ಪರಿಸರ ರಕ್ಷಣೆಯಿಂದ ಮನುಕುಲ ಉಳಿವು / ANEKAL

ಆನೇಕಲ್​ ತಾಲೂಕಿನ ಸುಣವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಪ್ರೊ.ವೆಂಕಟಸ್ವಾಮಿ ರೆಡ್ಡಿ, ಆಚಾರ್ಯ, ಮೋಹನ್​ ರೆಡ್ಡಿ, ಮಂಜುಳಾ, ಗುರೂಜಿ ಪ್ರಕಾಶ್​, ವಲಯ ಅರಣ್ಯಾಧಿಕಾರಿ ಅಣ್ಣಿಗೇರಿ ಸ್ವಾಮೀಜಿ ಶಿವಶಂಕರ್​ ರೆಡ್ಡಿ, ನಾರಾಯಣ ರೆಡ್ಡಿ ಇತರರು ಇದ್ದರು.
ಆನೇಕಲ್​ ತಾಲೂಕಿನ ಸುಣವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಪ್ರೊ.ವೆಂಕಟಸ್ವಾಮಿ ರೆಡ್ಡಿ, ಆಚಾರ್ಯ, ಮೋಹನ್​ ರೆಡ್ಡಿ, ಮಂಜುಳಾ, ಗುರೂಜಿ ಪ್ರಕಾಶ್​, ವಲಯ ಅರಣ್ಯಾಧಿಕಾರಿ ಅಣ್ಣಿಗೇರಿ ಸ್ವಾಮೀಜಿ ಶಿವಶಂಕರ್​ ರೆಡ್ಡಿ, ನಾರಾಯಣ ರೆಡ್ಡಿ ಇತರರು ಇದ್ದರು.
Published on
ಆನೇಕಲ್ : ನಾವು ಪರಿಸರದೊಂದಿಗೆ ಬದುಕಬೇಕೆ ಹೊರತು ವೈಯಕ್ತಿಕ ಆಸ್ತಿ, ಆಭರಣಗಳೊಂದಿಗಲ್ಲ ಎಂದು ಗಸ್ತು ಅರಣ್ಯಪಾಲಕ ಟಿ.ವೈ.ಜನಗೇರಿ ಹೇಳಿದರು.
ಸವೋರ್ದಯ ಯೋಗ ಫೌಂಡೇಷನ್​ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶಯದಲ್ಲಿ ತಾಲೂಕಿನ ಸುಣವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಮಾಡಿದ್ದೇವೆ. ಪರಿಸರ ರಕ್ಷಿಸಿಕೊಂಡರೆ ಮನು ಕುಲಕ್ಕೆ ಒಳಿತಾಗುತ್ತದೆ ಎಂದರು.
ಆಚಾರ್ಯ ಶಿವಶಂಕರ ರೆಡ್ಡಿ ಮಾತನಾಡಿ, ಆಹಾರ ಸರಪಳಿಯು ಬಹಳ ದುರ್ಬಲವಾಗಿರುವುದರಿಂದ ಅನೇಕ ಕಾಯಿಲೆಗಳು ಮನುಷ್ಯನನ್ನು ಕಾಡುತ್ತಿವೆ. ಇದಕ್ಕೆಲ್ಲ ಪರಿಸರ ನಾಶವೇ ಕಾರಣ ಎಂದರು.
ಸವೋರ್ದಯ ಯೋಗ ಫೌಂಡೇಷನ್​ನ ಸಂಸ್ಥಾಪಕ ಗುರು ಶ್ಯಾಮ್​ ಜಿ ಮಾತನಾಡಿ, ಮುಂದಿನ ದಿನಗಳಲ್ಲಿ ಯೋಗ ಧ್ಯಾನ ಪ್ರಾಣಾಯಾಮಗಳು ಸಮಾಜಕ್ಕೆ ಸಂಜೀವಿನಿಯಾಗಬಲ್ಲದು ಎಂದು ನುಡಿದರು.
ಪ್ರೊ.ಬೈರೇಗೌಡ, ಪ್ರೊ.ಅಂಬಿಕಾ, ಪ್ರೊ.ರಮೇಶ್​, ಪ್ರೊ.ಸತೀಶ್​, ಪ್ರೊ.ಆನಂದ್​, ಪ್ರೊ.ಪಂಪಾಪತಿ, ಬಳಗಾರನಹಳ್ಳಿ ಗಂಗಪ್ಪ, ಚಿತ್ರ ನಿರ್ದೇಶಕರಾದ ಗುಡ್ಡನಹಳ್ಳಿ ಮುನಿರಾಜಪ್ಪ, ಇಚಂಗೂರು ಶಿವಣ್ಣ, ಚಿಲಿಪಿಲಿ ಸಂತೋಷ್​, ಕಂಜರ ಪ್ರಕಾಶ್​, ಡೋಲಾರ್​ ಹನುಮಂತ, ಕೋಲಾಟ ವೆಂಕಟಸ್ವಾಮಿ, ಸಂಚನಾ, ಪ್ರಕಾಶ್​, ಪಾಲ್ಗುಣಿ ಪ್ರಕಾಶ್​, ಚಂದ್ರ, ಸಿಂಧು, ಕಸಾಪ ಅಧ್ಯಕ್ಷ ಆದೂರು, ಪ್ರಕಾಶ್​ ಅಪ್ಸರ ಆಲಿಖಾನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net