ಲವ್ ಜಿಹಾದ್ ಕೂಪದಲ್ಲಿ ಹುಬ್ಬಳ್ಳಿ ಯುವತಿಯರು; 'ಕೇರಳ ಸ್ಟೋರಿ 2' ಬೆನ್ನಲ್ಲೇ ನೈಜ ಘಟನೆ ಬೆಳಕಿಗೆ!

ಲವ್ ಜಿಹಾದ್ ಕೂಪದಲ್ಲಿ ಹುಬ್ಬಳ್ಳಿ ಯುವತಿಯರು
ಲವ್ ಜಿಹಾದ್ ಕೂಪದಲ್ಲಿ ಹುಬ್ಬಳ್ಳಿ ಯುವತಿಯರು
Published on

ಪ್ರಮುಖ ಮುಖ್ಯಾಂಶಗಳು

  • ಲವ್ ಜಿಹಾದ್ ಕೂಪದಲ್ಲಿ ಹುಬ್ಬಳ್ಳಿ ಯುವತಿಯರು
  • ಮೂವರು ಸಂತ್ರಸ್ತೆಯರ ಅಳಲು
  • ಕೇರಳ ಸ್ಟೋರಿ-2 ಬೆನ್ನಲ್ಲೇ ನೈಜ ಘಟನೆ ಬೆಳಕಿಗೆ

ಹುಬ್ಬಳ್ಳಿ: ‘ನಯವಾದ ಮಾತುಗಳಿಂದ ಬ್ರೇನ್ ವಾಷ್ ಮಾಡಿದರು, ಪ್ರೀತಿಯ ಬಲೆಯಲ್ಲಿ ಬೀಳಿಸಿದರು. ಆದರೆ, ಮದುವೆಯಾದ ಮೇಲೆ ಎಲ್ಲವೂ ಬದಲಾಯಿತು. ಬುರ್ಕಾ ಧರಿಸಬೇಕು, ಕುರಾನ್ ಪಠಿಸಬೇಕು, ಮತಾಂತರಗೊಳ್ಳಬೇಕು ಎಂದೆಲ್ಲ ಒತ್ತಡ ಹಾಕಿ ಹಿಂಸೆ ಕೊಡಲಾರಂಭಿಸಿದರು’. ಇದು... ಲವ್ ಜಿಹಾದ್​ಗೆ ಸಿಲುಕಿದ ಮೂವರು ಸಂತ್ರಸ್ತೆಯರ ಅಳಲು. 

ಕಳೆದ ವಾರ ಬಿಡುಗಡೆಯಾದ 'ಕೇರಳ ಸ್ಟೋರಿ-2' ಸಿನಿಮಾದಲ್ಲಿ ತೋರಿಸಿರುವಂತಹ ನೈಜ ಘಟನೆಗಳು ತಮ್ಮ ಬದುಕಲ್ಲೂ ನಡೆದಿವೆ ಎಂದು ಮೂವರು ಸಂತ್ರಸ್ತೆಯರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಮಗಾದ ಮೋಸವನ್ನು ಬಿಚ್ಚಿಟ್ಟರು. ‘ನಾನು ಬ್ಯೂಟಿಷಿಯನ್ ಆಗಿದ್ದೆ. ಮುಸ್ಲಿಂ ಯುವಕನೊಂದಿಗೆ ಪ್ರೀತಿ ಮೂಡಿತ್ತು. ಬೇರೆ ಧರ್ಮದ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ ನಮ್ಮಲ್ಲಿ ಇಲ್ಲ, ಬುರ್ಕಾ ಹಾಕಬೇಕೆಂದೇನೂ ಇಲ್ಲ. ಕೆಲಸಕ್ಕೆ ಹೋಗಬಹುದು ಎಂದು ನಂಬಿಸಿದ್ದ. ಆದರೆ, ಮದುವೆಯಾದ ತಿಂಗಳಲ್ಲೇ ಕೆಲಸಕ್ಕೆ ಹೋಗಬಾರದು, ಮನೆಯಲ್ಲೇ ಇರಬೇಕು, ದಿನಕ್ಕೆ ಐದು ಬಾರಿ ಕುರಾನ್ ಪಠಿಸಬೇಕು ಎಂದೆಲ್ಲ ಹಿಂಸೆ ಕೊಟ್ಟರು. ಈಗ ಶ್ರೀರಾಮ ಸೇನೆಯ ಸಂಪರ್ಕಕ್ಕೆ ಬಂದು ಆತನಿಂದ ದೂರ ಬಂದಿದ್ದೇನೆ’ ಎಂದು 22 ವರ್ಷದ ಯುವತಿ ಅಳಲು ತೋಡಿಕೊಂಡಳು. 

ಇನ್ನೊಬ್ಬ ಮಹಿಳೆ ಮಾತನಾಡಿ, ‘ಮನೆಯ ಸಮೀಪದ ಯುವಕ ಪ್ರೀತಿ ಮಾಡುತ್ತಿದ್ದ. ಈ ಕುರಿತು ಅವರ ಧರ್ಮಗುರುವೊಬ್ಬರು ಬಂದು ನಿಮ್ಮ ಮದುವೆ ಮಾಡಿಸುತ್ತೇನೆ. ಇಲ್ಲಿಂದ ಓಡಿ ಹೋಗುವಂತೆ ಪುಸಲಾಯಿಸಿದ. ಇಲ್ಲಿಂದ ಆಂಧ್ರಪ್ರದೇಶಕ್ಕೆ ಹೋದೆವು. ಇವರ ನಿಜಾಂಶ ಗೊತ್ತಾದ ನಂತರ ಮನೆಯವರಿಗೆ ಕರೆ ಮಾಡಿ ವಾಪಸ್ ಬಂದಿದ್ದೇನೆ. ನನಗೆ ಮೋಸ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ’ ಎಂದರು. ‘ಮುಸ್ಲಿಂ ಯುವಕ ನಯವಾದ ಮಾತುಗಳಿಂದ ಬ್ರೇನ್ ವಾಷ್ ಮಾಡಿದ. ತಂದೆ-ತಾಯಿ, ಮನೆಯವರ ವಿರುದ್ಧ ಹೋಗುವಂತೆ ಪ್ರಚೋದಿಸಿದ. 

3-4 ತಿಂಗಳ ಹಿಂದೆ ಅಪ್ರಾಪ್ತೆಯಾಗಿದ್ದ ನನ್ನನ್ನು ಗೋವಾ, ಮೈಸೂರು, ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ಮನೆಯವರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಮೇಲೆ, ಮನೆಯವರ ಚಿತ್ರ ಹಿಂಸೆ ತಾಳಲಾರದೆ ನನ್ನೊಂದಿಗೆ ಓಡಿ ಬಂದಿದ್ದೇನೆಂದು ಠಾಣೆಯಲ್ಲಿ ಹೇಳು ಎಂದಿದ್ದ. ಕುಂದಗೋಳದ ಕಾಂಗ್ರೆಸ್ ಮುಖಂಡರೊಬ್ಬರು ಪೊಲೀಸ್ ಠಾಣೆಯಲ್ಲಿ ಮಧ್ಯಸ್ಥಿಕೆ ವಹಿಸಿ ನನಗೆ 18 ವರ್ಷಗಳಾದ ಮೇಲೆ ಹುಡುಗನೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿದ್ದರು’ ಎಂದು 18 ವರ್ಷದ ಯುವತಿ ತಿಳಿಸಿದಳು.

"

ಲವ್ ಜಿಹಾದ್ ದೇಶವನ್ನು ಇಸ್ಲಾಮೀಕರಣಗೊಳಿಸುವ ಷಡ್ಯಂತ್ರದ ಭಾಗವಾಗಿದೆ. ಇದಕ್ಕೆ ಅಂಕುಶ ಹಾಕಲು ಕಾನೂನು ರಚನೆಯಾಗಬೇಕು.

ನನ್ನ ಮಗಳನ್ನು (ನೇಹಾ) ಹತ್ಯೆಗೈದ ಫಯಾಜ್​ಗೆ ಜೈಲಿನಲ್ಲಿ ವಿಐಪಿ ಆತಿಥ್ಯ ಸಿಗುತ್ತಿದೆ. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಪ್ರಕರಣವನ್ನು ಸಿಬಿಐ, ಎನ್​ಐಎನಿಂದ ತನಿಖೆಗೆ ಒಳಪಡಿಸಬೇಕು.

| ನಿರಂಜನ ಹಿರೇಮಠ, ಹು-ಧಾ ಮಹಾನಗರ ಪಾಲಿಕೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net