾಧಿಗೆ ನಮನ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ರೇಣುಕ ವೀರಗಂಗಾಧರ ಶಿವಾಚಾರ್ಯ ನುಡಿ
  • ಮಾಜಿ ಸಚಿವ ಬಸವರಾಜ ಪಾಟೀಲ್​ ಪುಣ್ಯಸ್ಮರಣೆ
ಹುಮನಾಬಾದ್​: ಮಾಜಿ ಸಚಿವ ದಿ.ಬಸವರಾಜ ಪಾಟೀಲ್​ ಸರಳ ವ್ಯಕ್ತಿತ್ವ, ಜಾತ್ಯತಿತ ಮನೋಭಾವದೊಂದಿಗೆ ಎಲ್ಲರ ಜತೆ ಉತ್ತಮ ಸಂಬಂಧ ಹಾಗೂ ಜಿಲ್ಲೆ ಅಭಿವೃದ್ಧಿಗೆ ಮಾಡಿದ ಕಾರ್ಯಗಳು ಸದಾ ಜನಮಾನಸದಲ್ಲಿ ಉಳಿಯುವಂತೆ ಮಾಡಿವೆ ಎಂದು ಸ್ಥಳಿಯ ಹಿರೇಮಠದ ಶ್ರೀ ರೇಣುಕ ವೀರಗಂಗಾಧರ ಶಿವಾಚಾರ್ಯ ನುಡಿದರು.
ಪಟ್ಟಣದ ಶ್ರೀ ಬಸವರಾಜ ಪಾಟೀಲ್​ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವರಾಜ ಪಾಟೀಲ್​ ಹುಮನಾಬಾದ್​ ಅವರ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಸುದೀರ್ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ದಿವಂಗತರು ಮಾಡಿರುವ ಕಾರ್ಯ ಸಾಧನೆ ಮಾದರಿಯಾಗಿದೆ. ವಿರೋಧಿಗಳಿಗೂ ತಮ್ಮವರೇ ಎಂದು ತಮ್ಮಡೆಗೆ ಸಳೆದುಕೊಳ್ಳುವಂತಹ ಗುಣ ಹೊಂದಿದ್ದ ಅವರು, ಒಬ್ಬ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು ಎಂದರು.
ಕಲಬುರಗಿಯ ಭಂತೆ ಸಂಘಾನಂದ ಮಾತನಾಡಿ, ಬಸವರಾಜ ಪಾಟೀಲರ ಸೇವೆಯನ್ನು ಸ್ಮರಿಸಿದರು.
ಮಾಜಿ ಎಂಎಲ್​ಸಿ ಅರವಿಂದ ಅರಳಿ, ಕೆಪಿಸಿಸಿ ಸಹಕಾರ ಘಟಕದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಹಿರಿಯ ಮುಖಂಡ ಬಸಿರೋದ್ದಿನ್​ ಹಾಲಹಿಪ್ಪರಗಾ ಇತರರು ಮಾತನಾಡಿ, ಬಸವರಾಜ ಪಾಟೀಲರು ರಾಜ್ಯ ಸೇರಿ ಜಿಲ್ಲೆ ಅಭಿವೃದ್ಧಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ರ, ಮಾಜಿ ಸಚಿವ ರಾಜಶೇಖರ ಪಾಟೀಲ್​ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ತಂದೆ ಬಸವರಾಜ ಪಾಟೀಲ್​ ಜಿಲ್ಲೆ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಮಾರ್ಗದರ್ಶನ ಹಾಗೂ ತಮ್ಮೆಲ್ಲರ ಆಶೀರ್ವಾದದಿಂದ ರಾಜಕೀಯದಲ್ಲಿ ನಾನು ಮತ್ತು ವಿಧಾನ ಪರಿಷತ್​ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧ ಎಂದರು.
ಶ್ರೀ ಮುರಂದ್ರ ಶಿವಾಚಾರ್ಯರು, ಎಂಎಲ್​ಸಿ ಭೀಮರಾವ ಪಾಟೀಲ್​, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್​, ಕೆಎಂಎಫ್​ ಸದಸ್ಯ ರೇವಣಸಿದ್ದಪ್ಪ ಪಾಟೀಲ್​, ರಾಚಪ್ಪ ಪಾಟೀಲ್​, ಬಾಬು ಹೊನ್ನಾನಾಯಕ, ಭಾರತಿಬಾಯಿ ಶೇರಿಕಾರ, ಲಕ್ಷ$್ಮಣರಾವ ಬುಳ್ಳಾ, ಶಂಕರ ದೊಡ್ಡಿ, ಕೇಶಪ್ಪ ಬಿರಾದಾರ, ಬಕ್ಕಪ್ಪ ಶೇರಿಕಾರ, ಅಶೋಕ ಪಾಟೀಲ್​, ಪ್ರಕಾಶ ಬತಲಿ, ಪಂಡಿತರಾವ ಚಿದ್ರಿ, ದತ್ತಕುಮಾರ ಚಿದ್ರಿ, ಕಂಟೆಪ್ಪ ದಾನಾ, ಯುಸೂಫ್​ ಅಲಿ ಜಮಾದಾರ್​, ಅಫ್ಸರ್​ಮಿಯಾ, ಓಂಕಾರ ತುಂಬಾ, ಉಮೇಶ ಜಮಗಿ, ಸುರೇಂದ್ರನಾಥ ಹುಡಗಿಕರ್​, ಮಲ್ಲಿಕಾರ್ಜುನ ಮಹೇಂದ್ರಕರ್​, ಅಕ್ಷಯ ಪಾಟೀಲ್​, ಗಣೇಶ ಪಾಟೀಲ್​, ರುದ್ರಂ ಪಾಟೀಲ್​ ಇತರರಿದ್ದರು.
ವಿಧಾನ ಪರಿಷತ್​ ಸದಸ್ಯ ಡಾ.ಚಂದ್ರಶೇಖರ ಪಾಟೀಲ್​ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಬೀದರ್​ ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಅಭಿಷೇಕ ಪಾಟೀಲ್​ ವಂದಿಸಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್​ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ಸಮಾಧಿ ಸ್ಥಳದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ&ವಿಧಾನದಂತೆ ಪೂಜೆ ನೆರವೇರಿತು.

ಗೃಹ ಸಚಿವ ಖರ್ಗೆ ಭಾಗಿ

ಮಾಜಿ ಸಚಿವ ಬಸವರಾಜ ಪಾಟೀಲರ ಸಮಾಧಿ ಸ್ಥಳಕ್ಕೆ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಭೇಟಿ ನೀಡಿ ನಮನ ಸಲ್ಲಿಸಿದರು. ತಂದೆ ಮಲ್ಲಿಕಾರ್ಜುನ ಖರ್ಗೆ ಜತೆ ಮೃತರು ಹೊಂದಿದ್ದ ಆತ್ಮೀಯ ಸಂಬಂಧ ಹಾಗೂ ಉತ್ತಮ ಒಡನಾಟವನ್ನು ಸ್ಮರಿಸಿದರು. ಇದಕ್ಕೂ ಮುನ್ನ ನಿವಾಸಕ್ಕೆ ಆಗಮಿಸಿದ ಸಚಿವರಿಗೆ ರಾಜಶೇಖರ ಪಾಟೀಲ್​ ಸಂವಿಧಾನದ ಪುಸಕ್ತ ನೀಡಿ ಬರಮಾಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net