ಹೊಯ್ಸಳಕಟ್ಟೆ ಸಹಕಾರ ಸಂಕ್ಕೆ 16 ಲ ರೂ. ನಿವ್ವಳ ಲಾಭ General Meeting

ಚಿಕ್ಕನಾಯಕನಹಳ್ಳಿ General Meeting ತಾಲೂಕಿನ ಹೊಯ್ಸಳಕಟ್ಟೆ ಡೇರಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬುಳ್ಳೆನಹಳ್ಳಿ ಶಿವಪ್ರಕಾಶ್​ ಉದ್ಘಾಟಿಸಿದರು. ಸಂದ ಅಧ್ಯ ರಮೇಶ್​, ಉಪಾಧ್ಯ ತಿಮ್ಮಯ್ಯ, ಜಿಲ್ಲಾ ಒಕ್ಕೂಟ ಸಹಾಯಕ ವ್ಯವಸ್ಥಾಪಕ ಜಿ.ಎಸ್​.ಮೋಹನ್​ ಕುಮಾರ್​, ವಿಸ್ತರಣಾಧಿಕಾರಿ ಎಂ.ಬಿ.ಸಿದ್ದಲಿಂಗಯ್ಯ ಇತರರಿದ್ದರು.
ಚಿಕ್ಕನಾಯಕನಹಳ್ಳಿ General Meeting ತಾಲೂಕಿನ ಹೊಯ್ಸಳಕಟ್ಟೆ ಡೇರಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬುಳ್ಳೆನಹಳ್ಳಿ ಶಿವಪ್ರಕಾಶ್​ ಉದ್ಘಾಟಿಸಿದರು. ಸಂದ ಅಧ್ಯ ರಮೇಶ್​, ಉಪಾಧ್ಯ ತಿಮ್ಮಯ್ಯ, ಜಿಲ್ಲಾ ಒಕ್ಕೂಟ ಸಹಾಯಕ ವ್ಯವಸ್ಥಾಪಕ ಜಿ.ಎಸ್​.ಮೋಹನ್​ ಕುಮಾರ್​, ವಿಸ್ತರಣಾಧಿಕಾರಿ ಎಂ.ಬಿ.ಸಿದ್ದಲಿಂಗಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬುಳ್ಳೆನಹಳ್ಳಿ ಶಿವಪ್ರಕಾಶ್​ ಮಾಹಿತಿ
ಹೊಯ್ಸಳಕಟ್ಟೆ: ಹಾಲು ಉತ್ಪಾದಕರ ಸಹಕಾರ ಸಂವನ್ನು 5 ಸಾವಿರ ಲೀಟರ್​ ಸಾಮರ್ಥ್ಯದ General Meeting ಬಲ್ಕ್​ ಮಿಲ್ಕ್​ ಕೂಲರ್​ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರೀವೇ ಜಿಲ್ಲಾ ಹಾಲು ಒಕ್ಕೂಟದ ಮಹಾಪ್ರಬಂಧಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬುಳ್ಳೆನಹಳ್ಳಿ ಶಿವಪ್ರಕಾಶ್​ ಭರವಸೆ ನೀಡಿದರು.
ಹೊಯ್ಸಳಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಡೇರಿಯಲ್ಲಿ ನಿತ್ಯ ಸುಮಾರು 2,900 ಲೀಟರ್​ ಹಾಲು ಸಂಗ್ರಹವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 16 ಲ ರೂ. ನಿವ್ವಳ ಲಾಭಗಳಿಸಿದ್ದು, ಉತ್ಪಾದಕರಿಗೆ 6.83 ಲಕ್ಷ ಬೋನಸ್​ ನೀಡಲು ಕ್ರಮ ಕೈಗೊಂಡಿರುವುದು ಸಂದ ಉತ್ತಮ ಕಾರ್ಯನಿರ್ವಹಣೆಗೆ ಸಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಜಿಲ್ಲೆಯಲ್ಲಿ ನಿತ್ಯ ಸುಮಾರು 12 ಲ ಲೀಟರ್​ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದ್ದು, ಜಿಲ್ಲೆಯಲ್ಲೆ ಚಿಕ್ಕನಾಯಕನಹಳ್ಳಿ ಹಾಲಿನ ಗುಣಮಟ್ಟಕ್ಕೆ ಹೆಸರಾಗಿದೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸುಮಾರು 50 ಲ ರೂ. ಹಾಗೂ ತಿಂಗಳಿಗೆ 15 ಕೋಟಿ ರೂ.ನಷ್ಟು ಹಣ ನೇರವಾಗಿ ಪಾವತಿಯಾಗುತ್ತಿದ್ದು, ಇದು ಗ್ರಾಮೀಣ ಆರ್ಥಿಕತೆಗೆ ಬಲ ತುಂಬುವ ಪ್ರಮುಖ ವಹಿವಾಟಾಗಿದೆ ಎಂದರು.
ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಒಕ್ಕೂಟದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರ ಆಕಸ್ಮಿಕ ಮರಣಕ್ಕೆ 50 ಸಾವಿರ ರೂ. ಧನಸಹಾಯ, ಹಸುಗಳ ಮರಣಕ್ಕೆ ವಿಮೆ ಯೋಜನೆಯಡಿ 50 ಸಾವಿರ ರೂ., ಹುಲ್ಲಿನ ಗೋದಾಮಿಗೆ ಅಗ್ನಿ ಅವಡ ಸಂಭವಿಸಿದರೆ 15 ಸಾವಿರ ರೂ., ಪಡ್ಡೆ ರಾಸುಗಳ ಮರಣಕ್ಕೆ 15 ಸಾವಿರ ರೂ. ಹಾಗೂ ಹಾಲು ಉತ್ಪಾದಕರ ಆಸ್ಪತ್ರೆ ಚಿಕಿತ್ಸಾ ವೆಚ್ಚ 1 ಲ ರೂ. ಮೀರಿದಲ್ಲಿ 25 ಸಾವಿರ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರ ಮಕ್ಕಳ ಉನ್ನತ ಶಿಣಕ್ಕೆ ಉತ್ತೇಜನವಾಗಿ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಹಾಗೂ ಎಂಬಿಬಿಎಸ್​ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಪೋತ್ಸಾಹಧನ ನೀಡಲಾಗುತ್ತಿದೆ ಎಂದರು.
ಕಾರ್ಯದರ್ಶಿ ಎಚ್​.ಚಿದಾನಂದಮೂರ್ತಿ, ನಾಗಲಿಂಗಪ್ಪ, ಹಾಲು ಪರೀಕ ಲಕ್ಕೇನಹಳ್ಳಿ ನಾಗೇಶ್​, ಸಹಾಯಕ ವೆಂಕಟೇಶ್​, ಯುವರಾಜ್​, ಲೋಕಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net